ಬಳ್ಳಾರಿ : ನಗರದ ರೈಲ್ವೆ ನಿಲ್ದಾಣದ ವಾಹನಗಳ ಪಾರ್ಕಿಂಗ್ ಟೆಂಡರ್ ಪ್ರಕ್ರಿಯೆಯನ್ನು 19 ನವೆಂಬರ್ 2019 ರಿಂದ 18 ನವೆಂಬರ್ 2022 ರವರೆಗೆ ಹುಬ್ಬಳ್ಳಿಯ ಎಂ.ಕೆ ಬೆಳವಾಡಿ ಅವರಿಗೆ ನೈಋತ್ಯ ರೈಲ್ವೆ ಇಲಾಖೆ ನೀಡಿ ಆದೇಶ ಹೊರಡಿಸಿದೆ.
ಹೌದು, ನೂರಾರು ವಾಹನ ಸವಾರರು ರೈಲ್ವೆ ನಿಲ್ದಾಣದಲ್ಲಿ ವಾಹನಗಳ ಪಾರ್ಕಿಂಗ್ ಮಾಡುತ್ತಿದ್ದರು. ಪಾರ್ಕಿಂಗ್ ಟೆಂಡರ್ ಪ್ರಕ್ರಿಯೆ ಆಗಿಲ್ಲದ ಕಾರಣ ವಾಹನಗಳಿಗೆ ಹಣ ನೀಡದೇ ಆರಾಮವಾಗಿ ತಮ್ಮ ಗಾಡಿಗಳನ್ನು ಬೆಳಗ್ಗೆಯಿಂದ ಸಂಜೆ, ರಾತ್ರಿವರೆಗೂ ಪ್ರಯಾಣಿಕರು ನಿಲುಗಡೆ ಮಾಡುತ್ತಿದ್ದರು. ಈ ಕುರಿತು ಈ ಟಿವಿ ಭಾರತ "15 ದಿನಗಳಿಂದ ಪಾರ್ಕಿಂಗ್ ಟೆಂಡರ್ ಪ್ರಕ್ರಿಯೆ ಇಲ್ಲ: ವಾಹನ ಸವಾರರಿಗೆ ಸಂತೋಷ" ಎಂಬ ತಲೆಬರಹದ ಅಡಿ ವರದಿ ಪ್ರಕಟ ಮಾಡಿತ್ತು. ಇದರಿಂದ ಎಚ್ಚೆತ್ತ ರೈಲ್ವೆ ಇಲಾಖೆ 2019 ರಿಂದ 2022 ಈ ಮೂರು ವರ್ಷಗಳ ಪಾರ್ಕಿಂಗ್ ಟೆಂಡರ್ ಪ್ರಕ್ರಿಯೆ ನೀಡಿದೆ. ಪ್ರತಿ ವರ್ಷದ ಜಿ.ಎಸ್.ಟಿ ಸೇರಿ 23,95,380 ರೂಪಾಯಿ ಟೆಂಡರ್ ಇಂದ ಬರುತ್ತಿದೆ.
15 ದಿನಗಳಿಂದ ಪಾರ್ಕಿಂಗ್ ಟೆಂಡರ್ ಪ್ರಕ್ರಿಯೆ ಇಲ್ಲ: ವಾಹನ ಸವಾರರಿಗೆ ಸಂತೋಷ
ಇನ್ನು ಟೆಂಡರ್ದಾರರು ಇಂದು ಹಣ ಕೇಳಲು ಬಂದಾಗ ವಾಹನ ಸವಾರರು ಪ್ರಶ್ನೆ ಮಾಡಿದರು. ಅಧಿಕೃತವಾಗಿ ಟೆಂಡರ್ ಆಗಿದೆ ಎಂದು ಆದೇಶ ಪ್ರತಿಯನ್ನು ತೋರಿಸಿದಾಗ ಹಣ ನೀಡಿದ ದೃಶ್ಯ ಕಂಡು ಬಂದಿತು.