ETV Bharat / city

ಗರ್ಭಿಣಿಯರಿಗೆ ಉಚಿತ ಆಂಬ್ಯುಲೆನ್ಸ್ ಸೇವೆ ನೀಡಿದ ಭಾರತೀಯ ರೆಡ್ ಕ್ರಾಸ್ ಸಂಸ್ಥೆ

ಲಾಕ್​ಡೌನ್​ನಿಂದಾಗಿ ಬಸ್​ ಮತ್ತು ಖಾಸಗಿ ವಾಹನಗಳ ಸಂಚಾರ ಸ್ಥಗಿತವಾದ ಹಿನ್ನೆಲೆ ರೆಡ್​ ಕ್ರಾಸ್​​ ಸಂಸ್ಥೆ ಮತ್ತು ಬಸವರಾಜೇಶ್ವರಿ ಪಬ್ಲಿಕ್​ ಶಾಲೆ ಸಹಯೋಗದಲ್ಲಿ ಗರ್ಭಿಣಿ ಮಹಿಳೆಯರಿಗೆ ಆಂಬುಲೆನ್ಸ್​ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ ಹೆಚ್ಚಿನ ಮಾಹಿತಿಗಾಗಿ 9535315734 ಸಂಖ್ಯೆಗೆ ಕರೆ ಮಾಡುವಂತೆ ಮನವಿ ಮಾಡಲಾಗಿದೆ.

indian red cross society gave free ambulance service in bellary
ಭಾರತೀಯ ರೆಡ್ ಕ್ರಾಸ್ ಸಂಸ್ಥೆ
author img

By

Published : Apr 26, 2020, 2:49 PM IST

ಬಳ್ಳಾರಿ: ಗರ್ಭಿಣಿ ಮಹಿಳೆಯರಿಗೆ ಮನೆಯಿಂದ ಆಸ್ಪತ್ರೆ ಮತ್ತು ಆಸ್ಪತ್ರೆಯಿಂದ ಮನೆಗೆ ತೆರಳಲು ಪ್ರತಿದಿನ ಬೆಳಿಗ್ಗೆ 9ರಿಂದ ಸಂಜೆ 6 ಗಂಟೆಯ ಒಳಗೆ ಆಂಬುಲೆನ್ಸ್​ ವ್ಯವಸ್ಥೆಯನ್ನು ಭಾರತೀಯ ರೆಡ್​ ಕ್ರಾಸ್​​ ಸಂಸ್ಥೆ ಮಾಡಿದೆ.

ರೆಡ್​ ಕ್ರಾಸ್​ ಸಂಸ್ಥೆ ಬಳ್ಳಾರಿ ಮತ್ತು ಬಸವರಾಜೇಶ್ವರಿ ಪಬ್ಲಿಕ್​ ಶಾಲೆ ಸಹಯೋಗದೊಂದಿಗೆ ಈ ಸೌಕರ್ಯ ವದಗಿಸಲಾಗಿದ್ದು, ವೈದ್ಯರ ಸಲಹೆ ಮೇರೆಗೆ ವಿಮ್ಸ್​ ಆಸ್ಪತ್ರೆಯಿಂದ ಗರ್ಭಿಣಿಯರು ಅವರ ಮನೆಗೆ ಅಥವಾ ಮನೆಯಿಂದ ಆಸ್ಪತ್ರೆಗೆ ಆಂಬುಲೆನ್ಸ್​ನಲ್ಲಿ ಸಂಚಾರ ಮಾಡಬಹುದಾಗಿದೆ.

indian red cross society gave free ambulance service in bellary
ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಪ್ರಕಟಣೆ

ಹೆಚ್ಚಿನ ಮಾಹಿತಿಗಾಗಿ ರೆಡ್ ಕ್ರಾಸ್ ಸಂಸ್ಥೆಯ ವಾಲೆಂಟಿಯರ್ ಕುಮಾರಿ ಶ್ವೇತಾ ಮೊ:9535315734 ಇವರನ್ನು ಸಂಪರ್ಕಿಸಬಹುದು. ಅಲ್ಲದೆ ಸೇವೆಯನ್ನು ಸದುಪಯೋಗ ಪಡಿಸಿಕೊಳ್ಳಲು ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಕಾರ್ಯದರ್ಶಿ ಎಂ.ಎ.ಶಕೀಬ್ ಪ್ರಕಟಣೆಯಲ್ಲಿ‌ ಮನವಿ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.