ETV Bharat / city

ರೈತರ ಹೋರಾಟದ ದಿಕ್ಕು ತಪ್ಪಿಸಲು ನಿಧಿ ಸಂಗ್ರಹ ಅಭಿಯಾನ: ಕೋಡಿಹಳ್ಳಿ ಚಂದ್ರಶೇಖರ್ - Bellary Latest News

ದೇಶದ ಜನರನ್ನು ಭಾವನಾತ್ಮಕ ವಿಚಾರಗಳಿಂದ ಡೈವರ್ಟ್ ಮಾಡಲಾಗುತ್ತಿದೆ. ವಾರದಲ್ಲಿ ಮೂರ್ನಾಲ್ಕು ರೈತರು ಸಾಯುತ್ತಿದ್ದಾರೆ. ಅದರ ಬಗ್ಗೆ ಮನ್ ಕೀ ಬಾತ್​ನಲ್ಲಿ ಪ್ರಧಾನಿ ಯಾಕೆ ಮಾತನಾಡುತ್ತಿಲ್ಲ ಎಂದು ಕೋಡಿಹಳ್ಳಿ ಚಂದ್ರಶೇಖರ್ ಪ್ರಶ್ನಿಸಿದ್ದಾರೆ.

kodihalli-chandrashekar-statement-about-srirama-mandir
ಕೋಡಿಹಳ್ಳಿ ಚಂದ್ರಶೇಖರ್
author img

By

Published : Jan 19, 2021, 1:51 PM IST

ಹೊಸಪೇಟೆ (ಬಳ್ಳಾರಿ): ರೈತರ ಹೋರಾಟದ ದಿಕ್ಕು ತಪ್ಪಿಸಲು ಶ್ರೀರಾಮ ಮಂದಿರ ನಿಧಿ ಸಂಗ್ರಹ ಅಭಿಯಾನ ಮಾಡಲಾಗುತ್ತಿದೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಘಟಕದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಕಿಡಿಕಾರಿದ್ದಾರೆ.

ರೈತರ ಹೋರಾಟದ ದಿಕ್ಕು ತಪ್ಪಿಸಲು ನಿಧಿ ಸಂಗ್ರಹ ಅಭಿಯಾನ: ಕೋಡಿಹಳ್ಳಿ ಚಂದ್ರಶೇಖರ್

ನಗರದ ಪ್ರವಾಸ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ಗಡಿಯಲ್ಲಿ ಲಕ್ಷಾಂತರ ರೈತರು ಹೋರಾಟ ಮಾಡುತ್ತಿದ್ದಾರೆ. ಅದನ್ನು ಬಗೆಹರಿಸೋದನ್ನ ಬಿಟ್ಟು, ನೀವು ರಾಮ ಮಂದಿರ ನಿರ್ಮಾಣದಲ್ಲಿ ತೊಡಗಿದ್ದಾರೆ. ರಾಮ ಮಂದಿರ ನಿರ್ಮಾಣದ ಸಂದರ್ಭ ಇದಲ್ಲ. ಬಿಡುವಿನ ಸಮಯದಲ್ಲಿ ರಾಮ ಮಂದಿರ ನಿರ್ಮಾಣ ಮಾಡಬೇಕು.

ದೇಶದ ಜನರನ್ನು ಭಾವನಾತ್ಮಕ ವಿಚಾರಗಳಿಂದ ಡೈವರ್ಟ್ ಮಾಡಲಾಗುತ್ತಿದೆ. ವಾರದಲ್ಲಿ ಮೂರ್ನಾಲ್ಕು ರೈತರು ಸಾಯುತ್ತಿದ್ದಾರೆ. ಅದರ ಬಗ್ಗೆ ಮನ್ ಕೀ ಬಾತ್​ನಲ್ಲಿ ಪ್ರಧಾನಿ ಯಾಕೆ ಮಾತನಾಡುತ್ತಿಲ್ಲ. ಹೊಸದಾಗಿ ಮದುವೆಯಾಗಿರೋ ಗಂಡ - ಹೆಂಡತಿ ಬೀಚ್​ನಲ್ಲಿ ಪ್ಲಾಸ್ಟಿಕ್ ಆರಿಸೋದರ ಬಗ್ಗೆ ಮಾತನಾಡ್ತಾರೆ. ಬಿಜೆಪಿಯು ಆರ್​ಎಸ್​ಎಸ್​ ಅಜೆಂಡಾದಂತೆ ಆಡಳಿತ ನಡೆಸುತ್ತಿದೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.