ETV Bharat / city

ವೃದ್ಧಾಶ್ರಮದಲ್ಲಿ ಶಿವಣ್ಣ ಹುಟ್ಟು ಹಬ್ಬ ಆಚರಿಸಿದ ಅಪ್ಪು ಫ್ಯಾನ್ಸ್​​​

ರಾಜ್​​ ಕುಟುಂಬಕ್ಕೆ ನಿಮ್ಮಂತ ಹಿರಿಯರ ಆಶೀರ್ವಾದ ಬೇಕು ಹಾಗೂ ಶಿವಣ್ಣ ಆಶಯದಂತೆ ಆಡಂಬರವಿಲ್ಲದೆ ಅತ್ಯಂತ ಸರಳವಾಗಿ ಅವರ ಹುಟ್ಟುಹಬ್ಬವನ್ನು ಅಪ್ಪು ಸೇವಾ ಸಮಿತಿ ಹಮ್ಮಿಕೊಂಡಿದ್ದು, ರಾಜ್​ ಕುಟುಂಬದ ಗೌರವ ಹೆಚ್ಚಿಸಿದೆ..

puneeth-rajkumar-fans-celebrated-shivarajkumar-birthday
ವೃದ್ಧಾಶ್ರಮದಲ್ಲಿ ಶಿವಣ್ಣ ಹುಟ್ಟು ಹಬ್ಬ ಆಚರಿಸಿದ ಅಪ್ಪು ಫ್ಯಾನ್ಸ್​​​
author img

By

Published : Jul 12, 2020, 4:38 PM IST

ಬಳ್ಳಾರಿ : ಅಪ್ಪು ಸೇವಾ ಸಮಿತಿ ನೇತೃತ್ವದಲ್ಲಿ ಇಂದು ಡಾ. ಶಿವರಾಜ್‌ಕುಮಾರ್ ಅವರ 58ನೇ ಹುಟ್ಟುಹಬ್ಬವನ್ನು ನಗರದ ಸಂಗನಕಲ್ಲು ವೃದ್ಧಾಶ್ರಮದಲ್ಲಿ ಕೇಕ್ ಕಟ್ ‌ಮಾಡುವ ಮೂಲಕ ಆಚರಣೆ ಮಾಡಲಾಯಿತು.

ಎಎಸ್‌ಐ ಹೊನ್ನಪ್ಪ ಅವರು ಮಾತನಾಡಿ, ರಾಜ್​​ ಕುಟುಂಬದಿಂದ ಬರುವ ಚಿತ್ರಗಳು ಸಮಾಜಕ್ಕೆ ಒಂದು ಸಂದೇಶ ನೀಡುವ ಚಿತ್ರವಾಗಿರುತ್ತದೆ. ಶಿವಣ್ಣನವರು ಸಹ ಅದೇ ಹಾದಿಯಲ್ಲಿ ಸಾಗಿ, ತಂದೆಯಂತೆ ಅಪಾರ ಅಭಿಮಾನಿಗಳನ್ನ ಗಳಿಸಿದ್ದಾರೆ ಎಂದರು.

ವೃದ್ಧಾಶ್ರಮದಲ್ಲಿ ಶಿವಣ್ಣ ಹುಟ್ಟುಹಬ್ಬ ಆಚರಿಸಿದ ಅಪ್ಪು ಫ್ಯಾನ್ಸ್​​​

ಸನ್ಮಾರ್ಗದ ಕಾರ್ಯದರ್ಶಿ ಮತ್ತು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾಗಿರುವ ಕಪ್ಪಗಲ್ ಚಂದ್ರಶೇಖರ ಆಚಾರ್ ಮಾತನಾಡಿ, ರಾಜ್​​ ಕುಟುಂಬಕ್ಕೆ ನಿಮ್ಮಂತ ಹಿರಿಯರ ಆಶೀರ್ವಾದ ಬೇಕು ಹಾಗೂ ಶಿವಣ್ಣ ಆಶಯದಂತೆ ಆಡಂಬರವಿಲ್ಲದೆ ಅತ್ಯಂತ ಸರಳವಾಗಿ ಅವರ ಹುಟ್ಟುಹಬ್ಬವನ್ನು ಅಪ್ಪು ಸೇವಾ ಸಮಿತಿ ಹಮ್ಮಿಕೊಂಡಿದ್ದು, ರಾಜ್​ ಕುಟುಂಬದ ಗೌರವ ಹೆಚ್ಚಿಸಿದೆ ಎಂದು ಹೇಳಿದರು. ನಂತರ ಗೋವುಗಳಿಗೆ, ಪ್ರಾಣಿಗಳಿಗೆ ಜೆ.ಪಿ ಮಂಜುನಾಥ್ ರಾಜೇಶ್ ಹುಂಡೇಕರ್ ಸಮ್ಮುಖದಲ್ಲಿ ಆಹಾರಧಾನ್ಯಗಳನ್ನ ವಿತರಣೆ ಮಾಡಲಾಯಿತು.

ಅಪ್ಪು ಸೇವಾ ಸಮಿತಿಯ ಜಿಲ್ಲಾ ಉಸ್ತುವಾರಿ ಜೆ.ಪಿ ಮಂಜುನಾಥ್, ಅಧ್ಯಕ್ಷ ರವಿಕುಮಾರ್ ಹಾಗೂ ಉಪಾಧ್ಯಕ್ಷ ಹೆಚ್. ರಾಜೇಶ್, ಹಾಗೂ ಸದಸ್ಯರಾದ ಗಣೇಶ್, ಸುಜಿತ್ ಕುಮಾರ್, ಲಕ್ಷ್ಮಿ ರೆಡ್ಡಿ, ಅಶೋಕ್ ಕುಮಾರ್, ವೆಂಕಟೇಶ್ ಬಾಬು, ವೀರೇಶ್ ಕುಮಾರ್, ಪ್ರವೀಣ್ ಕುಮಾರ್, ಸುನಿಲ್, ಕುಮಾರಸ್ವಾಮಿ ಹಾಗೂ ಎಲ್ಲಾ ಸದಸ್ಯರು ಭಾಗವಹಿಸಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.