ಬಳ್ಳಾರಿ : ಜಿಲ್ಲೆಯ ಜಿಂದಾಲ್ ಸಮೂಹ ಸಂಸ್ಥೆಯು ಕಾರ್ಮಿಕರ ಬದುಕಿನ ಜೊತೆ ಚೆಲ್ಲಾಟ ಆಡುತ್ತಿದೆ ಎಂದು ಸಾಮಾಜಿಕ ಹೋರಾಟಗಾರ ಕುಡಿತಿನಿ ರಾಮು ಆರೋಪಿಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಂದಾಲ್ನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಸಂಸ್ಥೆಯನ್ನ ಸೀಲ್ಡೌನ್ ಮಾಡಲು ರಾಜ್ಯ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕೆಂಬ ಕೂಗು ಎಲ್ಲೆಡೆ ಕೇಳಿ ಬರುತ್ತಿದೆ. ಆದರೂ ಸಹ ಜಿಂದಾಲ್ ಸಮೂಹ ಸಂಸ್ಥೆ ಕಾರ್ಮಿಕರಿಗೆ ಕಡ್ಡಾಯವಾಗಿ ನೌಕರಿಗೆ ಬರುವಂತೆ ಸೂಚಿಸುತ್ತಿದೆ.
ಒಂದು ವೇಳೆ ಕೆಲಸಕ್ಕೆ ಬಾರದೆ ಹೋದಲ್ಲಿ ಕೆಲಸದಿಂದ ವಜಾಗೊಳಿಸುವ ಬೆದರಿಕೆಯನ್ನೊಡ್ಡುತ್ತಿದೆ. ಕಾರ್ಮಿಕರು ಸತ್ತರೂ ಪರವಾಗಿಲ್ಲ ಎಂಬ ಧೋರಣೆಯನ್ನ ಜಿಂದಾಲ್ ತಾಳಿದಂತಿದೆ. ಸೀಲ್ಡೌನ್ ಮಾಡೋಕೆ ಆಗದಿದ್ದಲ್ಲಿ ನಮಗೆ ಜಿಂದಾಲ್ ಮುಖ್ಯ. ಜನರ ಪ್ರಾಣವಲ್ಲ ಎಂದು ಸಾರ್ವಜನಿಕವಾಗಿ ತಿಳಿಸಿ ಎಂದು ಸವಾಲು ಹಾಕಿದ್ದಾರೆ.