ಬೆಂಗಳೂರು : ನಿನ್ನೆಯಷ್ಟೇ 107 ವರ್ಷದ ಚಿಕ್ಕಬಳ್ಳಾಪುರ ಕಾಳಮ್ಮ ಎಂಬ ವೃದ್ಧೆ ಕೋವಿಡ್ ತಗುಲಿ, ಐಸಿಯು ಸೇರಿ ಗುಣಮುಖರಾಗಿ ಬಂದ ಪಾಸಿಟಿವ್ ಸುದ್ದಿ ಸಿಕ್ಕಿತ್ತು.
ಓದಿ: ಭಲೇ ಅಜ್ಜಿ... ಕೋವಿಡ್ ವಿರುದ್ಧ ಹೋರಾಡಿ ಗೆದ್ದ 99 ವರ್ಷದ ಬೆಂಗಳೂರು ವೃದ್ಧೆ!
ಕಳೆದ ವರ್ಷ 110 ವರ್ಷದ ಸಿದ್ದಮ್ಮ ಎಂಬುವರು ಚಿತ್ರದುರ್ಗದಲ್ಲಿ ಕೊರೊನಾ ಗೆದ್ದಿದ್ದರು. ಇದೀಗ ಇವರ ಸಾಲಿಗೆ ಮತ್ತೊಬ್ಬರು ಹಿರಿಯ ವಯೋವೃದ್ಧರು ಕೋವಿಡ್ ಗೆದ್ದು, ಗುಣಮುಖರಾಗಿದ್ದಾರೆ.
ನಗರದ ಸರ್ಕಾರಿ ಬಾಲಕರ ಕಲಾ ಕಾಲೇಜು ಕೋವಿಡ್ ಕೇರ್ ಕೇಂದ್ರ, ಶಾಂತಿನಗರ ಪ್ರೈಮರೋಸ್‌ನಲ್ಲಿ ಚಿಕಿತ್ಸೆ ಪಡೆದ 103 ವರ್ಷದ ಶರಣಯ್ಯ ಅವರು ತಮಗೆ ಚಿಕಿತ್ಸೆ ನೀಡಿದ ವೈದ್ಯ ವೃಂದಕ್ಕೆ ಧನ್ಯವಾದ ತಿಳಿಸಿದ್ದಾರೆ.
ನಾನೀಗ ಆರೋಗ್ಯವಾಗಿದ್ದೇನೆ, ಆಸ್ಪತ್ರೆಯ ಕೊಡುಗೆಗೆ ಧನ್ಯವಾದ, ಇದರಂತೆ ಎಲ್ಲರನ್ನು ಈ ಆಸ್ಪತ್ರೆ ಗುಣಮುಖ ಮಾಡಲಿ ಎಂದು ಆಶಿಸಿದ್ದಾರೆ.