ETV Bharat / city

ಮಹಿಳೆಯರು-ಮಕ್ಕಳ ದೂರುಗಳ ತುರ್ತು ಸ್ಪಂದನೆಗೆ ನಿರ್ಭಯ ಬೈಕ್​ಗಳು ಸಹಕಾರಿ : ಬಳ್ಳಾರಿ ಎಸ್​ಪಿ - ಮಹಿಳೆಯರು-ಮಕ್ಕಳ ದೂರುಗಳ ತುರ್ತು ಸ್ಪಂದನೆಗೆ ನಿರ್ಭಯಾ ಬೈಕ್

ನಿರ್ಭಯ ನಿಧಿ ಸೇರಿ ವಿವಿಧ ಅನುದಾನಗಳಡಿ ಸೌಕರ್ಯಗಳನ್ನು ಸರ್ಕಾರ ನೀಡುತ್ತಿದೆ. ಈ ಮೂಲಕ ಠಾಣೆಗಳ ಬಲವರ್ಧನೆಯಾಗುತ್ತಿವೆ..

nirbhaya-bikes-can-help-women-and-children-respond-to-complaints-sp-saidulu-adawat
ಮಹಿಳೆಯರು-ಮಕ್ಕಳ ದೂರುಗಳ ತುರ್ತು ಸ್ಪಂದನೆಗೆ ನಿರ್ಭಯಾ ಬೈಕ್​ಗಳು ಸಹಕಾರಿ: ಬಳ್ಳಾರಿ ಎಸ್​ಪಿ
author img

By

Published : Jan 2, 2021, 1:38 PM IST

ಬಳ್ಳಾರಿ : ಮಹಿಳೆಯರು ಮತ್ತು ಮಕ್ಕಳ ದೂರುಗಳಿಗೆ ತಕ್ಷಣವೇ ಸ್ಪಂದಿಸುವ ನಿಟ್ಟಿನಲ್ಲಿ ಜಿಲ್ಲೆಗೆ 39 ನಿರ್ಭಯ ಬೈಕ್​ ಮಂಜೂರಾಗಿವೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೈದುಲು ಅಡಾವತ್ ಅವರು ನಗರದ ಡಿಎಆರ್ ಮೈದಾನದಲ್ಲಿ ಹೊಸ ಬೈಕ್‌ಗಳನ್ನ ಪೊಲೀಸರಿಗೆ ಹಸ್ತಾಂತರಿಸಿದರು.

ಮಹಿಳೆಯರು-ಮಕ್ಕಳ ದೂರುಗಳ ತುರ್ತು ಸ್ಪಂದನೆಗೆ ನಿರ್ಭಯ ಬೈಕ್​ ಸಹಕಾರಿ : ಬಳ್ಳಾರಿ ಎಸ್​ಪಿ

ಬಳಿಕ ಮಾತನಾಡಿದ ಅವರು, ಜಿಲ್ಲೆಯ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಮಹಿಳೆಯರು ಮತ್ತು ಮಕ್ಕಳ ಸಮಸ್ಯೆಗಳಿಗೆ ಪೊಲೀಸರು ತಕ್ಷಣ ತೆರಳಿ ಸ್ಪಂದಿಸಲು ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ 39 ನಿರ್ಭಯ ದ್ವಿಚಕ್ರ ವಾಹನಗಳನ್ನು ಜಿಲ್ಲೆಗೆ ಮಂಜೂರು ಮಾಡಲಾಗಿದೆ.

ನಿರ್ಭಯ ನಿಧಿ ಸೇರಿ ವಿವಿಧ ಅನುದಾನಗಳಡಿ ಸೌಕರ್ಯಗಳನ್ನು ಸರ್ಕಾರ ನೀಡುತ್ತಿದೆ. ಈ ಮೂಲಕ ಠಾಣೆಗಳ ಬಲವರ್ಧನೆಯಾಗುತ್ತಿವೆ ಎಂದರು. ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ ಎನ್ ಲಾವಣ್ಯ ಮಾತನಾಡಿ, ಕಳೆದ ವರ್ಷ ಮಹಿಳೆಯರು ಮತ್ತು ಮಕ್ಕಳ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ 30 ಸದಸ್ಯರನ್ನೊಳಗೊಂಡ ದುರ್ಗಾ ತಂಡಗಳನ್ನು ರಚಿಸಲಾಗಿತ್ತು.

ಅವುಗಳು ಬಳ್ಳಾರಿ ಮತ್ತು ಹೊಸಪೇಟೆ ನಗರಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ಮುಂದಿನ ದಿನಗಳಲ್ಲಿ ಎಲ್ಲ ತಾಲೂಕು ಕೇಂದ್ರಗಳಲ್ಲಿ ಈ ತಂಡಗಳನ್ನು ವಿಸ್ತರಿಸಲಾಗುವುದು. ನಿರ್ಭಯ ನಿಧಿಯಡಿ ದ್ವಿಚಕ್ರವಾಹನಗಳ ನೀಡಿಕೆಯಿಂದಾಗಿ ಮಹಿಳೆಯರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಲು ಇನ್ನಷ್ಟು ಅನುಕೂಲವಾಗಲಿದೆ ಎಂದರು.

ನಂತರ ನಿರ್ಭಯ ದ್ವಿಚಕ್ರ ವಾಹನಗಳ ಮುಖಾಂತರ ಪೊಲೀಸ್ ಅಧಿಕಾರಿಗಳು ಹಾಗೂ ಪೊಲೀಸ್ ಸಿಬ್ಬಂದಿಯು ಸಂಚಾರ ನಿಯಮಗಳ ಕುರಿತು ಹಾಗೂ ಕಡ್ಡಾಯ ಹೆಲ್ಮೆಟ್ ಕುರಿತು ನಗರದ ವಿವಿಧೆಡೆ ಸಂಚರಿಸುವ ಮೂಲಕ ಜಾಗೃತಿ ಮೂಡಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.