ಬಳ್ಳಾರಿ: ನಾನು ಬೆಳಿಗ್ಗೆಯಿಂದಲೇ ನಿಮ್ಮೊಟ್ಟಿಗೆ ಇದ್ದೇನೆ. ಶಾಸಕರ ರಾಜೀನಾಮೆ ವಿಚಾರ ನನಗೆ ಗೊತ್ತಿಲ್ಲ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಕೆ.ಜೆ.ಜಾರ್ಜ್ ಹೇಳಿದ್ದಾರೆ.
ಬಳ್ಳಾರಿಯ ಡಿಸಿ ಕಚೇರಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕರ ರಾಜೀನಾಮೆ ವಿಚಾರದ ಕುರಿತು ನನಗೆ ಮಾಹಿತಿ ಇಲ್ಲ. ಬೆಳಿಗ್ಗೆಯಿಂದಲೇ ನಾನು ಬಳ್ಳಾರಿ ಪ್ರವಾಸದಲ್ಲಿದ್ದೇನೆ ಎಂದರು.
ರಾಜಕಾರಣದಲ್ಲಿ ಬದಲಾವಣೆ ಸಾಧ್ಯ. ಯಾರು ಯಾರ ಜೊತೆಗಾದ್ರು ಹೋಗಬಹುದು. ಬಳ್ಳಾರಿಯಲ್ಲಿ ಸಭೆ ಮುಗಿಸಿಕೊಂಡು ಬೆಂಗಳೂರಿಗೆ ತೆರಳುವೆ. ಶಾಸಕರು ರಾಜೀನಾಮೆಯನ್ನು ಸ್ಟೀಕರ್ ಅವರಿಗೆ ಕೊಟ್ಟಿದ್ದಾರೆ. ಇದಕ್ಕೆ ಸ್ಪೀಕರ್ ಅವರೇ ಉತ್ತರಿಸುತ್ತಾರೆ. ರಾಜೀನಾಮೆ ಬಗ್ಗೆ ನನಗೇನು ಗೊತ್ತಿಲ್ಲ. ಕಾರಣವೂ ಗೊತ್ತಿಲ್ಲ ಎಂದರು.