ETV Bharat / city

'ಜಿಂದಾಲ್​ಗೆ ಭೂಮಿ ಮಾರಾಟ ಮಾಡಿದ್ರೇ, ಸುಮ್ನೇ ನೋಡ್ಕೊಂಡಿರೋಕಾಗುತ್ತೇನ್ರೀ..' - undefined

ಸರ್ಕಾರ ಲೀಜ್ ಆಫ್ ಅಗ್ರಿಮೆಂಟ್​ಗೆ ನೀಡಿದ ಭೂಮಿಯನ್ನು ಜಿಂದಾಲ್ ಕಂಪನಿಗೆ ಮಾರಾಟ ಮಾಡಿದರೆ ಸರ್ಕಾರದ ವಿರುದ್ಧ ಹೋರಾಟ ಮಾಡಲಾಗುವುದು ಎಂದು ಕೆ.ಎರಿಸ್ವಾಮಿ ಎಚ್ಚರಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಕೆ.ಎರಿಸ್ವಾಮಿ
author img

By

Published : May 29, 2019, 10:44 AM IST

ಬಳ್ಳಾರಿ: ಜಿಂದಾಲ್ ಕಂಪನಿಗೆ ಸರ್ಕಾರ ಲೀಜ್ ಆಫ್ ಅಗ್ರಿಮೆಂಟ್​ಗೆ ನೀಡಿದ 3700 ಎಕರೆ ಭೂಮಿಯನ್ನು ಯಾವುದೇ ಕಾರಣಕ್ಕೂ ಮಾರಾಟ ಮಾಡಬಾರದು. ಮಾರಾಟ ಮಾಡಲು ಮುಂದಾದರೆ ಕರ್ನಾಟಕ ಜನಸೈನ್ಯ ಸಂಘಟನೆಯಿಂದ ಉಗ್ರ ಹೋರಾಟ ಮಾಡಲಾಗುವುದು ಎಂದು ಸಂಘಟನೆ ರಾಜ್ಯಾಧ್ಯಕ್ಷ ಕೆ.ಎರಿಸ್ವಾಮಿ ಎಚ್ಚರಿಸಿದರು.

ನಗರದ ಖಾಸಗಿ ಹೋಟೆಲ್​ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ತೋರಣಗಲ್ಲು ಗ್ರಾಮದ ಜಿಂದಾಲ್ ಕಂಪನಿಗೆ ಸರ್ಕಾರ ಲೀಜ್ ಆಫ್ ಅಗ್ರಿಮೆಂಟ್ ಅಡಿಯಲ್ಲಿ ಜಮೀನಿಗಳನ್ನು ನೀಡಿತ್ತು. ಅದರಲ್ಲಿ ಬಳ್ಳಾರಿ, ಸಂಡೂರು, ಕುರೆಕೊಪ್ಪ ಗ್ರಾಮದ ರೈತರ ಭೂಮಿಗಳನ್ನು ಒಂದು ಎಕರೆಗೆ 1 ಲಕ್ಷದ 22 ಸಾವಿರದಂತೆ ನೀಡಿದೆ. ಈಗ ಸರ್ಕಾರ, ಲೀಜ್​ನ ಭೂಮಿಗಳನ್ನು ಜಿಂದಾಲ್​ಗೆ ಮಾರಾಟ ಮಾಡಲು ಮುಂದಾಗಿದ್ದು, ಜಿಂದಾಲ್ ಕಂಪನಿಯ ಪರವಾಗಿ ಶುದ್ಧ ಕ್ರಯ ಪತ್ರವನ್ನು ಮಾಡಿಕೊಡಲು ರಾಜ್ಯ ಸಚಿವ ಸಂಪುಟ ಸಭೆಗೆ ಪ್ರಸ್ತಾವನೆ ಸಲ್ಲಿಸಿದೆ. ಈ ಜಮೀನಿನಲ್ಲಿ ಜಿಂದಾಲ್ ಕಂಪನಿಯು ಏನನ್ನು ಮಾಡಲು ಸರ್ಕಾರದಿಂದ ಪಡೆದಿತ್ತೋ ಅದನ್ನು ಹಾಗೇ ಲೀಜ್ ಆಫ್ ಅಗ್ರಿಮೆಂಟ್ ಪ್ರಕಾರ ಮುಂದುವರೆಸಿಕೊಂಡು ಹೋಗಬೇಕೇ ಹೊರತು ಯಾವುದೇ ಕಾರಣಕ್ಕೂ ನಮ್ಮ ನೆಲವನ್ನು ಜಿಂದಾಲ್​ಗೆ ಮಾರಾಟ ಮಾಡಲು ಬಿಡುವುದಿಲ್ಲ. ಒಂದು ವೇಳೆ ರಾಜ್ಯ ಸರ್ಕಾರ ಜಿಂದಾಲ್​ಗೆ ಭೂಮಿ ಮಾರಾಟ ಮಾಡಿದ್ದೇ ಆದಲ್ಲಿ ಕರ್ನಾಟಕ ಜನಸೈನ್ಯ ಸರ್ಕಾರದ ವಿರುದ್ಧ ಹೋರಾಟ ಮಾಡಬೇಕಾಗುತ್ತದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಕೆ.ಎರಿಸ್ವಾಮಿ

