ವಿಜಯನಗರ: ಬ್ಯಾಂಕಾಕ್ನಲ್ಲಿ ನಡೆದ ಅಂತಾರಾಷ್ಟ್ರೀಯ ಮಟ್ಟದ ವಿಶ್ವವಿದ್ಯಾಲಯಗಳ 70 ಕೆಜಿ ವಿಭಾಗದ ಕುಸ್ತಿ ಸ್ಪರ್ಧೆಯಲ್ಲಿ ಮಲ್ಲಿಕಾರ್ಜುನ ಚಿನ್ನದ ಪದಕ ಗಳಿಸಿದ್ದಾರೆ. ಈ ಮೂಲಕ ಹಲುವಾಗಲಿನ ಯುವ ಪೈಲ್ವಾನ್ ವಿಜಯನಗರ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ಮೇ 27 ಮತ್ತು 28 ರಂದು ಬ್ಯಾಂಕಾಕ್ನಲ್ಲಿ ನಡೆದ ಅಂತಾರಾಷ್ಟ್ರೀಯ ಮಟ್ಟದ 70 ಕೆಜಿ ವಿಭಾಗದ ಕುಸ್ತಿ ಸ್ಪರ್ಧೆ ಭಾರತವನ್ನು ಪ್ರತಿನಿಧಿಸಿದ್ದರು. ಸ್ಪರ್ಧೆಯಲ್ಲಿ ಜಪಾನ್, ಇಂಡೊನೇಷ್ಯಾ, ಥಾಯ್ಲೆಂಡ್, ಅಮೆರಿಕಾ ದೇಶಗಳ ಕುಸ್ತಿ ಪಟಗಳನ್ನು ಸೋಲಿಸುವ ಮೂಲಕ ಚಿನ್ನದ ಪದಕವನ್ನು ಕೊರಳಿಗೇರಿಸಿಕೊಂಡಿದ್ದಾರೆ.
ಹಲುವಾಗಲಿನ ದನಕಾವರ ಶಿವಪ್ಪ ಮತ್ತು ಜ್ಯೋತೆಮ್ಮ ದಂಪತಿಯ ಪುತ್ರ ಮಲ್ಲಿಕಾರ್ಜುನ ತಂದೆಯ ಸಹಕಾರ, ಶಿಕ್ಷಣ ಸಂಯೋಜಕ ಗಿರಜ್ಜಿ ಮಂಜುನಾಥ ಅವರ ಪ್ರೇರಣೆಯಿಂದ ಹಲುವಾಗಲಿನಲ್ಲಿ ಗರಡಿ ಮನೆಗೆ ಕುಸ್ತಿ ಅಭ್ಯಾಸ ಮಾಡುತ್ತಿದ್ದಾರೆ. ಈಗಾಗಲೇ ರಾಜ್ಯ ಮಟ್ಟದಲ್ಲಿ ಸಾಕಷ್ಟು ಪ್ರಶಸ್ತಿಗಳು ಸಹ ಪಡೆದಿದ್ದಾರೆ.
ಇದನ್ನೂ ಓದಿ: ಪ್ರತಿಭಟನೆ ವೇಳೆ ಸುಟ್ಟುಹಾಕಿದ ಚಡ್ಡಿಯೇ ಅಪರಾಧವಾಗಿ ಕಂಡಿದೆ: ಸಿದ್ದರಾಮಯ್ಯ ಗರಂ