ಬಳ್ಳಾರಿ: ನಗರದಲ್ಲಿ ಹೆಚ್ಚು-ಹೆಚ್ಚು ಸಸಿಗಳನ್ನ ನೆಟ್ಟು,ಬೆಳೆಸಿ ಬಳ್ಳಾರಿಯನ್ನ ಮಲೆನಾಡನ್ನಾಗಿ ಮಾಡೋಣ ಎಂದು ಶಾಸಕ ಜಿ.ಸೋಮಶೇಖರ್ ರೆಡ್ಡಿ ಹೇಳಿದರು.
ನಗರದ ದುರ್ಗಮ್ಮ ಗುಡಿ ಆವರಣದಲ್ಲಿ ನಡೆದ ವಿಶ್ವ ಪರಿಸರ ದಿನ ಕಾರ್ಯಕ್ರಮಕ್ಕೆ ಶಾಸಕ ಜಿ.ಸೋಮಶೇಖರ್ ರೆಡ್ಡಿ ಮತ್ತು ಬುಡಾ ಅಧ್ಯಕ್ಷ ದುಮ್ಮೂರು ಶೇಖರ್ ಸಸಿಗಳಿಗೆ ನೀರು ಹಾಕುವ ಮೂಲಕ ಚಾಲನೆ ನೀಡಿದರು. ಈ ವೇಳೆ, ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ, ವಿಶ್ವ ಪರಿಸರ ದಿನಾಚರಣೆಯ ನಿಮಿತ್ತ ನಗರದ ರಾಘವೇಂದ್ರ ಪಾರ್ಕ್, ತಾರಾನಾಥ ಆಸ್ಪತ್ರೆ, ದುರ್ಗಮ್ಮ ಗುಡಿ ಆವರಣದಲ್ಲಿ ಸಸಿಗಳನ್ನು ನೆಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ.
ಈಗಾಗಲೇ ಶ್ರೀಕನಕ ದುರ್ಗಮ್ಮ ದೇವಸ್ಥಾನದಿಂದ ಸಂಗನಕಲ್ಲು ಗ್ರಾಮದವರೆಗೂ ಸಸಿಗಳನ್ನ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದೇವೆ. ಸಾರ್ವಜನಿಕರು ಸಹ ಸಸಿಗಳನ್ನ ನೆಟ್ಟು, ಬೆಳೆಸಿ. ಈ ಮೂಲಕ ಬಿಸಿನ ನಾಡು ಬಳ್ಳಾರಿಯ ಬದಲಿಗೆ ಮಲೆನಾಡನ್ನಾಗಿ ಮಾಡೋಣ ಎಂದರು.