ಮೇಲ್ಸೇತುವೆ ನಿರ್ಮಾಣ ಮಾಡಿ:

ಜಿಂದಾಲ್ ಕಂಪನಿ ಸಂಡೂರ ತೋರಣಗಲ್ಲು ಮಾರ್ಗವಾಗಿ ರೈಲ್ವೆ ಗೇಟ್ ನಿರ್ಮಾಣ ಮಾಡಿದರೆ ಗೇಟ್ ಹಾಕಿದಾಗ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ. ಆ್ಯಂಬುಲೆನ್ಸ್​ ಹಾಗೂ ತುರ್ತುಪರಿಸ್ಥಿತಿ ಸೇವೆಗೆ ಅಡ್ಡಿಯಾಗಲಿದೆ. ಹೀಗಾಗಿ ಮೇಲ್ಸೇತುವೆ ನಿರ್ಮಾಣ ಮಾಡಿ ಎಂದು ಎರಿಸ್ವಾಮಿ ಆಗ್ರಹಿಸಿದರು.

Intro:ಜಿಂದಾಲ್ ಕಂಪನಿಗೆ ಸರ್ಕಾರ ನೀಡಿದ 3700 ಎಕರೆ ಲೀಜ್ ಆಫ್ ಅಗ್ರಿಮೆಂಟ್ ಗೆ ನೀಡಿದ ಭೂಮಿಯನ್ನು ಯಾವುದೇ ಕಾರಣಕ್ಕೂ ಮಾರಾಟ ಮಾಡಬಾರದು, ಮಾರಾಟ ಮಾಡಲು ಮುಂದಾದರೇ ಕರ್ನಾಟಕ ಜನಸೈನ್ಯ ಸಂಘಟನೆ ಉಗ್ರ ಹೋರಾಟ ಮಾಡುತ್ತದೆ ಎಂದು ಕರ್ನಾಟಕ ಜನಸೈನ್ಯದ ರಾಜ್ಯಾಧ್ಯಕ್ಷ ಕೆ.ಎರಿಸ್ವಾಮಿ ದೂರಿದರು.

Body:ನಗರದ ಖಾಸಗಿ ಹೋಟಲ್ ನಲ್ಲಿ ಸುದ್ದಿಗಾರ ರೊಅಮದಿಗೆ ಮಾತನಾಡಿದ ಜನಸೈನ್ಯದ ರಾಜ್ಯ ಅಧ್ಯಕ್ಷ ಕೆ.ಎರ್ರಿಸ್ವಾಮಿ ಅವರು ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ತೋರಣಗಲ್ಲು ಗ್ರಾಮದ ಜಿಂದಾಲ್ ಕಂಪಜಿಗೆ ಸರ್ಕಾರ ನೀಡಿದ ಲೀಜ್ ಆಫ್ ಅಗ್ರಿಮೆಂಟ್ ಅಡಿಯಲ್ಲಿ ಜಮೀನಿಗಳನ್ನು ನೀಡಿತ್ತು.

