ETV Bharat / city

ಮೊಹರಂ ಹಬ್ಬ ಸಂಪೂರ್ಣ ಹಿಂದೂಗಳಿಂದ ಆಚರಣೆ.. ಭಾವೈಕ್ಯತೆ ಮೆರೆದ ಗಣಿನಾಡ ಜನ..

author img

By

Published : Sep 8, 2019, 10:17 AM IST

Updated : Sep 8, 2019, 11:21 AM IST

ಹಿಂದೂ ಧರ್ಮದ ಗೌಳೇರ ಜನಾಂಗರದವರು ಮೊಹರಂ ಆಚರಣೆ ಮಾಡುವ ಮೂಲಕ ಭಾವೈಕ್ಯತೆ ಮೆರೆದಿದ್ದಾರೆ. ಇಲ್ಲಿ ಯಾವುದೇ ಜಾತಿ, ಧರ್ಮ ಬೇಧವಿಲ್ಲದೆ ಎಲ್ಲರೂ ಒಂದಾಗಿ ಸಂಭ್ರಮಾಚರಣೆಯಲ್ಲಿ ತೊಡಗುವುದು ವಿಶೇಷವಾಗಿದೆ.

ಮೊಹರಂ ಹಬ್ಬ ಆಚರಣೆ

ಬಳ್ಳಾರಿ : ಸಾಮಾನ್ಯವಾಗಿ ಮುಸ್ಲಿಂ ಜನಾಂಗವೇ ಮೊಹರಂ ಆಚರಣೆ ಮಾಡುವುದನ್ನ ನಾವು ಕಾಣುತ್ತೇವೆ. ಆದರೆ, ಗಣಿನಾಡಿನಲ್ಲಿ ಮಾತ್ರ ಹಿಂದೂ ಧರ್ಮದ ಗೌಳೇರ ಜನಾಂಗರದವರು ಮೊಹರಂ ಆಚರಣೆ ಮಾಡುವ ಮೂಲಕ ಭಾವೈಕ್ಯತೆ ಮೆರೆದಿದ್ದಾರೆ. ಇಲ್ಲಿ ಯಾವುದೇ ಜಾತಿ, ಧರ್ಮ ಬೇಧವಿಲ್ಲದೆ ಎಲ್ಲರೂ ಒಂದಾಗಿ ಸಂಭ್ರಮಾಚರಣೆಯಲ್ಲಿ ತೊಡಗುವುದು ವಿಶೇಷವಾಗಿದೆ.

ಜಿಲ್ಲೆಯ ಗೌಳೇರಹಟ್ಟಿಯಲ್ಲಿ ಮೊಹರಂ ಹಬ್ಬವನ್ನು ಸಂಪೂರ್ಣವಾಗಿ ಹಿಂದೂಗಳು ಆಚರಿಸುತ್ತಾ ಬಂದಿದ್ದಾರೆ. ಇಲ್ಲಿ ಮುಸ್ಲಿಂ ಪೀರಲ ದೇವರನ್ನು ಎತ್ತುಕೊಳ್ಳುವವರು ಮತ್ತು ಪೂಜೆ ಮಾಡುವವರೇ ಗೌಳೇರ ಸಮುದಾಯದವರು. ಈ ಮೊಹರಂ ಹಬ್ಬ ಆಚರಣೆಯಲ್ಲಿ ಊರಿನ ಹಿಂದೂ ಸಮುದಾಯದ ನಾಗರಾಜ್, ಲೋಕೇಶ್, ಈಶ ಎಂಬುವ ಮೂವರು ಪೀರಲ ದೇವರನ್ನು ಹೊರುವ ಪದ್ಧತಿ ಸಹ ಇದೆ.

