ಹೊಸಪೇಟೆ: ನಗರದ ಖಾಸಗಿ ಆಸ್ಪತ್ರೆಯಲ್ಲಿ 9 ಬೆರಳುಳ್ಳ ಗಂಡು ಮಗುವಿಗೆ ತಾಯಿ ಜನ್ಮ ನೀಡಿದ್ದಾರೆ. ಈ ಘಟನೆ ಎಲ್ಲರನ್ನೂ ಆಶ್ಚರ್ಯಚಕಿತರನ್ನಾಗಿದೆ.
ಗಂಡು ಮಗುವಿನ ಎಡಗಾಲಿನಲ್ಲಿ ಒಂಬತ್ತು ಬೆರಳುಗಳಿವೆ. ಆದರೆ, ಬಲಗಾಲಿಗೆ ಸಹಜವಾಗಿ ಐದು ಬೆರಳುಗಳಿವೆ. ಸಿಜೇರಿಯನ್ ಮೂಲಕ ಹೆರಿಗೆ ಮಾಡಿಸಲಾಗಿದೆ. ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ. ತಾಯಿ ಹೊಸಪೇಟೆ ತಾಲೂಕಿನ ನಿವಾಸಿ ಆಗಿದ್ದಾರೆ. ಆದರೆ, ತಾಯಿ ಹೆಸರು ಹಾಗೂ ವಿಳಾಸವನ್ನು ಬಹಿರಂಗ ಪಡಿಸಲು ಕುಟುಂಬಸ್ಥರು ಒಪ್ಪಿಲ್ಲ.
ಇದನ್ನು ಓದಿ: ವಿಚಿತ್ರ ಘಟನೆ; ಹುಟ್ಟುತ್ತಲೇ ಮಗುವಿನ ಬಾಯಲ್ಲಿ 32 ಹಲ್ಲು!
'ಈಟಿವಿ ಭಾರತ'ದೊಂದಿಗೆ ವೈದ್ಯ ಬಾಲಚಂದ್ರನ್ ಮಾತನಾಡಿ, ಜಗತ್ತಿನಲ್ಲಿ ಹುಟ್ಟಿದ 20 ಮಕ್ಕಳಲ್ಲಿ ಒಂಬತ್ತು ಬೆರಳುಗಳಿವೆ. ಒಂಬತ್ತು ಬೆರಳುಗಳುಳ್ಳ ಮಗು ಜನ್ಮ ತಾಳುವುದು ತೀರಾ ಕಡಿಮೆ. ಅಲ್ಲದೇ, ಇಷ್ಟು ಬೆರಳು ಇರುವುದು ಮುಂಚಿತವಾಗಿ ತಿಳಿಯುವುದಿಲ್ಲ. ಜನನವಾದ ಬಳಿಕ ಅದು ತಿಳಿಯುತ್ತದೆ ಎಂದು ಮಾಹಿತಿ ನೀಡಿದರು.
ಮೊನ್ನೆಯಷ್ಟೇ ಮಧ್ಯಪ್ರದೇಶದ ಬುಡಕಟ್ಟು ಕುಟುಂಬವೊಂದರಲ್ಲಿ ನವಜಾತ ಶಿಶುವೊಂದು ಹುಟ್ಟುತ್ತಲೇ 32 ಹಲ್ಲುಗಳನ್ನು ಹೊಂದಿತ್ತು. ಇದು ಜನರ ಅಚ್ಚರಿಗೆ ಕಾರಣವಾಗಿತ್ತು. ಆದ್ರೆ ಜನಿಸಿದ 11 ಗಂಟೆಗಳಲ್ಲಿ ಅದು ಮೃತಪಟ್ಟಿತ್ತು.