ಹೊಸಪೇಟೆ (ಬಳ್ಳಾರಿ): ಕಂಪ್ಲಿ ಪಟ್ಟಣದಲ್ಲಿ ನಿಯಮಬಾಹಿರವಾಗಿ ರೈತರಿಗೆ ರಸಗೊಬ್ಬರ ಮಾರಾಟ ಮಾಡುತ್ತಿದ್ದ ಏಳು ಅಂಗಡಿಗಳ ಪರವಾನಗಿ ರದ್ದು ಮಾಡಲಾಗಿದೆ ಎಂದು ಹೊಸಪೇಟೆ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ತಿಳಿಸಿದ್ದಾರೆ.
ಕಂಪ್ಲಿಯ ನಾರಾಯಣ ಟ್ರೇಡರ್ಸ್, ಕಂಪ್ಲಿ ನಮ್ಮ ಗ್ರೋಮೋರ್ ಕೇಂದ್ರ, ಎಮ್ಮಿಗನೂರು ನಮ್ಮ ಗ್ರೋಮೋರ್ ಕೇಂದ್ರ, ಕೋದಂಡರಾಮ ಎಂಟರ್‌ಪ್ರೈಜಸ್, ಎಂ ಆರ್ ಟ್ರೇಡಿಂಗ್ ಕಂಪನಿ, ವೆಂಕಟಕೃಷ್ಣ ಟ್ರೇಡಿಂಗ್ ಕಂಪನಿ, ಎಮ್ಮಿಗನೂರು ಜಡೆಸಿದ್ದೇಶ್ವರ ಟ್ರೇಡರ್ಸ್ ಸೇರಿ ಒಟ್ಟು ಏಳು ಅಂಗಡಿಗಳ ಪರವಾನಿಗೆ ರದ್ದು ಮಾಡಲಾಗಿದೆ.
ಮಾರಾಟಗಾರರು ಹೆಚ್ಚಿನ ಬೆಲೆಗೆ ರಸಗೊಬ್ಬರ ಮಾರಾಟ ಮಾಡುತ್ತಿದ್ದರು. ಅಲ್ಲದೇ, ಒಬ್ಬರಿಗೆ ಮಾತ್ರ ರಸಗೊಬ್ಬರವನ್ನು ಮಿತಿಮೀರಿ ಮಾರಾಟ ಮಾಡುವುದು. ಜೊತೆಗೆ ಖರೀದಿಸಿದ ರಸಗೊಬ್ಬರ ಬಿಲ್‌ನ ನೀಡುತ್ತಿರಲಿಲ್ಲ. ಹೀಗಾಗಿ, ಪರವಾನಿಗೆ ರದ್ದು ಮಾಡಲಾಗಿದೆ.