ಬಳ್ಳಾರಿ: ಹೊಸಪೇಟೆ ನಗರದ ಎಂಪಿಎಂಸಿ ರಸ್ತೆಯಲ್ಲಿರುವ ಮೈತ್ರಿ ಆಸ್ಪತ್ರೆಗೆ ಅಪಘಾತ ನಡೆದ ದಿನ (ಫೆಬ್ರವರಿ 10) ಕಾರಿನಲ್ಲಿ ಗಾಯಾಳುಗಳನ್ನು ಕರೆದೊಯ್ಯಲಾಗಿತ್ತು.
ಓದಿಗಾಗಿ: ಸಚಿವರ ಪುತ್ರ ಪ್ರಯಾಣಿಸುತ್ತಿದ್ದ ಕಾರು ಅಪಘಾತ... ಪಾದಚಾರಿ ಸೇರಿ ಇಬ್ಬರ ಸಾವು
ಆಸ್ಪತ್ರೆ ಮುಂದೆ ಕಾರೊಂದು ಬರುತ್ತಿದ್ದಂತೆಯೇ ಆಸ್ಪತ್ರೆಯ ಸಿಬ್ಬಂದಿ ಸ್ಟ್ರೆಚರ್ ತೆಗೆದುಕೊಂಡು ಹೊರ ನಡೆಯುತ್ತಾರೆ. ಆಗ ವೈದ್ಯರೊಬ್ಬರು ಹೊರಗೆ ಬಂದಿದ್ದು, ಕಾರಿನೊಳಗಿದ್ದ ರೋಗಿಯನ್ನು ತಪಾಸಣೆ ಮಾಡಿ, ಇಲ್ಲಿ ಚಿಕಿತ್ಸೆ ನೀಡಲು ಆಗುವುದಿಲ್ಲ ಎಂದು ತಿಳಿಸಿದ್ದಾರೆ ಎನ್ನಲಾಗಿದೆ.
ಕಾರಿಂದ ಹೊರಗೂ ಕೂಡ ಇಳಿಯದೇ ಆಸ್ಪತ್ರೆಯ ಪ್ರವೇಶದ್ವಾರದ ಬಳಿಯೇ ಯು ಟರ್ನ್ ತೆಗೆದುಕೊಂಡು ಹೋಗ್ತಾರೆ. ಈ ದೃಶ್ಯಾವಳಿಯೂ ಆಸ್ಪತ್ರೆ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ನಿಜಕ್ಕೂ ಆ ಕಾರಿನಲ್ಲಿದ್ದವರು ಯಾರೆಂಬುದು ತಿಳಿದು ಬಂದಿಲ್ಲ.