ಬೆಂಗಳೂರು: ದೇವದಾಸಿ ಮಾಸಾಶನ ಪಾವತಿಗಾಗಿ 12,14,59,500 ರೂ. ಅನುದಾನ ಬಿಡುಗಡೆ ಮಾಡಿ ಆದೇಶ ಹೊರಡಿಸಲಾಗಿದೆ. 2022-23 ನೇ ಸಾಲಿನ ಏಪ್ರಿಲ್, ಮೇ ಮತ್ತು ಜೂನ್ ತಿಂಗಳ ಮಾಜಿ ದೇವದಾಸಿ ಮಾಸಾಶನ ಪಾವತಿಗಾಗಿ ಹಣ ಬಿಡುಗಡೆ ಮಾಡಲಾಗಿದೆ. ಈ ಅನುದಾನವನ್ನು ಏಪ್ರಿಲ್, ಮೇ ಮತ್ತು ಜೂನ್ ತಿಂಗಳ ಮಾಸಾಶನ ಪಾವತಿಗಾಗಿ ಮಾತ್ರ ಬಳಸಿಕೊಳ್ಳುವಂತೆ ಸೂಚಿಸಲಾಗಿದೆ.
ಕಳೆದ ಐದು ತಿಂಗಳಿಂದ ದೇವದಾಸಿಯರಿಗೆ ಮಾಸಾಶನ ಬಿಡುಗಡೆಯಾಗದ ಬಗ್ಗೆ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳರ ಗಮನಕ್ಕೆ ಬಂದಿತ್ತು. ಈ ನಿಟ್ಟಿನಲ್ಲಿ ಮುಖ್ಯಕಾರ್ಯದರ್ಶಿ ಜೊತೆ ಚರ್ಚಿಸಿ ಅವರಿಗೆ ಟಿಪ್ಪಣಿ ಕಳಿಸಿ ದೇವದಾಸಿಯರ ಮಾಶಾಸನ ಬಿಡುಗಡೆಯಾಗದ ವಿಷಯವನ್ನು ಗಮನಕ್ಕೆ ತಂದಿದ್ದರು.
ಆ ಬಳಿಕ ಇದೀಗ ದೇವದಾಸಿ ಮಾಸಾಶನ ಪಾವತಿಗಾಗಿ ಅನುದಾನ ಬಿಡುಗಡೆಗೆ ಆದೇಶಿಸಲಾಗಿದೆ.
ಇದನ್ನೂ ಓದಿ : ಶಾಸಕರ ನೇತೃತ್ವದಲ್ಲಿ ಕೆಡಿಪಿ ಸಭೆ: ನಿದ್ದೆ, ಮೊಬೈಲ್ ನೋಡುವುದರಲ್ಲೇ ಅಧಿಕಾರಿಗಳು ಬ್ಯುಸಿ