ETV Bharat / city

ವಲಸಿಗರನ್ನು ಸುರಕ್ಷಿತವಾಗಿ ಕಳುಹಿಸಿಕೊಡಿ: ಡಿಸಿ ನಕುಲ್ ಸೂಚನೆ

ಜಿಲ್ಲೆಯ ಜೋಳದರಾಶಿ ಚೆಕ್‌ಪೋಸ್ಟ್ ನಿಂದ ರಾಜ್ಯದ ವಿವಿಧ ಜಿಲ್ಲೆಗಳಿಗೆ ತೆರಳಲು ಸೂಕ್ತ ಸಂಪರ್ಕ ವ್ಯವಸ್ಥೆ ಕಲ್ಪಿಸಲು ಹಾಗೂ ವಲಸಿಗರು ತಲುಪಬೇಕಾದ ಸ್ಥಳಕ್ಕೆ ಕಳುಹಿಸಿಕೊಡುವ ವ್ಯವಸ್ಥೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಸೂಚನೆ ನೀಡಿದರು.

Send migrants safely to their districts: DC Nakul Note
ವಲಸಿಗರನ್ನು ಸುರಕ್ಷಿತವಾಗಿ ಅವರ ಜಿಲ್ಲೆಗಳಿಗೆ ಕಳುಹಿಸಿಕೊಡಿ: ಡಿಸಿ ನಕುಲ್ ಸೂಚನೆ
author img

By

Published : May 9, 2020, 12:09 AM IST

ಬಳ್ಳಾರಿ: ಜಿಲ್ಲೆಯ ಜೋಳದರಾಶಿ ಚೆಕ್‌ಪೋಸ್ಟ್ ನಿಂದ ರಾಜ್ಯದ ವಿವಿಧ ಜಿಲ್ಲೆಗಳಿಗೆ ತೆರಳಲು ಸೂಕ್ತ ಸಂಪರ್ಕ ವ್ಯವಸ್ಥೆ ಕಲ್ಪಿಸಲು ಹಾಗೂ ವಲಸಿಗರು ತಲುಪಬೇಕಾದ ಸ್ಥಳಕ್ಕೆ ಕಳುಹಿಸಿಕೊಡುವ ವ್ಯವಸ್ಥೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ಸೂಚನೆ ನೀಡಿದರು.

ವಲಸಿಗರನ್ನು ಅವರ ಜಿಲ್ಲೆಗಳಿಗೆ ಕಳುಹಿಸಿಕೊಡುವ ನಿಟ್ಟಿನಲ್ಲಿ ಈಗಾಗಲೇ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದ್ದು, ಅವರಿಗೆ ತಲಾ 5 ಜನ ಸಹಾಯಕರನ್ನು ಒದಗಿಸಲಾಗಿದೆ. ಅಧಿಕಾರಿಗಳು ತಮಗೆ ನಿಯೋಜಿಸಿದ ಜಿಲ್ಲಾಡಳಿತಕ್ಕೆ ವಾಹನ ತಲುಪಿಸುವ ಬಗ್ಗೆ ಮುಂಚಿತವಾಗಿಯೇ ಸಂಪರ್ಕಿಸಿ ಕನ್ವೇ ಮೂಲಕ ವಾಹನಗಳನ್ನು ಹಿಂಬಾಲಿಸಿ ವಲಸಿಗರನ್ನು ಅಯಾ ಜಿಲ್ಲಾಡಳಿತದ ವಶಕ್ಕೆ ಒಪ್ಪಿಸಿ ಅವರಿಂದ ಸ್ವೀಕೃತಿ ಪತ್ರ ಪಡೆದುಕೊಳ್ಳಬೇಕು ಎಂದು ಸೂಚಿಸಿದರು.

ಪ್ರಯಾಣದ ಸಮಯದಲ್ಲಿ ಯಾವುದೇ ಪ್ರಯಾಣಿಕರು (ಪಾಸ್ ನೀಡಿದ ಸ್ಥಳಕ್ಕೆ ಹೊರತುಪಡಿಸಿ) ವಾಹನ ಇಳಿದುಹೋಗದಂತೆ ಎಚ್ಚರವಹಿಸಬೇಕು. ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಸಂಬಂಧಪಟ್ಟ ಜಿಲ್ಲೆಗಳ ಸಾರಿಗೆ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಅಗತ್ಯ ಕ್ರಮವಹಿಸಬೇಕು ಎಂದು ಅವರು ಸೂಚಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.