ಹೊಸಪೇಟೆ: ಜೈನಧರ್ಮದಲ್ಲಿ ತಮ್ಮ 18ನೇ ವರ್ಷಕ್ಕೆ ಸನ್ಯಾಸ ದೀಕ್ಷೆ ಪಡೆಯುತ್ತಿರುವ ಯುವಕನಿಗೆ ನಗರದಲ್ಲಿ ಅಭಿನಂದನಾ ಕಾರ್ಯಕ್ರಮ ಮಾಡಲಾಯಿತು.
ನಗರದಲ್ಲಿ ಇಂದು ಜೈನಧರ್ಮದ ಸಭಾಂಗಣದಲ್ಲಿ ಸನ್ಯಾಸತ್ವ ದೀಕ್ಷೆ ಸಮಾರಂಭ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ಮಹಾವೀರ ಡಿಸ್ಟ್ರಿಬ್ಯೂಟರ್ಸ್ ಕೆಸಾಶ್ರೀಮಾಲ್ಜಿ ಅವರು, ಜೈನ ಧರ್ಮದಲ್ಲಿ ಸನ್ಯಾಸತ್ವ ಪಡೆದುಕೊಳ್ಳುವುದು ಒಂದು ಸಂಪ್ರದಾಯ. ಅದೇ ರೀತಿ ಛತ್ತೀಸ್ ಗಢದ ರಾಯಪುರದಲ್ಲಿ ನಡೆಯುವ ಜೈನಧರ್ಮ ಸನ್ಯಾಸತ್ವ ಕಾರ್ಯಕ್ರಮದಲ್ಲಿ ಸಂಜೆಯಜಿ ಭಾರ್ಗೇಚ ಸುರತ್ ಅವರ ಮಗ ದರ್ಶನ ಭಾರ್ಗೇಚ ಎಂಬುವವರು ಸನ್ಯಾಸತ್ವ ದೀಕ್ಷೆಯನ್ನು ಪಡೆದುಕೊಳ್ಳಲಿದ್ದಾರೆ, ಅದಕ್ಕಾಗಿ ಅವರಿಗೆ ಅಭಿನಂದನಾ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ ಎಂದು ತಿಳಿಸಿದರು.
ಸನ್ಯಾಸವನ್ನು ದೀಕ್ಷೆಯನ್ನು ಪಡೆದುಕೊಂಡ ನಂತರ ಯಾವುದೇ ಆಸೆ ಮತ್ತು ಆಕಾಂಕ್ಷೆಗಳನ್ನು ಇಟ್ಟುಕೊಳ್ಳದೆ, ಆಸ್ತಿ ಪಾಸ್ತಿಯನ್ನು ತ್ಯಜಿಸಿ, ಧರ್ಮ ರಕ್ಷಣೆ ಮಾಡುವುದು ಅವರ ಮುಖ್ಯ ಜವಾಬ್ದಾರಿಯಾಗಿರುತ್ತದೆ. ದೀಕ್ಷೆಯನ್ನು ಪಡೆದವರು ಸದಾ ಸಮಾಜ ಮತ್ತು ಧರ್ಮಕ್ಕೆ ನಿಷ್ಠೆಯಿಂದ ಇರಬೇಕಾಗುತ್ತದೆ. ಯಾವುದೇ ರೀತಿಯ ಅಪಪ್ರಚಾರ ಮತ್ತು ಕಂಟಕವನ್ನು ತಾರದೆ, ಎಲ್ಲರೂ ಇವರನ್ನು ಸ್ಪೂರ್ತಿಯಾಗುವಂತೆ ನಡೆದುಕೊಳ್ಳಬೇಕು ಎಂದು ತಿಳಿಸಿದರು.