ಬೆಂಗಳೂರು: ಲಾಕ್ಡೌನ್ನಿಂದ ಹಿರಿಯ ನಾಗರಿಕರ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದುಕೊಳ್ಳಲಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ನಗರ ಪೊಲೀಸರು ವೈದ್ಯಕೀಯ ಚಿಕಿತ್ಸೆಗಾಗಿ 250 ಸಂಖ್ಯೆಯ ಹೊಯ್ಸಳ ವಾಹನ ಸೇವೆ ಒದಗಿಸಲು ಮುಂದಾಗಿದ್ದಾರೆ.
ಮಧುಮೇಹ, ಶುಗರ್ ಸೇರಿದಂತೆ 15 ದಿನಕ್ಕೊಮ್ಮೆ ಆಸ್ಪತ್ರೆಗೆ ತೆರಳಿ ತಪಾಸಣೆಗೆ ಒಳಗಾಗುವ ಹಿರಿಯ ನಾಗರಿಕರಿಗೆ ಲಾಕ್ಡೌನ್ ಅಡ್ಡಿಯಾಗಿ ಪರಿಣಮಿಸಿದೆ. ಹೀಗಾಗಿ ಸೂಕ್ತ ಚಿಕಿತ್ಸೆ ಇಲ್ಲದೆ ನೋವು ಅನುಭವಿಸುತ್ತಿದ್ದಾರೆ. ಈಗಾಗಲೇ ತಮ್ಮ ನೋವಿನ ಕುರಿತಂತೆ ಡಯಲ್ 100ಕ್ಕೆ 4,500 ಕರೆಗಳು ಬಂದಿವೆ.
ತುರ್ತು ವೈದ್ಯಕೀಯ ಚಿಕಿತ್ಸೆ ಬೇಕಾದಲ್ಲಿ ನಗರದಲ್ಲಿ 250 ಹೊಯ್ಸಳ ಸೇವೆ ಒದಗಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಟ್ವೀಟ್ನಲ್ಲಿ ತಿಳಿಸಿದ್ದಾರೆ.