ಮೊಹರಂ ಹಬ್ಬ ಸಂಪೂರ್ಣ ಹಿಂದೂಗಳಿಂದ ಆಚರಣೆ

ನಿನ್ನೆ ಮೊಹರಂನ ಏಳನೇ ಕಣವಾಗಿದ್ದರಿಂದ ಸಂಜೆ ಇಂದಲೇ ಕಾರ್ಯಕ್ರಮಗಳು ಆರಂಭವಾಗಿದ್ದವು. ಪೀರಲ ದೇವರು ಸಂಜೆ ಗೌಳೇರಹಟ್ಟಿಯಿಂದ ಎದ್ದು ನಗರದ ಮೋತಿ, ಕೌಲ್ ಬಜಾರ್, ಬಂಡಿಹಟ್ಟಿ, ರೇಡಿಯೋ ಪಾರ್ಕ್ ಇನ್ನಿತರ ಸ್ಥಳಗಳಲ್ಲಿನ ಇತರ ಪೀರಲ ದೇವರ ದರ್ಶನ ಪಡೆದು ನಂತರ ಮಧ್ಯರಾತ್ರಿ ಎರಡು ಗಂಟೆಗೆ ದೇವಸ್ಥಾನಕ್ಕೆ ಆಗಮಿಸುತ್ತವೆ ಮತ್ತು ಒಂಬತ್ತನೇ ಕಣದಲ್ಲಿ ಅಂದ್ರೇ ಇವತ್ತು ಬೆಂಕಿ ತುಳಿಯುವ ಕಾರ್ಯ ನಡೆಯುತ್ತದೆ. ಈ‌ ಸಮಯದಲ್ಲಿ ನೂರಾರು ಭಕ್ತರು ಭಾಗವಹಿಸಿ ದೇವರ ದರ್ಶನ ಪಡೆಯುತ್ತಾರೆ.

Intro:ಮೊಹರಂ ಹಬ್ಬ ಸಂಪೂರ್ಣ ಹಿಂದೂಗಳಿಂದ ಆಚರಣೆ.
ಗೌಳೇರಹಟ್ಟಿ ಕಳೆದ ಐದಾರು ದಶಕಗಳಿಂದ ಈ ಪ್ರದೇಶದಲ್ಲಿ ಆಚರಣೆ ಮಾಡಿತ್ತಿರುವುದು ವಿಶೇಷBody:.

ಮುಸ್ಲಿಂ ಜನಾಂಗವೇ ಮೊಹರಂ ಹಬ್ಬ ಆಚರಣೆ ಮಾಡುವುದನ್ನು ನೀವು ಕೇಳಿರಬಹುದು ಆಗೇ ನೋಡಿರಬಹುದು ಆದ್ರೇ ಗಣನಾಡು ಬಳ್ಳಾರಿಯ ಗೌಳೇರಹಟ್ಟಿಯಲ್ಲಿ ಹಿಂದೂ ಧರ್ಮದ ಗೌಳೇರ ಜನಾಂಗದವರ ಮೊಹರಂ ಹಬ್ಬ ಆಚರಣೆ ಮಾಡುವುದು ಮತ್ತು ಪೂಜೆ, ಪುನಸ್ಕಾರ ಮಾಡುವುದೇ ಈ ಜನಾಂಗ.
.ಇಲ್ಲಿ ಯಾವುದೇ ಜಾತಿ,ಧರ್ಮ, ಬೇಧ-ಭಾವವಿಲ್ಲದೇ ಆಚರಣೆ ಮಾಡುತ್ತಿರುವುದು ಸಹ ವಿಶೇಷವಾಗಿದೆ.
ಅನೇಕ ಹಿಂದೂ, ಮುಸ್ಲಿಂ ಜನಾಂಗವರು ದೇವರ ದರ್ಶನವನ್ನು ಪಡೆಯಲು ಭಕ್ತರು ಆಗಮಿಸುತ್ತಾರೆ.

ಗೌಳೇರು ಪೀಪಲ ದೇವರನ್ನು ಎತ್ತುಕೊಳ್ಳುವವರು ಮತ್ತು ಪೂಜೆ ಮಾಡುವವರೇ ಗೌಳೇರ ಹಟ್ಟಿಯ ಗೌಳೇರ ಸಮುದಾಯ, ಈ ಮೊಹರಂ ಹಬ್ಬ ಆಚರಣೆಯಲ್ಲಿ ಹಿಂದೂ ಗಳಾದ ನಾಗರಾಜ್, ಲೋಕೇಶ್, ಈಶ ಈ ಮೂರು ಪೀರಲ ದೇವರನ್ನು ಹೊರುವ ಪದ್ಧತಿ ಸಹ ಇದೆ.

ಇಂದು ಮೊಹರಂನ ಏಳನೇ ಕಣವಾಗಿದ್ದರಿಂದ ಸಂಜೆ ಇಂದಲೇ ಕಾರ್ಯಕ್ರಮಗಳು ಆರಂಭವಾಗಿದೆ. ಗೌಳೇರ ಸಮುದಾಯದ ಹಿಂದೂ ಜನರೇ ