ಬಳ್ಳಾರಿ: ಪ್ರಿಯಾಂಕ್ ಖರ್ಗೆ ಅವರ ತಂದೆಯಂತೆ ಸಂಸ್ಕಾರವಂತ ಎಂದು ತಿಳಿದುಕೊಂಡಿದ್ದೆ, ಆದರೆ ಅವರು ತಂದೆಯ ಗುಣಗಳನ್ನು ನೋಡಿ ಕಲಿಯಬೇಕಾಗಿರುವುದು ಸಾಕಷ್ಟಿದೆ ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ಹೇಳಿದ್ದಾರೆ.
ಮಾಜಿ ಸಚಿವ ಪ್ರಿಯಾಂಕ್ ಖರ್ಗೆಯವರು ನೌಕರಿಗಾಗಿ ಲಂಚ- ಮಂಚ ಹೇಳಿಕೆ ವಿಚಾರದ ಕುರಿತಾಗಿ ಬಳ್ಳಾರಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಶ್ರೀರಾಮುಲು ಅವರು, ಖರ್ಗೆಯವರು ಮಾತನಾಡುವಾಗ ನಾಲಿಗೆ ಮೇಲೆ ಹತೋಟಿ ಇರಬೇಕು. ಸದನದಲ್ಲಿ ಖರ್ಗೆಯನ್ನು ಪ್ರಿಯಾಂಕ, ಪ್ರಿಯ ಅಂತಾ ಹಂಗಿಸುತ್ತಿದ್ದರು. ಆದರೆ ನಾನು, ತಂದೆ ತರಹ ಬುದ್ಧಿವಂತ ಎಂದು ಸಣ್ಣ ಖರ್ಗೆ ಎಂದು ಕರೆಯುತ್ತಿದ್ದೆ ಎಂದರು.
ಮಲ್ಲಿಕಾರ್ಜುನ ಖರ್ಗೆ ಹಿಂದುಳಿದ ದಲಿತ ವರ್ಗದ ನಾಯಕರು, ಇಂತಹವರ ಮಗನಾಗಿ ಪ್ರಿಯಾಂಕ್ ಖರ್ಗೆ ಈ ರೀತಿಯ ಭಾವನೆ ಇಟ್ಟುಕೊಂಡಿರುವುದು ಶೋಭೆ ತರುವುದಿಲ್ಲ. ಮಹಿಳೆಯರ ಬಗ್ಗೆ ಅಗೌರವ ತೋರಿಸುವುದು ಸರಿಯಲ್ಲ. ಇದು ಕಾಂಗ್ರೆಸ್ ನಾಯಕರ ಹೀನಾಯ ಮನಸ್ಥಿತಿ ತೋರಿಸುತ್ತದೆ. ರಾಜಕಾರಣದಲ್ಲಿ ನಿನಗೆ ಶಕ್ತಿ ಇದ್ರೆ 2023 ರ ಚುನಾವಣೆಯಲ್ಲಿ ಗೆಲ್ಲುವ ಪ್ರಯತ್ನ ಮಾಡಬೇಕು ಎಂದು ಟಾಂಗ್ ಕೊಟ್ಟರು.
ಇದನ್ನೂ ಓದಿ : ಸಿದ್ದರಾಮಯ್ಯ ಅದೇನು ಬಿಚ್ಚಿಡುತ್ತಾರೆ ಬಿಚ್ಚಿಡಲಿ, ನನ್ನದೇನು ಅಭ್ಯಂತರ ಇಲ್ಲ: ಸಚಿವ ಡಾ.ಕೆ.ಸುಧಾಕರ್