ETV Bharat / city

ಒಂದೇ ದಿನದಲ್ಲಿ ಎಂಟು ಮಂದಿ ಮೇಲೆ ಹುಚ್ಚುನಾಯಿ ದಾಳಿ.. ಗ್ರಾಮಸ್ಥರಲ್ಲಿ ಹೆಚ್ಚಿದ ಆತಂಕ

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಜಂಗಮಸೋವೇಬನಹಳ್ಳಿಯಲ್ಲಿ ಒಂದೇ ದಿನ 8 ಮಂದಿಯ ಮೇಲೆ ಹುಚ್ಚು ನಾಯಿ ದಾಳಿ ನಡೆಸಿದ್ದು, ಕೂಡಲೇ ಅದನ್ನು ಸೆರೆಹಿಡಿಯುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

mad-dog-attacks-8-people-in-a-village-at-vijayanagar
ಒಂದೇ ದಿನದಲ್ಲಿ ಎಂಟು ಮಂದಿ ಮೇಲೆ ಹುಚ್ಚುನಾಯಿ ದಾಳಿ, ಗ್ರಾಮಸ್ಥರ ಆತಂಕ
author img

By

Published : Apr 21, 2022, 11:12 AM IST

ವಿಜಯನಗರ: ಒಂದೇ ದಿನ 8 ಜನರಿಗೆ ಹುಚ್ಚು ನಾಯಿ ಕಚ್ಚಿದ ಘಟನೆ ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಜಂಗಮಸೋವೇಬನಹಳ್ಳಿಯಲ್ಲಿ ನಡೆದಿದೆ. ಬುಧವಾರ ರಾತ್ರಿ ಮನೆಯ ಅಂಗಳದಲ್ಲಿ ಮಲಗಿದವರ ಮೇಲೆ ಹುಚ್ಚು ನಾಯಿ ದಾಳಿ ಮಾಡಿ 5 ಮಕ್ಕಳು ಸೇರಿದಂತೆ 8 ಜನರಿಗೆ ಕಚ್ಚಿದೆ.

ಗಾಯಗೊಂಡವರಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆಯನ್ನು ಕೊಡಿಸಲಾಗುತ್ತಿದೆ. ಹುಚ್ಚುನಾಯಿಯ ದಾಳಿ ಹಿನ್ನೆಲೆ ಗ್ರಾಮಸ್ಥರಲ್ಲಿ ಆತಂಕ ಹೆಚ್ಚಾಗಿದೆ. ಈ ಹಿಂದೆ ದನಕರುಗಳ ಮೇಲೆಯೂ ಹುಚ್ಚು ನಾಯಿ ದಾಳಿ ಮಾಡಿತ್ತು. ಕೂಡಲೇ ಅದನ್ನು ಸೆರೆಹಿಡಿಯುವಂತೆ ಜನರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಮಂಗಳೂರು: ನೀರಿನಲ್ಲಿ ಡೈವ್​ ಹೊಡೆಯುವಂತೆ ಲಾರಿಯಡಿಗೆ ಜಿಗಿದ ಯುವಕ! ವಿಡಿಯೋ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.