ETV Bharat / city

ಬೆಂಗಳೂರಲ್ಲಿ ಡ್ರಗ್ಸ್​ ಕಬಂಧ ಬಾಹು: 1,174 ಪ್ರಕರಣ -1,845 ಆರೋಪಿಗಳ ಬಂಧನ!

2019-20ರಲ್ಲಿ ಬೆಂಗಳೂರು ನಗರ ಪೊಲೀಸರು ಎನ್​ಡಿಪಿಎಸ್ ಕಾಯ್ದೆಯಡಿ 1,174 ಪ್ರಕರಣ ದಾಖಲಿಸಿ, 1,801ದೇಶಿಯರು ಹಾಗೂ 44 ವಿದೇಶಿಗರನ್ನು ದಸ್ತಗಿರಿ ‌ಮಾಡಿದೆ. ಅವರಿಂದ 1,016 ಕೆಜಿ ಗಾಂಜಾ, 2.9 ಕೆಜಿ ಅಫೀಮು,1.15 ಕೆಜಿ ಆಶೀಷ್, 85 ಗ್ರಾಂ ಚರಸ್, 345 ಗ್ರಾಂ ಕೊಕೇನ್​, 1,079 ಕೆಜಿ ಕೆಮಿಕಲ್ ಡ್ರಗ್ ಟ್ಯಾಬ್ಲೆಟ್ ಹಾಗೂ ಬ್ರೌನ್ ಶುಗರ್ ವಶಪಡಿಸಿಕೊಂಡಿದ್ದಾರೆ.

Bhaskar rao
ಭಾಸ್ಕರ್ ರಾವ್
author img

By

Published : Jun 26, 2020, 1:17 PM IST

ಬೆಂಗಳೂರು: ಅಂತಾರಾಷ್ಟ್ರೀಯ ಮಾದಕ ವಸ್ತು ಸೇವನೆ ಮತ್ತು ಸಾಗಣೆ ವಿರೋಧಿ ದಿನದ ನಿಮಿತ್ತ ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಇಂದು ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ‌ಸಿಲಿಕಾನ್ ಸಿಟಿ‌ಜನರಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಈ ವಿಷಯ ತಿಳಿಸಿದರು.

ಈ ವೇಳೆ ಮಾತನಾಡಿದ ಆಯುಕ್ತರು, ಇತ್ತೀಚೆಗೆ ಡ್ರಗ್ಸ್ ಸಾಮಾಜಿಕ ಪಿಡುಗಾಗಿದ್ದು, ಈ ಪಿಡುಗಿಗೆ ಹೆಚ್ಚಾಗಿ ವಿದ್ಯಾರ್ಥಿಗಳು, ಯುವಜನತೆ ಹಾಗೂ ಸುಶಿಕ್ಷಿತರು ಗುರಿಯಾಗುತ್ತಿದ್ದಾರೆ. ಹೀಗಾಗಿ ನಗರ ಪೊಲೀಸ್ ಇಲಾಖೆ ಡ್ರಗ್ಸ್ ಸರಬರಾಜು, ಡ್ರಗ್ಸ್ ಮಾರಾಟ ಹಾಗೂ ಡ್ರಗ್ಸ್ ಸೇವನೆ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದೆ. ಕೋವಿಡ್ ಇದ್ದರೂ ಅಂತಹವರ ವಿರುದ್ಧ ಕ್ರಮ ಕೈಗೊಂಡು, ಡ್ರಗ್ ವಿಚಾರವನ್ನು ಗಂಭೀರವಾಗಿ ತೆಗದುಕೊಂಡು ತನಿಖೆ ಮಾಡುವಂತೆ ತಿಳಿಸಿದೆ. ಹೀಗಾಗಿ ನಮ್ಮ ವಿಶೇಷ ತಂಡ ಇದಕ್ಕೆಂದೇ ಕಾರ್ಯ ನಿರ್ವಹಿಸುತ್ತಿದೆ.

