ETV Bharat / city

ಆರಗ, ಸಿದ್ದು, ಹೆಚ್​ಡಿಕೆ ಸೇರಿ ಲೋಕಾಯುಕ್ತಕ್ಕೆ ಆಸ್ತಿ ವಿವರ ಸಲ್ಲಿಸದ 179 ಜನಪ್ರತಿನಿಧಿಗಳು

ಪ್ರತಿ ವರ್ಷದ ಜೂನ್ ತಿಂಗಳ 30ರೊಳಗೆ ಲೋಕಾಯುಕ್ತಕ್ಕೆ ಶಾಸಕರು ಮತ್ತು ವಿಧಾನ ಪರಿಷತ್ತಿನ ಸದಸ್ಯರು ಆಸ್ತಿ ವಿವರ ಸಲ್ಲಿಸುವುದು ಲೋಕಾಯುಕ್ತ ಕಾಯ್ದೆಯಂತೆ ಕಡ್ಡಾಯವಾಗಿದೆ.

ಲೋಕಾಯುಕ್ತ
ಲೋಕಾಯುಕ್ತ
author img

By

Published : Jul 7, 2022, 6:46 AM IST

ಬೆಂಗಳೂರು: ರಾಜ್ಯ ವಿಧಾನಸಭೆ ಮತ್ತು ವಿಧಾನ ಪರಿಷತ್​ನ​ ಶೇ. 50ಕ್ಕಿಂತಲೂ ಹೆಚ್ಚು ಶಾಸಕರು ನಿಗದಿತ ಗಡುವಿನೊಳಗೆ ಲೋಕಾಯುಕ್ತಕ್ಕೆ ಕಳೆದ ಹಣಕಾಸು ವರ್ಷದಲ್ಲಿ ತಾವು ಹೊಂದಿರುವ ಆಸ್ತಿ ವಿವರ ಘೋಷಣೆ ಮಾಡದೇ ನಿರ್ಲಕ್ಷ್ಯ ತೋರಿದ್ದಾರೆ. ಪ್ರತಿವರ್ಷದ ಜೂನ್ ತಿಂಗಳ 30ರೊಳಗೆ ವಿವರ ಸಲ್ಲಿಸುವುದು ಲೋಕಾಯುಕ್ತ ಕಾಯ್ದೆ 1984 ರ ಕಲಂ 22 ರ ಪ್ರಕಾರ ಕಡ್ಡಾಯ. ಹಾಗಿದ್ದರೂ, ಗಡುವಿನೊಳಗೆ ವಿಧಾನ ಮಂಡಳದ ಉಭಯ ಸದನಗಳ 179 ಜನಪ್ರತಿನಿಧಿಗಳು ಆಸ್ತಿ ಮತ್ತು ಸಾಲಗಳ ಬಗ್ಗೆ ಮಾಹಿತಿ ನೀಡಿಲ್ಲ.

ಇದರಲ್ಲಿ ವಿಧಾನಸಭೆಯ 224 ಶಾಸಕರ ಪೈಕಿ 127 ಶಾಸಕರು ಹಾಗು ವಿಧಾನ ಪರಿಷತ್ತಿನ 75 ಸದಸ್ಯರ ಪೈಕಿ 52 ಸದಸ್ಯರು ಆಸ್ತಿ ವಿವರವಿರುವ ಪ್ರಮಾಣಪತ್ರ ಸಲ್ಲಿಸದವರ ಗುಂಪಿನಲ್ಲಿದ್ದಾರೆ. ಸಕಾಲಕ್ಕೆ ವಿವರ ಸಲ್ಲಿಸದವರಲ್ಲಿ ಹೆಚ್ಚು ಗಣ್ಯ ರಾಜಕಾರಣಿಗಳ ಹೆಸರುಗಳೇ ಇವೆ. ಉಭಯ ಸದನಗಳ ಪ್ರತಿಪಕ್ಷ ನಾಯಕರೂ ಸೇರಿದಂತೆ ಇಬ್ಬರು ಮಾಜಿ ಮುಖ್ಯಮಂತ್ರಿಗಳು, 11 ಸಚಿವರು ಸೇರಿದಂತೆ ಹಲವರಿದ್ದಾರೆ.