ಸರ್ಕಾರ ನೀಡಿದ ಲೀಜ್ ನ ಭೂಮಿಗಳನ್ನು ಮಾರಾಟ ಮಾಡಲು ಮುಂದಾಗಿದೆ. ಅದರಲ್ಲಿ ಬಳ್ಳಾರಿ, ಸಂಡೂರು, ಕುರೆಕೊಪ್ಪ ಗ್ರಾಮದ ರೈತರ ಭೂಮಿಗಳನ್ನು ಒಂದು ಎಕರೆಗೆ 1 ಲಕ್ಷ 22 ಸಾವಿರ ನೀಡಿದೆ.

ಜಿಂದಾಲ್ ಕಂಪನಿಯ ಪರವಾಗಿ ಶುದ್ಧ ಕ್ರಯ ಪತ್ರವನ್ನು ಮಾಡಿಕೊಡಲು ರಾಜ್ಯ ಸಚಿವ ಸಂಪುಟ ಸಭೆಗೆ ಪ್ರಸ್ತಾವನೆ ಸಲ್ಲಿಸಿದೆ. ಈ ಜಮೀನಿನಲ್ಲಿ ಜಿಂದಾಲ್ ಕಂಪನಿಯು ಏನನ್ನು ಮಾಡಲು ಸರ್ಕಾರದಿಂದ ಪಡೆದಿತ್ತೊ ಅದನ್ನು ಹಾಗೇ ಲೀಜ್ ಆಫ್ ಅಗ್ರಿಮೆಂಟ್ ಪ್ರಕಾರ ಮುಂದುವರೆಸಿಕೊಂಡು ಹೋಗಬೇಕು ಹಾಗೇ ಯಾವುದೇ ಕಾರಣಕ್ಕೂ ನಮ್ಮ ನೆಲವನ್ನು ಜಿಂದಾಲ್ ಮಾರಾಟ ಮಾಡಲು ಬಿಡುವುದಿಲ್ಲ ಎಂದರು.

ಒಂದು ವೇಳೆ ರಾಜ್ಯ ಸರ್ಕಾರ ಜಿಂದಾಲ್ ಗೆ ಭೂಮಿ ಮಾರಾಟ ಮಾಡಿದ್ದೆ ಆದಲ್ಲಿ ಕರ್ನಾಟಕ ಜನಸೈನ್ಯ ರಾಜ್ಯ ಸರ್ಕಾರದ ವಿರುದ್ಧ ಹೋರಾಟ ಮಾಡಬೇಕಾಗುತ್ತದೆ ಎಂದರು.

ಮೇಲ್ ಸೇತುವೆ ನಿರ್ಮಾಣ ಮಾಡಿ :

ಜಿಂದಾಲ್ ಕಂಪನಿ ಸಂಡೂರ ತೋರಣಗಲ್ಲು ಮಾರ್ಗವಾಗಿ ರೈಲ್ವೆ ಗೇಟ್ ನಿರ್ಮಾಣ ಮಾಡಿದರೇ ಗೇಟ್ ಹಾಕಿದಾಗ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ. ಸಾಕಷ್ಟು ಪ್ರಾಣಗಳ ಹಾನಿಯಾಗಿವೆ. ಅಂಬುಲೆನ್ಸ್ ಗಳು ಮತ್ತು ತುರ್ತುಪರಿಸ್ಥಿತಿ ಸೇವೆಗೆ ಅನುಕೂಲ ಮಾಡಿಕೊಡಬೇಕಾಗಿದೆ ಎಂದರು.

Conclusion:ಈ ಸುದ್ದಿಗೋಷ್ಠಿಯಲ್ಲಿ ಜನಸೈನ್ಯದ ರಾಜ್ಯ ಉಪಾಧ್ಯಕ್ಷ ಹೊನ್ನರಪ್ಪ, ಬಳ್ಳಾರಿ ಜಿಲ್ಲಾ ಅಧ್ಯಕ್ಷ ಕೆ.ಎಸ್ ಅಶೋಕ, ಕಾರ್ಯಕರ್ತರಾದ ರವಿ‌ಕುಮಾರ್, ರಾಜೇಶ್ ಇನ್ನಿತರು ಹಾಜರಿದ್ದರು.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.