ETV Bharat / city

ಕರ್ನಾಟಕ ಬಂದ್.. NWKSRTC ಹೊಸಪೇಟೆ ವಿಭಾಗಕ್ಕೆ ಅಂದಾಜು ₹18 ಲಕ್ಷ ನಷ್ಟ

ಒಟ್ಟು 244 ಬಸ್​​ ಕಾರ್ಯಾಚರಣೆ ಮಾಡಬೇಕಿತ್ತು. ಆದರೆ, ಬೆಳಗ್ಗೆ 5 ರಿಂದ 151 ಬಸ್‌ ಮಾತ್ರ ರಸ್ತೆಗಿಳಿದಿವೆ.‌ ಅಲ್ಲದೇ, ಸಂಚರಿಸಿದ ಬಸ್​ಗಳು ಪ್ರತಿಭಟನೆಯಿಂದ ಅಲ್ಲಲ್ಲಿ ನಿಂತಿವೆ.‌ ಒಂದು ದಿನಕ್ಕೆ ₹30 ಲಕ್ಷ ಆದಾಯ ಬರುತ್ತಿತ್ತು. ಆದರೆ, ಕರ್ನಾಟಕ ಬಂದ್​ನಿಂದ ಆದಾಯಕ್ಕೆ ಹೊಡೆತ ಬಿದ್ದಿದೆ..

NEKSRT Hosapete division  Loss  Rs 18 lakhs Due to Karnataka bandh
ಕರ್ನಾಟಕ ಬಂದ್: ವಾ.ಕ.ರ.ಸಾ.ಸಂಸ್ಥೆ ಹೊಸಪೇಟೆ ವಿಭಾಗಕ್ಕೆ ಅಂದಾಜು 18 ಲಕ್ಷ ರೂ. ನಷ್ಟ
author img

By

Published : Sep 28, 2020, 6:23 PM IST

ಹೊಸಪೇಟೆ(ಬಳ್ಳಾರಿ): ಕರ್ನಾಟಕ ಬಂದ್​ನಿಂದಾಗಿ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹೊಸಪೇಟೆ ವಿಭಾಗಕ್ಕೆ ಅಂದಾಜು ₹18 ಲಕ್ಷ ನಷ್ಟವಾಗಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಜಿ ಶೀನಯ್ಯ ತಿಳಿಸಿದ್ದಾರೆ.

ಕರ್ನಾಟಕ ಬಂದ್.. ವಾಕರಸಾ ಸಂಸ್ಥೆ ಹೊಸಪೇಟೆ ವಿಭಾಗಕ್ಕೆ ಅಂದಾಜು ₹18 ಲಕ್ಷ ನಷ್ಟ

ಈಟಿವಿ ಭಾರತದೊಂದಿಗೆ ಮಾತನಾಡಿದ ಅವರು, ಕೊರೊನಾ ಲಾಕ್​ಡೌನ್​ನಿಂದಾಗಿ ಹೊಸಪೇಟೆ ವಿಭಾಗಕ್ಕೆ ಪ್ರತಿ ತಿಂಗಳಿಗೆ 1 ಕೋಟಿ ಹಣ ನಷ್ಟವಾಗಿತ್ತು.‌ ಕರ್ನಾಟಕ ಬಂದ್​ನಿಂದ ಗಾಯದ ಮೇಲೆ ಬರೆ ಎಳೆದಂತಾಗಿದೆ. ಹೊಸಪೇಟೆಯ ಒಟ್ಟು 244 ಬಸ್​​ ಕಾರ್ಯಾಚರಣೆ ಮಾಡಬೇಕಿತ್ತು.

ಆದರೆ, ಬೆಳಗ್ಗೆ 5 ರಿಂದ 151 ಬಸ್‌ಗಳು ಮಾತ್ರ ರಸ್ತೆಗಿಳಿದಿವೆ. ಅಲ್ಲದೇ, ಸಂಚರಿಸಿದ ಬಸ್​ಗಳು ಪ್ರತಿಭಟನೆಯಿಂದ ಅಲ್ಲಲ್ಲಿ ನಿಂತಿವೆ.‌ ಒಂದು ದಿನಕ್ಕೆ ₹30 ಲಕ್ಷ ಆದಾಯ ಬರುತ್ತಿತ್ತು. ಆದರೆ, ಕರ್ನಾಟಕ ಬಂದ್​ನಿಂದ ಆದಾಯಕ್ಕೆ ಹೊಡೆತ ಬಿದ್ದಿದೆ ಎಂದರು.

ಬಸ್ ಕಾರ್ಯಾಚರಣೆ: ಮಧ್ಯಾಹ್ನ 3ಗಂಟೆಯಿಂದ ಹೊಸಪೇಟೆ ವಿಭಾಗದ ಬಸ್​ಗಳು ಕಾರ್ಯಾಚರಣೆ ಮಾಡುತ್ತಿವೆ. ರಾತ್ರಿ ಪಾಳಿಯ ಬಸ್​ಗಳನ್ನು ಕರ್ನಾಟಕ ಬಂದ್​ನಿಂದ ರದ್ದು ಮಾಡಲಾಗಿದೆ‌.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.