ಬಳ್ಳಾರಿ: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಹೆಚ್.ಎಸ್.ದೊರೆಸ್ವಾಮಿ ವಿರುದ್ಧ ಹೇಳಿಕೆ ನೀಡಿರೋದು ಸರಿಯಾಗಿದೆ ಎಂದು ಶಾಸಕ ಸೋಮಶೇಖರ ರೆಡ್ಡಿ ಸಮರ್ಥಿಸಿಕೊಂಡಿದ್ದಾರೆ.
ಬಳ್ಳಾರಿ ವಿಮ್ಸ್ ಆಸ್ಪತ್ರೆಯಲಿಂದು ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗಿಯಾಗಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನಮ್ಮ ನಾಯಕರು. ಹಿರಿಯ ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿಯವರ ವಿರುದ್ಧ ಹೇಳಿಕೆ ನೀಡಿರೋದು ಸರಿಯಾಗಿದೆ. ಅವರ ಹೇಳಿಕೆಯಲ್ಲಿ ಏನೂ ತಪ್ಪಿಲ್ಲ ಎಂದರು.
ಸಿಎಎ ತಂದಿದ್ದು ನಮ್ಮ ದೇಶದ ಜನರಿಗೆ ನೋಂದಣಿ ಮಾಡಿಸಿಕೊಂಡು ಬೇರೆ ದೇಶದವರಿಗೆ ವಾಪಸ್ ಕಳುಹಿಸಲಾಗುವುದು. ಇಂಥದಕ್ಕೆ ಕಾಂಗ್ರೆಸ್ ಬೆಂಬಲ ನೀಡಿ, ನಮ್ಮವರನ್ನು ಪ್ರಚೋದಿಸಿ ಪ್ರತಿಭಟಿಸುವುದು ಸರಿಯಲ್ಲ. ದೆಹಲಿ ಗಲಭೆ ಘಟನೆ ಬಹಳ ನೋವಾಗುತ್ತೆ. ಈ ರೀತಿ ನಡೆಯಬಾರದಿತ್ತು. ಪಾಕಿಸ್ತಾನ ಪರ ಘೋಷಣೆ ಕೂಗುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಸೋಮಶೇಖರ ರೆಡ್ಡಿ ಆಗ್ರಹಿಸಿದರು.