ETV Bharat / city

ರಾಜ್ಯವನ್ನು ಬಿಡುತ್ತಿಲ್ಲ 'ಮಹಾ' ನಂಜು: ಇಂದು ಒಂದೇ ದಿನ ಬರೋಬ್ಬರಿ 196 ಹೊಸ ಕೇಸ್​​ ಪತ್ತೆ!

author img

By

Published : May 23, 2020, 1:54 PM IST

ಇಂದು ಒಂದೇ ದಿನ 196 ಹೊಸ ಕೊರೊನಾ ಸೋಂಕಿತರು ಪತ್ತೆಯಾಗಿದ್ದು, ಓರ್ವ ರೋಗಿ ಸಾವನ್ನಪ್ಪಿದ್ದಾನೆ. ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1,939ಕ್ಕೆ ಏರಿಕೆಯಾಗಿದೆ.

196 New Covid Case found in state
ಕೊರೊನಾ

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಇಂದು ಒಂದೇ ದಿನ 196 ಹೊಸ ಸೋಂಕಿತರು ಪತ್ತೆಯಾಗಿದ್ದಾರೆ. ಅಲ್ಲದೆ ಓರ್ವ ಸೋಂಕಿತ ಸಾವನ್ನಪ್ಪಿದ್ದಾನೆ.

ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ಹೆಲ್ತ್​ ಬುಲೆಟಿನ್​

ಇಂದು ರಾಜ್ಯ ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ಹೆಲ್ತ್​ ಬುಲೆಟಿನ್​ನಲ್ಲಿ ಮಂಡ್ಯ - 28 , ರಾಯಚೂರು - 38, ಯಾದಗಿರಿ - 72, ಚಿಕ್ಕಬಳ್ಳಾಪುರ - 20, ಗದಗ - 15, ರಾಯಚೂರು - 38, ಬೆಂಗಳೂರು - 4, ದಕ್ಷಿಣ ಕನ್ನಡ - 3 ಸೋಂಕಿತರು ಕಂಡು ಬಂದಿದ್ದಾರೆ. ಆದರಲ್ಲೂ ಮುಂಬೈನಿಂದ ಬಂದ ಕಾರ್ಮಿಕರಲ್ಲೇ ಹೆಚ್ಚು ಕೇಸ್​ಗಳು ಪತ್ತೆಯಾಗಿದೆ. ಮುಂಬೈ ಕೊರೊನಾ ನಂಟಿನಿಂದಲೇ 184 ಪ್ರಕರಣಗಳು ಪತ್ತೆಯಾಗಿವೆ. ಜೊತೆಗೆ 15 ವರ್ಷದೊಳಗಿನ 35 ಮಕ್ಕಳಿಗೆ ಕೋವಿಡ್​-19 ತಗುಲಿರುವುದು ತಿಳಿದು ಬಂದಿದೆ.

ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1,939ಕ್ಕೆ ಏರಿಕೆಯಾಗಿದ್ದು, ಒಟ್ಟು ಪ್ರಕರಣಗಳ ಪೈಕಿ 1,297 ಆ್ಯಕ್ಟೀವ್ ಕೇಸ್​ಗಳಿದ್ದರೆ, 598 ಮಂದಿ ಗುಣಮುಖರಾಗಿದ್ದಾರೆ. ಮೃತರ ಸಂಖ್ಯೆ 42ಕ್ಕೆ ಏರಿಕೆಯಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.