ಬೆಂಗಳೂರು : ಉಪಚುನಾವಣೆ ಹಿನ್ನೆಲೆ ಟಿಕೆಟ್ ಆಕಾಂಕ್ಷಿಗಳು ಬಿಜೆಪಿ ಕಚೇರಿಯತ್ತ ಆಗಮಿಸುತ್ತಿದ್ದಾರೆ. ಹಾನಗಲ್ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಚನ್ನಪ್ಪ ರುದ್ರಪ್ಪ ಬಳ್ಳಾರಿ (ಸಿಆರ್ ಬಳ್ಳಾರಿ) ಈ ಬಾರಿ ಟಿಕೆಟ್ ತನಗೆ ಕೊಡಬೇಕು ಅಂತಾ ವರಿಷ್ಠರಲ್ಲಿ ಒತ್ತಾಯ ಮಾಡುತ್ತೇನೆಂದು ತಿಳಿಸಿದರು.
ಜಗನ್ನಾಥ ಭವನದಲ್ಲಿ ಪಕ್ಷದ ವರಿಷ್ಠರನ್ನ ಭೇಟಿ ಮಾಡಿದ ಬಳಿಕ ಮಾತನಾಡಿದ ಅವರು, ಹಾನಗಲ್ನಲ್ಲಿ ವೀರಶೈವ ಪಂಚಮಸಾಲಿ ದೊಡ್ಡ ಸಮುದಾಯ ಇದೆ. ಪಿಡಬ್ಲ್ಯೂಡಿ ಇಲಾಖೆಯಲ್ಲಿ ಇಇ ಆಗಿ ಕಾರ್ಯ ನಿರ್ವಹಿಸಿ ರಿಟೈರ್ಡ್ ಆಗಿದ್ದೇನೆ. ಕಳೆದ 25 ವರ್ಷಗಳಿಂದ ವಿವಿಧ ಕೆಲಸಗಳನ್ನು ಮಾಡಿದ್ದೇನೆ.
ಉದಾಸಿ ಇದ್ದಾಗ ಬಹಳಷ್ಟು ಅಭಿವೃದ್ಧಿ ಆಗಿದೆ. ಅದನ್ನು ನಾನು ಮುಂದುವರೆಸಿಕೊಂಡು ಹೋಗ್ತೇನೆ. ಇತರರಿಗಿಂತ ನಾನು ಹೆಚ್ಚು ಪರಿಚಿತ. ಹಾಗಾಗಿ, ತನಗೆ ಟಿಕೆಟ್ ಕೊಡುವಂತೆ ಒತ್ತಾಯ ಮಾಡುತ್ತೇನೆ ಎಂದು ತಿಳಿಸಿದರು.
ಇದನ್ನೂ ಓದಿ: ಮ್ಯಾಜಿಕ್ ಮಾಡುತ್ತಿದೆ ಮೊರಿಂಗಾ ಪೌಡರ್ : 100ಕ್ಕೂ ಹೆಚ್ಚು ಮಕ್ಕಳು ಅಪೌಷ್ಟಿಕತೆಯಿಂದ ಚೇತರಿಕೆ