ಬೆಂಗಳೂರು: ಕೊರೊನಾ ಮಹಾಮಾರಿ ನಡುವೆಯೇ ಇಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) 2020-21 ನೇ ಸಾಲಿನ ಬಜೆಟ್ ಮಂಡಿಸಿದೆ.
ಪೌರಕಾರ್ಮಿಕರು, ಮಾಲಿಗಳು, ಮಕ್ಕಳ ಶಿಕ್ಷಣಕ್ಕೆ ಸಂಬಂಧಿಸಿದಂತೆ 5 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ. ಜೊತೆಗೆ ಪೌರ ಕಾರ್ಮಿಕರಿಗೆ ಮಧ್ಯಾಹ್ನದ ಬಿಸಿಯೂಟಕ್ಕಾಗಿ 15 ಕೋಟಿ ರೂ. ಹಾಗೂ ಪೌರಕಾರ್ಮಿಕರ, ಎಸ್ ಸಿ- ಎಸ್ ಟಿ, 4 ನೇ ದರ್ಜೆಯ ಖಾಯಂ ಗುತ್ತಿಗೆ ನೌಕರರ ಕಲ್ಯಾಣಕ್ಕೆ 10 ಕೋಟಿ ರೂ. ಮೀಸಲಿಡಲಾಗಿದೆ. ಪೌರಕಾರ್ಮಿಕರು ವೈಯಕ್ತಿಕ ಮನೆ ಹೊಂದಲು 36 ಕೋಟಿ, ಎಸ್ಟಿ- ಎಸ್ಸಿ ಯವರು ವೈಯಕ್ತಿಕ ಮನೆ ಹೊಂದಲು ಪ್ರತಿ ವಾರ್ಡ್ ಗೆ 5 ಮನೆಯಂತೆ 49.50 ಕೋಟಿ ಅನುದಾನ ಮೀಸಲಿಡಲಾಗಿದೆ.
ಇನ್ನು ಕೊರೊನಾ ವೈರಸ್ ತಡೆಗಟ್ಟಲು ಪ್ರತಿ ವಾರ್ಡ್ಗೆ 25 ಲಕ್ಷದಂತೆ ಒಟ್ಟು 49.50 ಕೋಟಿ ರೂ.ಗಳನ್ನು ಕೊರೊನಾ ವಿಪತ್ತು ನಿಧಿಗೆ ವರ್ಗಾವಣೆ ಮಾಡಲಾಯಿತು. ಗೋ ಶಾಲೆಗಳಿಗೆ ಮೇವು ಒದಗಿಸಲು 50 ಲಕ್ಷ ರೂ., ವಾಯು ಶುದ್ಧೀಕರಣ ಯಂತ್ರಗಳ ಸ್ಥಾಪನೆಗೆ 1 ಕೋಟಿ ರೂ. ಲಿಂಕ್ ಕೆಲಸಗಾರರ ಪ್ರತಿ ತಿಂಗಳ ಸಂಭಾವನೆಯಲ್ಲಿ 1 ಸಾವಿರ ರೂ. ಹೆಚ್ಚಳ ಮಾಡಲಾಗಿದೆ. ಮತ್ತು ಡಯಾಲಿಸಿಸ್ ಕೇಂದ್ರ ಸ್ಥಾಪನೆಗೆ 16 ಕೋಟಿ ರೂ. ಮೀಸಲು ಇಡಲಾಗಿದೆ.