ಬೆಂಗಳೂರು: ಬಿಬಿಎಂಪಿ ಆಸ್ತಿ ತೆರಿಗೆ ಪಾವತಿಗೆ ನೀಡಿದ್ದ ಶೇ 5% ರಿಯಾಯಿತಿ ಮೇ 31 ಕ್ಕೆ ಕೊನೆಗೊಳ್ಳಲಿದೆ.
ಓದಿ: 4 ವರ್ಷದಿಂದ ಕೂಡಿಟ್ಟ ಹಣವನ್ನ ಕೋವಿಡ್ ಸಂಕಷ್ಟಕ್ಕೆ ದಾನ ಮಾಡಿದ ಪುಟ್ಟ ಪೋರ
ಕಂದಾಯ ವಿಭಾಗದ ಅಧಿಕಾರಿಗಳು ಆಸ್ತಿ ತೆರಿಗೆ ಪಾವತಿಗಿದ್ದ ಶೇ 5 ರಿಯಾಯಿತಿಯನ್ನು ಮುಂದುವರಿಸುವಂತೆ ಪ್ರಸ್ತಾವನೆ ನೀಡಿದ್ದರೂ, ಇದನ್ನು ಜಾರಿಗೊಳಿಸುವುದು ಕಷ್ಟಸಾಧ್ಯ. ಕಳೆದ ವರ್ಷವೂ ಲಾಕ್ಡೌನ್ ಇದ್ದ ಹಿನ್ನಲೆ, ಒಂದು ತಿಂಗಳ ರಿಯಾಯಿತಿಯನ್ನು ಎರಡು ತಿಂಗಳಿಗೆ ಅಷ್ಟೇ ವಿಸ್ತರಿಸಲಾಗಿತ್ತು.
ಈವರೆಗೆ ಮೇ 29 ಸಂಜೆ 6 ಗಂಟೆಯವರೆಗೂ ಸುಮಾರು 1234 ಕೋಟಿ ರೂ. ಆಸ್ತಿ ತೆರಿಗೆ ಸಂಗ್ರಹವಾಗಿದೆ. ಈ ಪೈಕಿ ಆನ್ಲೈನ್ ಮೂಲಕವೇ ಅತಿಹೆಚ್ಚು ಆಸ್ತಿ ತೆರಿಗೆ ಪಾವತಿಯಾಗಿದ್ದು, 7,03,32,52,012 ಕೋಟಿ ರೂ. ಸಂಗ್ರಹವಾಗಿದೆ. ಚಲನ್ ಮೂಲಕ 5,31,10,42,116 ಕೋಟಿ ರೂ. ಸಂಗ್ರಹವಾಗಿದೆ.
ಇನ್ನು ಜೂನ್ 7 ರವರೆಗೆ ಲಾಕ್ಡೌನ್ ಇರುವುದರಿಂದ ಜನರಿಗೆ ಬ್ಯಾಂಕ್ ಗಳಿಗೆ ಹೋಗಿ ತೆರಿಗೆ ಕಟ್ಟಲು ಸಾಧ್ಯವಾಗಿಲ್ಲ. ಆರ್ಥಿಕ ಸಂಕಷ್ಟದಿಂದಲೂ ಕೆಲವರಿಗೆ ಕಟ್ಟಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಜೂನ್ ಅಂತ್ಯದವರೆಗೂ ವಿನಾಯಿತಿ ವಿಸ್ತರಿಸುವಂತೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು, ತೆರಿಗೆದಾರರೂ ಮನವಿ ಮಾಡಿದ್ದಾರೆ. ಬಿಬಿಎಂಪಿ ಇನ್ನಷ್ಟೇ ಈ ಬಗ್ಗೆ ನಿರ್ಧಾರ ಪ್ರಕಟಿಸಬೇಕಿದೆ.