ETV Bharat / city

ಮಹಾರಾಷ್ಟ್ರದಲ್ಲಿ ವರುಣನ ಆರ್ಭಟ: ರಾಜ್ಯದ ರೈತರ ಬೆಳೆಗಳೆಲ್ಲ ನೀರು ಪಾಲು - undefined

ಕೃಷ್ಣಾ ನದಿಗೆ ಭಾರಿ ಪ್ರಮಾಣದ ನೀರು ಹರಿದು ಬರುತ್ತಿರುವ ಪರಿಣಾಮ ಚಿಕ್ಕೋಡಿ ತಾಲೂಕಿನ ನದಿ ತೀರದ ಪ್ರದೇಶಗಳಲ್ಲಿ ಬೆಳೆದ ಬೆಳೆಗೆ ನೀರು ನುಗ್ಗಿದೆ. ಕಬ್ಬು, ಬಾಳೆ, ಸೋಯಾಬಿನ್, ಶೇಂಗಾ, ಮೆಕ್ಕೆ ಜೋಳ ಸೇರಿದಂತೆ ಪ್ರಮುಖ ಬೆಳೆಗಳಲ್ಲಿ ನೀರು ಹೋಗಿ ಬೆಳೆಗಳು ಸಂಪೂರ್ಣವಾಗಿ ನಾಶವಾಗಿದೆ.

ಮಳೆ
author img

By

Published : Jul 15, 2019, 1:16 PM IST

Updated : Jul 15, 2019, 1:54 PM IST

ಚಿಕ್ಕೋಡಿ : ನೆರೆಯ ಮಹಾರಾಷ್ಟ್ರದ ಕೊಂಕಣ ಪ್ರದೇಶದಲ್ಲಿ ಮಳೆಯ ಪ್ರಮಾಣ ಕಡಿಮೆಯಾದರೂ ನೀರಿನ ಹರಿವಿನ ಪ್ರಮಾಣ ಮಾತ್ರ ಹೆಚ್ಚಾಗಿದೆ. ಹೀಗಾಗಿ ಗಡಿ ಭಾಗದ ಕೃಷ್ಣಾ ಮತ್ತು ಉಪನದಿಗಳ ನೀರಿನ ಮಟ್ಟ ಏರಿಕೆಯಾಗಿದೆ.

ಮಳೆ ನೀರಿನಿಂದಾಗಿ ಹಾಳಾಗಿರುವ ಬೆಳೆಗಳು

ಕಳೆದ ಹದಿನೈದು ದಿನಗಳಿಂದ ಮಹಾರಾಷ್ಟ್ರದಲ್ಲಿ ಸತತ ಮಳೆ ಸುರಿಯುತ್ತಿರುವುದರಿಂದ ಚಿಕ್ಕೋಡಿ ತಾಲೂಕಿನ ಕೃಷ್ಣಾ, ದೂಧಗಂಗಾ, ವೇದಗಂಗಾ ನೀರಿನ‌ ಮಟ್ಟದಲ್ಲಿ ಭಾರಿ ಏರಿಕೆಯಾಗಿ ಅಪಾಯದ ಮಟ್ಟ ಮೀರಿ ನದಿಗಳು ಮೈದುಂಬಿ ಹರಿಯುತ್ತಿವೆ.

ಮಹಾರಾಷ್ಟ್ರದಿಂದ ಕೃಷ್ಣಾ ನದಿಗೆ ಒಂದು ಲಕ್ಷಕ್ಕೂ ಅಧಿಕ‌ ಕ್ಯೂಸೆಕ್ ನೀರು ಹರಿದು ಬರುತ್ತಿದ್ದರಿಂದ ಕೆಳ ಹಂತದ ಆರು ಸೇತುವೆಗಳು ಮುಳುಗಡೆಯಾಗಿವೆ. ಹೀಗಾಗಿ ಜನ ಸಂಕಷ್ಟಕ್ಕೀಡಾಗಿದ್ದು, ಸುತ್ತು ಬಳಸಿ ಪರ್ಯಾಯ ಮಾರ್ಗದಿಂದ‌ ಸಂಚರಿಸಬೇಕಾಗಿದೆ.

