ಕಲಬುರಗಿ: ಜಿಲ್ಲೆಯ ಆಕ್ಸಿಜನ್ ಕೊರತೆಯಿಂದಾಗಿ ನಿತ್ಯ ಹಲವರು ಸಾವನ್ನಪ್ಪುತ್ತಿರುವ ಹಿನ್ನೆಲೆ ಬಳ್ಳಾರಿಯ ಜಿಂದಾಲ್ ಪ್ಲಾಂಟ್‌ನಿಂದ ಇಂದು ಕಲಬುರಗಿಗೆ ಆಕ್ಸಿಜನ್ ತರಿಸಲಾಗಿದೆ.
ಕಲಬುರಗಿ ಜಿಲ್ಲೆಯ ಆಕ್ಸ್ ಕೊರತೆ ವಿಪರಿತವಾಗಿ ಅನೇಕರು ಮೃತಪಟ್ಟಿದ್ದಾರೆ. ನಗರದ ಜಿಮ್ಸ್ ಆಸ್ಪತ್ರೆ ಸೇರಿದಂತೆ ಖಾಸಗಿ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಕೊರತೆ ಹೆಚ್ಚಾಗಿದೆ. ಇದರಿಂದ ಕೋವಿಡ್ ಮಾತ್ರವಲ್ಲ ನಾನ್ ಕೋವಿಡ್ ರೋಗಿಗಳು ಸಹ ಆಸ್ಪತ್ರೆಯಿಂದ ಆಸ್ಪತ್ರೆಗಳಿಗೆ ಅಲೆದಾಡಿ ಆಕ್ಸಿಜನ್ ವ್ಯವಸ್ಥೆ ಸಿಗದೇ ಆ್ಯಂಬುಲೆನ್ಸ್, ಕಾರ್ಗಳಲ್ಲಿ ಜೀವ ಕಳೆದುಕೊಳ್ಳುತ್ತಿದ್ದಾರೆ. ಹೀಗಾಗಿ ಕಲಬುರಗಿ ಜಿಲ್ಲಾಡಳಿತವು ಬಳ್ಳಾರಿಯ ಜಿಂದಾಲ್ ಕಂಪನಿಯಿಂದ ಆಕ್ಸಿಜನ್ ತರಿಸಿದೆ.
ಬಳ್ಳಾರಿಯ ಜಿಂದಾಲ್ ಪ್ಲಾಂಟ್‌ನಿಂದ ಇಂದು ಪೊಲೀಸ್ ಭದ್ರತೆಯಲ್ಲಿ ಕಲಬುರಗಿಗೆ 15ಕೆ ಎಲ್ ಆಕ್ಸಿಜನ್ ಬಂದಿದೆ. ಆಕ್ಸಿಜನ್ ಟ್ಯಾಂಕರ್ ಅನ್ನು ನೇರವಾಗಿ ಕಲಬುರಗಿ ಜಿಮ್ಸ್ ಆಸ್ಪತ್ರೆಯ ಆಕ್ಸಿಜನ್ ಘಟಕಕ್ಕೆ ಒಯ್ಯಲಾಗಿದ್ದು, ಪೊಲೀಸರ ಸಮ್ಮುಖದಲ್ಲಿ ಜಿಮ್ಸ್‌ನ ಆಕ್ಸಿಜನ್ ಟ್ಯಾಂಕರ್‌ಗೆ ಆಕ್ಸಿಜನ್ ಡಂಪ್ ಮಾಡಲಾಯಿತು.