ಗಡುವಿನೊಳಗೆ ಆಸ್ತಿ ಮಾಹಿತಿ ನೀಡದವರು:

  • ವಿಧಾನಸಭೆ ಪ್ರತಿಪಕ್ಷ ನಾಯಕ ಹಾಗು ಮಾಜಿ ಸಿಎಂ ಸಿದ್ದರಾಮಯ್ಯ
  • ಮಾಜಿ ಸಿಎಂ, ಜೆಡಿಎಸ್ ನಾಯಕ ಹೆಚ್.ಡಿ.ಕುಮಾರಸ್ವಾಮಿ
  • ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್
  • ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ
  • ಗೃಹ ಸಚಿವ ಆರಗ ಜ್ಞಾನೇಂದ್ರ
  • ಕೃಷಿ ಸಚಿವ ಬಿ.ಸಿ.ಪಾಟೀಲ್
  • ಅಬಕಾರಿ ಸಚಿವ ಕೆ.ಗೋಪಾಲಯ್ಯ
  • ತೋಟಗಾರಿಕೆ ಸಚಿವ ಮುನಿರತ್ನ
  • ಯುವಜನ ಸೇವೆ ಮತ್ತು ಕ್ರೀಡಾ ಸಚಿವ ಕೆ.ಸಿ.ನಾರಾಯಣ ಗೌಡ
  • ಸಹಕಾರ ಸಚಿವ ಎಸ್.ಟಿ.ಸೋಮಶೇಖರ್
  • ಸಾರಿಗೆ ಸಚಿವ ಶ್ರೀರಾಮುಲು
  • ಗಣಿ ಮತ್ತು ಭೂವಿಜ್ನಾನ ಸಚಿವ ಹಾಲಪ್ಪ ಆಚಾರ್
  • ಮೀನುಗಾರಿಕೆ ಸಚಿವ ಎಸ್.ಅಂಗಾರ
  • ಪೌರಾಡಳಿತ ಸಚಿವ ಎಂ.ಟಿ.ಬಿ.ನಾಗರಾಜ್

ಜೂನ್ 30ರ ಗಡುವು ಮುಗಿದ ನಂತರ ಜುಲೈ ಮೊದಲ ವಾರದಲ್ಲಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ್, ವಿಧಾನ ಪರಿಷತ್ ಸದಸ್ಯರಾದ ಎನ್.ರವಿಕುಮಾರ್, ಬಿ.ಜಿ.ಪಾಟೀಲ್, ಶರಣಗೌಡ ಪಾಟೀಲ್ ಸೇರಿದಂತೆ 16 ಜನಪ್ರತಿನಿಧಿಗಳು ಆಸ್ತಿ ವಿವರ ಸಲ್ಲಿಸಿದ್ದಾರೆ. ಸಕಾಲಕ್ಕೆ ಮಾಹಿತಿ ನೀಡದ ಶಾಸಕರಿಗೆ ಲೋಕಾಯುಕ್ತವು ನೋಟಿಸ್ ಜಾರಿ ಮಾಡಿ ಮತ್ತೊಮ್ಮೆ ಕಾಲಾವಕಾಶ ನೀಡಲಿದೆ. ಆನಂತರವೂ ವಿವರ ಸಲ್ಲಿಸದಿದ್ದರೆ ರಾಜ್ಯಪಾಲರಿಗೆ ವರದಿ ನೀಡಿ, ಶಾಸಕರ ಬಗ್ಗೆ ದಿನಪತ್ರಿಕೆಗಳಲ್ಲಿ ಹೆಸರು ಪ್ರಕಟಿಸುತ್ತದೆ. ಅಷ್ಟೇ ಅಲ್ಲ, ಸಂಬಂಧಪಟ್ಟ ಶಾಸಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ವಿಚಾರಣೆ ನಡೆಸಲೂ ಲೋಕಾಯುಕ್ತ ಕಾಯ್ದೆಯಲ್ಲಿ ಅವಕಾಶವಿದೆ.

ಇದನ್ನೂ ಓದಿ: ಅಕ್ರಮ ಆಸ್ತಿ ಗಳಿಕೆ ಸಾಬೀತು: ಎಸ್​ಪಿಗೆ 1 ಕೋಟಿ ರೂ. ದಂಡ ವಿಧಿಸಿದ ಲೋಕಾಯುಕ್ತ ಕೋರ್ಟ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.