ಕೃಷ್ಣಾ ನದಿಗೆ ಭಾರಿ ಪ್ರಮಾಣದ ನೀರು ಹರಿದು ಬರುತ್ತಿರುವ ಪರಿಣಾಮ ಚಿಕ್ಕೋಡಿ ತಾಲೂಕಿನ ನದಿ ತೀರದ ಪ್ರದೇಶಗಳ ಬೆಳೆಗಳಲ್ಲಿ ನೀರು ಪ್ರವೇಶಿಸಿದ್ದು. ಪ್ರಮುಖ ಬೆಳೆಗಳು ಸಂಪೂರ್ಣವಾಗಿ ನಾಶವಾಗಿದೆ. ಕಬ್ಬು, ಬಾಳೆ, ಸೋಯಾಬಿನ್, ಶೇಂಗಾ, ಮೆಕ್ಕೆ ಜೋಳ ಸೇರಿದಂತೆ ಪ್ರಮುಖ ಬೆಳೆಗಳಲ್ಲಿ ನೀರು ಹೋಗಿ ಬೆಳೆಗಳು ಸಂಪೂರ್ಣವಾಗಿ ನಾಶವಾಗಿವೆ.

ಚಿಕ್ಕೋಡಿ ತಾಲೂಕಿನ ಕಲ್ಲೋಳ, ಚಂದೂರ, ಇಂಗಳಿ, ಯಡೂರ, ಮಾಂಜರಿ, ಸೇರಿದಂತೆ ಗ್ರಾಮಗಳ ನದಿ ತೀರದಲ್ಲಿ ಹೊಲ-ಗದ್ದೆಗಳಲ್ಲಿ ನೀರು ಹೋಗಿ ಬೆಳೆಗಳು ಸಂಪೂರ್ಣವಾಗಿ ನಾಶವಾಗಿವೆ. ಇದರಿಂದ ಸಾವಿರಾರು ರೂಪಾಯಿ ವೆಚ್ಚದಲ್ಲಿ ಬೆಳೆದ ಬೆಳೆಗಳು ನೀರು ಪಾಲಾಗಿದ್ದು, ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಇತ್ತ ಹಿಪ್ಪರಗಿ ಡ್ಯಾಂನಿಂದ 90,000 ಕ್ಯೂಸೆಕ್ ನೀರು ಹರಿಬಿಡುವುತ್ತಿರುವುದರಿಂದ ಚಿಕ್ಕೋಡಿ ಉಪ ವಿಭಾಗದಲ್ಲಿ ಪ್ರವಾಹ ಉಂಟಾಗುವ ಸಾಧ್ಯತೆ ಕಡಿಮೆ ಇದೆ ಎನ್ನುತ್ತಾರೆ ಚಿಕ್ಕೋಡಿ ತಹಸೀಲ್ದಾರ ಸಂತೋಷ ಬಿರಾದರ.

ಒಟ್ಟಿನಲ್ಲಿ ಬೇಸಿಗೆ ಬಂದ್ರೆ ನದಿಯಲ್ಲಿ ನೀರು ಇಲ್ಲದೆ ಈ ಭಾಗದ ರೈತರು ಪರದಾಡುತ್ತಾರೆ. ಮಳೆಗಾಲದಲ್ಲಿ ಮಳೆಯಿಂದಾಗಿ ಬೆಳೆದ ಬೆಳೆಗಳು ಹಾಳಾಗುತ್ತಿದ್ದು, ಇಲ್ಲಿನ ರೈತರಿಗೆ ಸರ್ವಕಾಲುವೂ ಸಂಕಷ್ಟವೇ ಎಂಬಂತಾಗಿದೆ.