ಭಾಸ್ಕರ್ ರಾವ್

2019-20ರಲ್ಲಿ ನಗರ ಪೊಲೀಸರು ಎನ್​ಡಿಪಿಎಸ್ ಕಾಯ್ದೆಯಡಿ 1,174 ಪ್ರಕರಣ ದಾಖಲಿಸಿ, 1,801 ದೇಶಿಯರು ಹಾಗೂ 44 ವಿದೇಶಿಗರನ್ನು ದಸ್ತಗಿರಿ ‌ಮಾಡಿದೆ. ಅವರಿಂದ 1,016 ಕೆಜಿ ಗಾಂಜಾ, 2.9 ಕೆಜಿ ಅಫೀಮು,1.15 ಕೆಜಿ ಆಶೀಷ್, 85ಗ್ರಾಂ ಚರಸ್, 345 ಗ್ರಾಂ ಕೊಕೇನ್​​, 1,079 ಕೆಜಿ ಕೆಮಿಕಲ್ ಡ್ರಗ್ ಟ್ಯಾಬ್ಲೆಟ್ ಹಾಗೂ ಬ್ರೌನ್ ಶುಗರ್ ವಶಪಡಿಸಿದ್ದಾರೆ.

ಕೆಲ ಆರೋಪಿಗಳು ವಿದ್ಯಾರ್ಥಿಗಳನ್ನು ಟಾರ್ಗೆಟ್ ಮಾಡಿಕೊಂಡು ನಗರದಲ್ಲಿ ಗಾಂಜಾ ಸರಬರಾಜು ಮಾಡುತ್ತಿದ್ರು. ಹೀಗಾಗಿ ಇವರನ್ನು ಮಟ್ಟ ಹಾಕಿದ್ದು, ಅಂತಹವರನ್ನು ಮುಂದೆಯೂ ‌ಮಟ್ಟ ಹಾಕ್ತೀವಿ ಎಂದಿದ್ದಾರೆ. ಅಂತೆಯೇ ಪ್ರಥಮ ಬಾರಿಗೆ ಅಂತರ್ಜಾಲದ ಡಾರ್ಕ್ ವೆಬ್ ಮುಖಾಂತರ ವಿದೇಶಗಳಿಂದ ಡ್ರಗ್​ ಸರಬರಾಜು ಮಾಡುತ್ತಿದ್ದವರನ್ನು ನಮ್ಮ ತಂಡ ಪತ್ತೆ ಮಾಡಿದೆ ಎಂದರು.

ಕೋವಿಡ್​-19 ಇರುವ ಕಾರಣ ಸದ್ಯ ಡ್ರಗ್ ಬಗ್ಗೆ ಗಮನ ವಹಿಸಲು ಕೊಂಚ ಮಟ್ಟಿಗೆ ಆಗುತ್ತಿಲ್ಲ. ಹೀಗಾಗಿ ಸಾಮಾಜಿಕ ಪಿಡುಗನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಪೊಲೀಸ್ ಇಲಾಖೆಯೊಂದಿಗೆ ಸಾರ್ವಜನಿಕರು, ಸಂಘ - ಸಂಸ್ಥೆಗಳು, ಶೈಕ್ಷಣಿಕ ಸಂಸ್ಥೆಗಳು ಕೈ ಜೋಡಿಸಬೇಕು‌. ಅಷ್ಟು ಮಾತ್ರವಲ್ಲದೇ ಡ್ರಗ್ ಕೇಸ್ ಪತ್ತೆಯಾದರೆ 1098 ನಂಬರ್​ಗೆ ಕರೆ ಮಾಡಲು ತಿಳಿಸಿದ್ದಾರೆ.

ಇನ್ನು ಕಾರ್ಯಕ್ರಮದಲ್ಲಿ ಹೆಚ್ಚುವರಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್, ಸೌಮೆಂದ್ರ ಮುಖರ್ಜಿ‌ ಹಾಗೂ ಸಿಸಿಬಿ ಡಿಸಿಪಿ ರವಿ ಹಾಗೂ ಕುಲ್ ದೀಪ್ ಜೈನ್ ಭಾಗಿಯಾಗಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.