ETV Bharat / city

ಓದುಗರನ್ನು ಕೈ ಬೀಸಿ ಕರೆಯುತ್ತಿರುವ ಕಡ್ಡಿರಾಂಪುರ ಗ್ರಂಥಾಲಯ - 2015-16 ಗ್ರಾಮ ವಿಕಾಸ ಯೋಜನೆ

2015-16 ಗ್ರಾಮ ವಿಕಾಸ ಯೋಜನೆಯಲ್ಲಿ ನಿರ್ಮಾಣ ಮಾಡಿರುವ ಹೊಸಪೇಟೆ ತಾಲೂಕಿನ ಕಡ್ಡಿರಾಂಪುರ ಗ್ರಾಮದ ಗ್ರಂಥಾಲಯ ಕೇಂದ್ರವು ಉತ್ತಮವಾಗಿದ್ದು, ಸ್ಥಳೀಯರಿಗೆ ಹೆಚ್ಚು ಅನುಕೂಲವಾಗಿದೆ.

Library Center at Kaddirampur
ಹೊಸಪೇಟೆ ತಾಲೂಕಿನ ಕಡ್ಡಿರಾಂಪುರ ಗ್ರಾಮದ ಗ್ರಂಥಾಲಯ
author img

By

Published : Feb 4, 2021, 3:21 PM IST

Updated : Feb 4, 2021, 4:26 PM IST

ಹೊಸಪೇಟೆ: ತಾಲೂಕಿನ ಕಡ್ಡಿರಾಂಪುರ ಗ್ರಾಮದ ಗ್ರಂಥಾಲಯ ಕೇಂದ್ರದಲ್ಲಿ ಓದುಗರಿಗೆ ಉತ್ತಮ ಸೌಲಭ್ಯಗಳನ್ನು ಕಲ್ಪಿಸಿದ್ದು ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಹೊಸಪೇಟೆ ತಾಲೂಕಿನ ಕಡ್ಡಿರಾಂಪುರ ಗ್ರಾಮದ ಗ್ರಂಥಾಲಯ

2015-16 ಗ್ರಾಮ ವಿಕಾಸ ಯೋಜನೆಯಲ್ಲಿ ಗ್ರಂಥಾಲಯ ನಿರ್ಮಾಣ ಮಾಡಲಾಗಿದೆ. 2021 ಜನವರಿ 26 ರಂದು ಗ್ರಂಥಾಲಯ ಉದ್ಘಾಟನೆ ಮಾಡಲಾಗಿದ್ದು, ಈ ಗ್ರಂಥಾಲಯದಲ್ಲಿ ಸುಮಾರು 11 ಸಾವಿರ ಪುಸ್ತಕಗಳಿವೆ.‌ ಜ್ಞಾನಪೀಠ ಪುರಸ್ಕೃತರಾದ ಕುವೆಂಪು, ದ.ರಾ. ಬೇಂದ್ರೆ, ಶಿವರಾಮ ಕಾರಂತ, ಮಾಸ್ತಿ ವೆಂಕಟೇಶ ಅಯ್ಯಂಗಾರ್, ವಿ.ಕೃ. ಗೋಕಾಕ್​, ಯು.ಆರ್. ಅನಂತಮೂರ್ತಿ, ಗಿರೀಶ್ ಕಾರ್ನಾಡ್, ಚಂದ್ರಶೇಖರ್ ಕಂಬಾರ ಅವರ ಪುಸ್ತಕಗಳು ಸಹ ಲಭ್ಯವಿವೆ.

ಗ್ರಂಥಾಲಯದ ಮುಂಭಾಗ ಜ್ಞಾನಪೀಠ ಪುರಸ್ಕೃತ ಪುಸ್ತಕಗಳ ಹೆಸರನ್ನು ನಮೂದಿಸಲಾಗಿದೆ. ಅಲ್ಲದೇ ಗಂಧದ ಗುಡಿ, ಚಂದದ ನುಡಿ, ಕನ್ನಡಕ್ಕಾಗಿ ನುಡಿ ಎಂಬ ಪದಗಳನ್ನು ಬರೆಯುವುದರ ಮೂಲಕ ಕನ್ನಡಭಿಮಾನಿ ಮೂಡಿಸುತ್ತಿದ್ದಾರೆ.

ವಿದ್ಯಾರ್ಥಿಗಳಿಗೆ ಸಹಕಾರಿ ಗ್ರಂಥಾಲಯ: ಬಡ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ಖರೀದಿ ಮಾಡುವ ಶಕ್ತಿ ಇರುವುದಿಲ್ಲ.‌‌ ಹೀಗಾಗಿ ವಿದ್ಯಾಭ್ಯಾಸಕ್ಕೆ ಸಹಕಾರಿಯಾಗಲೆಂದು ಗ್ರಂಥಾಲಯ ತೆರೆಯಲಾಗಿದ್ದು, ಸ್ಥಳೀಯವಾಗಿ ಗ್ರಂಥಾಲಯವನ್ನು ಸದುಪಯೋಗ ಪಡಿಸಿಕೊಳ್ಳಬಹುದಾಗಿದೆ. ‌

ಈ ಕುರಿತು 'ಈಟಿವಿ ಭಾರತ'ದೊಂದಿಗೆ ಮಾಹಿತಿ ಹಂಚಿಕೊಂಡ ಗ್ರಂಥಾಲಯದ ಮೇಲ್ವಿಚಾರಕಿ ರಾಜಮ್ಮ, ಗ್ರಂಥಾಲಯದಲ್ಲಿ 11 ಸಾವಿರ ಪುಸ್ತಕಗಳು ಲಭ್ಯವಿವೆ. ಅಲ್ಲದೇ, ದಿನಪತ್ರಿಕೆಗಳು, ನಿಯತಕಾಲಿಕೆಗಳು ಸಹ ಇವೆ. ಅಜೀಂ ಪ್ರೇಮ ಜಿ ಪೌಂಢೇಶನ್ ಅವರು ಪುಸ್ತಕಗಳನ್ನು ಗ್ರಂಥಾಲಯಕ್ಕೆ ನೀಡಿದ್ದಾರೆ. ಮಕ್ಕಳಿಗೆ ಗ್ರಂಥಾಲಯದಲ್ಲಿ ಓದಲು ಒಳ್ಳೆಯ ಅವಕಾಶವಿದೆ ಎಂದರು.

ಕಡ್ಡಿರಾಂಪುರದ ನಿವಾಸಿ ಪ್ರಶಾಂತ್​ ಮಾತನಾಡಿ, ಈ ಮುಂಚೆ ಗ್ರಂಥಾಲಯ ಹಂಪಿಯಲ್ಲಿತ್ತು. ಇದರಿಂದ ಓದುಗರಿಗೆ ತೊಂದರೆ ಆಗುತ್ತಿತ್ತು. ಗ್ರಾಮದಲ್ಲಿ 700 ಜನ ವಿದ್ಯಾರ್ಥಿಗಳಿದ್ದು, ಹೆಚ್ಚಿನ ಅನುಕೂಲವಾಗಿದೆ ಎಂದರು.

Last Updated : Feb 4, 2021, 4:26 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.