ಬಳ್ಳಾರಿ: ಜಿಲ್ಲೆಯ ವಿಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿರುವ ಬಿಜೆಪಿ ಅಭ್ಯರ್ಥಿ ಆನಂದಸಿಂಗ್ ಅವರ ಮಗನ ಮದುವೆಗೆ ಕೋಟ್ಯಂತರ ರೂಪಾಯಿ ವ್ಯಯಿಸಿ ಹಾಕಿರುವ ಸೆಟ್ನಂತೆ ವಿಐಪಿಗಳಿಗೆ ನೀಡುವ ಮದುವೆ ಆಮಂತ್ರಣ ಪತ್ರಿಕೆಯೂ ಅಷ್ಟೇ ಅದ್ಧೂರಿಯಾಗಿದೆ.
ಗಣ್ಯರಿಗಾಗಿ ಮಾಡಿಸಿರುವ ಮದುವೆಯ ಆಮಂತ್ರಣ ಪತ್ರಿಕೆ ನೋಡಿದರೆ ಅಬ್ಬಾ ಎಂದು ಬಾಯಿ ಮೇಲೆ ಬೆರಳಿಟ್ಟುಕೊಳ್ಳುವುದಂತು ಗ್ಯಾರಂಟಿ. ಅದರ ತೂಕವೇ ಬರೋಬ್ಬರಿ 2 ಕೆ.ಜಿ ಇದೆ.
ಆಮಂತ್ರಣ ಪತ್ರಿಕೆಯ ಐದು ಪುಟಗಳನ್ನೂ ವಿಶೇಷವಾಗಿ ವಿನ್ಯಾಸ ಮಾಡಿಸಿದ್ದಾರೆ. ಆರಂಭದಲ್ಲಿ ತಿರುಪತಿ ವೆಂಕಟೇಶ್ವರ ದೇವರ ಚಿತ್ರ ಇದೆ. ಬಳಿಕ ಪ್ರತಿ ಒಂದರಲ್ಲಿ ಕೃಷ್ಣಾ ರುಕ್ಮಿಣಿ ಚಿತ್ರಗಳನ್ನು ಕಣ್ಮನ ಸೆಳೆಯುವ ರೀತಿಯಲ್ಲಿ ಡಿಸೈನ್ ಮಾಡಿಸಲಾಗಿದೆ. ಒಂದು ಆಮಂತ್ರಣ ಪತ್ರಿಕೆಗೆ ₹ 4 ಸಾವಿರ ಖರ್ಚು ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.