ETV Bharat / city

1.5 ಕೆಜಿ ಚಿನ್ನ, 3 ಲಕ್ಷ ಹಣ ದೋಚಿ ಮರಳುವಾಗ ಮನೆ ತುಂಬಾ ಖಾರದ ಪುಡಿ ಎರಚಿದ್ರು - ಬೆಂಗಳೂರಲ್ಲಿ ಮನೆ ಕಳ್ಳತನ

ಮನೆಯಲ್ಲಿ ಯಾರೂ ಇಲ್ಲದಿರುವುದನ್ನು ಗಮನಿಸಿದ ಖದೀಮರು ಮನೆಗೆ ನುಗ್ಗಿ ಒಂದೂವರೆ ಕೆಜಿ ಚಿನ್ನಾಭರಣ ಹಾಗೂ 3 ಲಕ್ಷ ರೂ ನಗದು ದೋಚಿ ಪರಾರಿಯಾಗಿದ್ದಾರೆ.

ಮನೆ ಕಳ್ಳತನ
ಮನೆ ಕಳ್ಳತನ
author img

By

Published : Feb 17, 2022, 7:21 AM IST

Updated : Feb 17, 2022, 10:02 AM IST

ದೊಡ್ಡಬಳ್ಳಾಪುರ: ಮನೆಗೆ ಬೀಗ ಹಾಕಿ ದುಬೈನಲ್ಲಿದ್ದ ಮಗಳ ಮನೆಗೆ ಹೋಗಿದ್ದ ಸಮಯದಲ್ಲಿ ಮನೆಯ ಬಾಗಿಲು ಒಡೆದು ಒಳನುಗ್ಗಿದ ಕಳ್ಳರು ಒಂದೂವರೆ ಕೆಜಿ ಚಿನ್ನ 3 ಲಕ್ಷ ನಗದು ದೋಚಿದ್ದಾರೆ.

ನಗರದ ಖಾಸ್ ಬಾಗಿಲು ಬಳಿ ಪದ್ಮ ರೆಡ್ಡಿ ಎಂಬುವರ ಮನೆಯಲ್ಲಿ ಕಳ್ಳತನ ಪ್ರಕರಣ ನಡೆದಿದೆ. ಪದ್ಮ ರೆಡ್ಡಿ ಕುಟುಂಬಸಮೇತರಾಗಿ ನಾಲ್ಕು ತಿಂಗಳ ಹಿಂದೆ ದುಬೈಯಲ್ಲಿದ್ದ ಮಗಳ ಮನೆಗೆ ತೆರಳಿದ್ದರು. ಆದರೆ ಈ ವೇಳೆ ಸುತ್ತಮುತ್ತಲಿನ ಮನೆಯವರಿಗೂ ತಿಳಿಸದೇ ಹೋಗಿದ್ದಾರೆ. ಮನೆಯಲ್ಲಿ ಯಾರೂ ಇಲ್ಲದಿರುವುದನ್ನು ಗಮನಿಸಿರುವ ಕಳ್ಳರು ಮನೆ ಬಾಗಿಲು ಒಡೆದು ಅಪಾರ ಪ್ರಮಾಣದ ನಗ-ನಾಣ್ಯ ಹೊತ್ತೊಯ್ದಿದ್ದಾರೆ.

ಮನೆ ಕಳ್ಳತನ ಬಗ್ಗೆ ಎಸ್​ಪಿ ಪ್ರತಿಕ್ರಿಯೆ

ಕಳ್ಳತನದ ಸುಳಿವು ಪೊಲೀಸರಿಗೆ ಸಿಗಬಾರದೆಂದು ಮನೆಯ ತುಂಬೆಲ್ಲಾ ಖಾರದ ಪುಡಿ ಎರಚಿದ್ದು ಕಂಡುಬಂದಿದೆ. ದುಬೈನಿಂದ ಇಂದು ವಾಪಸ್ ಆದಾಗ ಘಟನೆ ಬೆಳಕಿಗೆ ಬಂದಿದೆ. ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೋನ ವಂಶಿಕೃಷ್ಣ, ಅಪರ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಿ ಗಣೇಶ್ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Last Updated : Feb 17, 2022, 10:02 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.