Intro:ಮಹಾರಾಷ್ಟ್ರದ ಅತಿಯಾದ ಮಳೆಯಿಂದಾಗಿ ಕರ್ನಾಟಕದ ಗಡಿಭಾಗದ ರೈತರ ಬೆಳೆಗಳೆಲ್ಲ ನೀರಿನ ಪಾಲುBody:

ಚಿಕ್ಕೋಡಿ :

ನೆರೆಯ ಮಹಾರಾಷ್ಟ್ರದ ಕೊಂಕಣ ಪ್ರದೇಶದಲ್ಲಿ ಮಳೆಯ ಪ್ರಮಾಣವು ಕಡಿಮೆಯಾದರೂ ಮಾತ್ರ ನೀರಿನ ಹರಿವಿನ ಪ್ರಮಾಣ ಹೆಚ್ಚಾಗಿದ್ದು ಗಡಿ ಭಾಗದ ಕೃಷ್ಣಾ ಮತ್ತು ಉಪನದಿಗಳ ನೀರಿನ ಮಟ್ಟ ಏರಿಕೆಯಾಗಿದೆ.

ಕಳೆದ ಹದಿನೈದು ದಿನಗಳಿಂದ ಮಹಾದಲ್ಲಿ ಸತತ ಮಳೆ ಸುರಿಯುತ್ತಿರುವುದರಿಂದ ಚಿಕ್ಕೋಡಿ ತಾಲೂಕಿನ ಕೃಷ್ಣಾ, ದೂಧಗಂಗಾ, ವೇದಗಂಗಾ ನೀರಿನ‌ ಮಟ್ಟದಲ್ಲಿ ಭಾರಿ ಏರಿಕೆಯಾಗಿ ಅಪಾಯ ಮಟ್ಟ ಮೀರಿ ನದಿಗಳು ಮೈದುಂಬಿ ಹರಿಯುತ್ತಿವೆ.

ಮಹಾದಿಂದ ಕೃಷ್ಣಾ ನದಿಗೆ ಒಂದು ಲಕ್ಷ ಅಧಿಕ‌ ಕ್ಯೂಸೆಕ್ ನೀರು ಹರಿದು ಬರುತ್ತಿದ್ದರಿಂದ ಕೆಳ ಹಂತದ ಆರು ಸೇತುವೆಗಳು ಮುಳುಗಡೆಯಾಗಿದ್ದು ಈ ಭಾಗದ ಜನರು ಪರ್ಯಾಯ ಮಾರ್ಗದಿಂದ‌ ಸಂಚಾರಿಸುತ್ತಿದ್ದು ಇದರಿಂದ ಸ್ವಲ್ಪ ಮಟ್ಟಿಗೆ ತೊಂದರೆಯಾಗಿದೆ.

ಕೃಷ್ಣಾ ನದಿಗೆ ಭಾರಿ ಪ್ರಮಾಣದ ನೀರು ಹರಿದು ಬರುತ್ತಿರುವ ಪರಿಣಾಮ ಚಿಕ್ಕೋಡಿ ತಾಲೂಕಿನ ನದಿ ತೀರದ ಪ್ರದೇಶಗಳ ಬೆಳೆಗಳಲ್ಲಿ ನೀರು ಪ್ರವೇಶಿಸಿದ್ದು. ಪ್ರಮುಖ ಬೆಳೆಗಳು ಸಂಪೂರ್ಣವಾಗಿ ನಾಶವಾಗಿದೆ. ಕಬ್ಬು, ಬಾಳೆ, ಸೋಯಾವಿನ್, ಶೇಂಗಾ, ಮೆಕ್ಕೆ ಜೋಳ ಸೇರಿದಂತೆ ಪ್ರಮುಖ ಬೆಳೆಗಳಲ್ಲಿ ನೀರು ಹೋಗಿ ಬೆಳೆಗಳು ಸಂಪೂರ್ಣವಾಗಿ ನಾಶವಾಗಿದೆ.

ಚಿಕ್ಕೋಡಿ ತಾಲೂಕಿನ ಕಲ್ಲೋಳ, ಚಂದೂರ, ಇಂಗಳಿ, ಯಡೂರ, ಮಾಂಜರಿ, ಸೇರಿದಂತೆ ಮುಂತಾದ ಗ್ರಾಮದ ನದಿ ತೀರದಲ್ಲಿ ಹೋಲ-ಗದ್ದೆಗಳಲ್ಲಿ ನೀರು ಹೋಗಿ ಬೆಳೆಗಳು ಸಂಪೂರ್ಣವಾಗಿ ನಾಶವಾಗಿವೆ, ಪರಿಣಾಮ ಸಾವಿರಾರು ರೂಪಾಯಿ ವೆಚ್ಚದಲ್ಲಿ ಬೆಳೆದ ಬೆಳೆಗಳು ಸಂಪೂರ್ಣವಾಗಿ ನಾಶವಾಗಿ ರೈತರ ಮೇಲೆ ಬರೆ ಎಳೆದಂತಾಗಿದೆ.

