ವಿಜಯನಗರ: ವ್ಯಕ್ತಿಯೊಬ್ಬ ತನ್ನ ಸ್ನೇಹಿತನ ಪತ್ನಿಯನ್ನು ಪ್ರೀತಿಸಿ ಕೊನೆಗೆ ಆಪ್ತಮಿತ್ರನನ್ನೇ ಕೊಲೆಗೆೈಯ್ಯಲು ಯತ್ನಿಸಿರುವ ಘಟನೆ ವಿಜಯನಗರ ಜಿಲ್ಲೆಯಲ್ಲಿ ನಡೆದಿದೆ. ಪತಿ ಸಿದ್ದೇಶ ಹಲ್ಲೆಗೊಳಗಾದ ವ್ಯಕ್ತಿ. ಪತ್ನಿ ಕಲ್ಪನ ಹಾಗೂ ಸ್ನೇಹಿತ ಕೊಟ್ರೇಶ್ ಆರೋಪಿಗಳೆಂದು ಗುರುತಿಸಲಾಗಿದೆ. ಸಿದ್ದೇಶ್ ತಲೆಗೆ ಗಾಯವಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕೊಟ್ಟೂರು ತಾಲೂಕಿನ ಚಪ್ಪರದಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ.
ಸಿದ್ದೇಶ ಕಳೆದ 15 ವರ್ಷಗಳ ಹಿಂದೆಯೇ ಮಾವನ ಮಗಳು ಕಲ್ಪನಾಳನ್ನು ಮದುವೆಯಾಗಿದ್ದು ಅಡುಗೆ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಸಿದ್ದೇಶ ಹಾಗೂ ಕಲ್ಪನಾಳ ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಆದ್ರೆ ಇವರ ಸಂಸಾರ ಪ್ರವೇಶಿಸಿದ ಸ್ನೇಹಿತ ಕೊಟ್ರೇಶ್ ಆಪ್ತಸ್ನೇಹಿತ ಸಿದ್ದೇಶ್ ಪತ್ನಿ ಕಲ್ಪನಾ ಮೇಲೆ ಕಣ್ಣು ಹಾಕಿದ್ದಾನೆ.

ಕಷ್ಟದಲ್ಲಿದ್ದ ಸ್ನೇಹಿತ ಕೊಟ್ರೇಶನಿಗೆ ಮನೆ ಬಾಡಿಗೆ ಕೊಟ್ಟರೆ ಆತ ಸ್ನೇಹಿತ ಸಿದ್ದೇಶ್ ಪತ್ನಿಯ ಮೇಲೆ ಕೆಂಗಣ್ಣು ಬೀರಿ ನಂಬಿಕೆ ದ್ರೋಹ ಎಸಗಿದ್ದಾನೆ. ಕಳೆದ ಮೂರು ವರ್ಷಗಳಿಂದ ಸಿದ್ದೇಶ್ ಮನೆಯಲ್ಲೇ ಈತ ಬಾಡಿಗೆಗಿದ್ದಂತೆ. ಈ ವೇಳೆ ಕಲ್ಪನಾ ಮತ್ತು ಕೊಟ್ರೇಶ್ಗೆ ಪರಿಚಯವಾಗಿದೆ. ಈ ಪರಿಚಯ ಸ್ನೇಹವಾಗಿ, ಪ್ರೀತಿಗೆ ತಿರುಗಿದ್ದು, ಇಬ್ಬರ ಮಧ್ಯೆ ವಿವಾಹೇತರ ಸಂಬಂಧವೂ ನಡೆದಿದೆ ಎನ್ನಲಾಗಿದೆ.
ಇದನ್ನೂ ಓದಿ: ಶಿವಮೊಗ್ಗದಲ್ಲಿ ದಲಿತ ವಿವಾಹಿತೆಯ ಬೆತ್ತಲೆಗೊಳಿಸಿ ಸಾಮೂಹಿಕ ಅತ್ಯಾಚಾರ ಯತ್ನ!
ಸಿದ್ದೇಶ್ ಒಂದೆರಡು ಸಲ ಪತ್ನಿ ಮತ್ತು ಸ್ನೇಹಿತನಿಗೆ ಎಚ್ಚರಿಕೆ ಕೂಡಾ ನೀಡಿದ್ದರಂತೆ. ಆದರೂ ಅಕ್ರಮ ಸಂಬಂಧ ಮುಂದುವರೆದಿದೆ. ಈ ವಿಚಾರವಾಗಿ ಗಂಡ-ಹೆಂಡತಿ ಮಧ್ಯೆ ಗಲಾಟೆ ನಡೆದಿದೆ. ಹೀಗಾಗಿ ಸಿದ್ದೇಶ್ ಪತ್ನಿಯನ್ನು ತವರು ಮನೆಗೆ ಕಳುಹಿಸಿದ್ದಾರೆ. ನಮ್ಮಿಬ್ಬರ ಸಂಬಂಧಕ್ಕೆ ಪತಿ ಸಿದ್ದೇಶ್ ಅಡ್ಡಿಯಾಗಿದ್ದಾನೆ. ಏನಾದ್ರು ಮಾಡಿ ಗಂಡನನ್ನು ಮುಗಿಸಿಬಿಡು ಎಂದು ಪ್ರಿಯಕರ ಸಿದ್ದೇಶ್ ಬಳಿ ಕಲ್ಪನಾ ಕೇಳಿಕೊಂಡಿದ್ದಾಳಂತೆ. ಅದರಂತೆ, ಇಬ್ಬರೂ ಸೇರಿಕೊಂಡು ಸಿದ್ದೇಶ್ ಕೊಲೆಗೆ ಸ್ಕೆಚ್ ಹಾಕಿದ್ದಾರೆ. ಮೊನ್ನೆ ಪ್ಲ್ಯಾನ್ ಮಾಡಿಕೊಂಡೇ ದಾಳಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ಸಿದ್ದೇಶ್ ತಲೆಗೆ ಬಲವಾದ ಪೆಟ್ಟು ಬಿದ್ದಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸಿದ್ದೇಶ್ ತನ್ನ ಪತ್ನಿ ಕಲ್ಪನಾ ಮತ್ತು ಸ್ನೇಹಿತ ಕೊಟ್ರೇಶ್ ವಿರುದ್ಧ ಕೊಟ್ಟೂರು ಠಾಣೆಯಲ್ಲಿ ದೂರು ನೀಡಿದ್ದಾರೆ. ಆರೋಪಿ ಪರಾರಿಯಾಗಿದ್ದಾನೆ. ಪತ್ನಿ ತವರು ಮನೆಯಲ್ಲಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.