ಮಹಾದ ರಾಜಾಪೂರ ಡ್ಯಾಂನಿಂದ 70,000 ಕ್ಯೂಸೆಕ್ ಕ್ಕಿಂತ ಹೆಚ್ವು ನೀರು ಹರಿದು ಬರುತ್ತಿದೆ. ವೇಧಗಂಗಾ ಹಾಗೂ ದೂಧಗಂಗಾ ನದಿಯಿಂದ 20,000 ಕ್ಯೂಸೆಕ್ ಕ್ಕಿಂತ ಹೆಚ್ಚು ನೀರು ಹರಿದು ಕೃಷ್ಣೆಯನ್ನು ಸೇರುತ್ತಿದೆ. ಇದರಿಂದ ಚಿಕ್ಕೋಡಿ ತಾಲೂಕಿನ ಕಲ್ಲೋಳ ಹತ್ತಿರ ಕೃಷ್ಣಾ ನದಿಗೆ 1ಲಕ್ಷ ಕ್ಯೂಸೆಕ್ ಕ್ಕಿಂತ ಅಧಿಕ ನೀರು ಹರಿದು ಬರುತ್ತಿದ್ದು ಇದರಿಂದ ಚಿಕ್ಕೋಡಿ ಭಾಗದ ರೈತರ ಗದ್ದೆಗಳಿಗೆ ನೀರು ಹರಿದು ಹೋಗುತ್ತಿರುವುದರಿಂದ ಬೆಳೆದು ನಿಂತ ಬೆಳೆಗಳೆಲ್ಲವು ನದಿ ನೀರಿನಿಂದ ಹಾಳಾಗುತ್ತಿವೆ. ಇದರಿಂದ ಈ ಭಾಗದ ರೈತರಲ್ಲಿ ತಲ್ಲಣಗೊಳಿಸಿದ್ದು ಈ ಬೆಳೆಗಳೆಲ್ಲವು ಈಗ ಹಾಳಗಿ ನಿಂತಿವೆ.

ಆದರೆ, ಹಿಪ್ಪರಗಿ ಡ್ಯಾಂನಿಂದ 90,000 ಕ್ಯೂಸೆಕ್ ನೀರು ಹರಿಬಿಡುವುತ್ತಿರುವುದರಿಂದ ಚಿಕ್ಕೋಡಿ ಉಪವಿಭಾಗದಲ್ಲಿ ಪ್ರವಾಹ ಉಂಟಾಗುವ ಸಾಧ್ಯತೆ ಕಡಿಮೆ ಇದೆ ಎನ್ನುತ್ತಾರೆ ಚಿಕ್ಕೋಡಿ ತಹಶೀಲ್ದಾರ ಸಂತೋಷ ಬಿರಾದರ

ಒಟ್ಟಿನಲ್ಲಿ ಬೇಸಿಗೆ ಬಂದರೆ ನದಿಯಲ್ಲಿ ನೀರು ಇಲ್ಲದೆ ಈ ಭಾಗದ ರೈತರು ಪರದಾಡುತ್ತಾರೆ. ಅದರಂತೆ ಮಳೆಗಾಲದಲ್ಲಿ ಮಳೆಯಿಂದಾಗಿ ಬೆಳೆದ ಬೆಳೆಗಳನ್ನು ಹಾಳು‌ಮಾಡಿಕೊಳ್ಳುವಂತ ಪರಸ್ಥಿತಿ ಚಿಕ್ಕೋಡಿ ನದಿ ತೀರದ ರೈತರ ನೋವಾಗಿದೆ.

Conclusion:ಸಂಜಯ ಕೌಲಗಿ
ಚಿಕ್ಕೋಡಿ
Last Updated : Jul 15, 2019, 1:54 PM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.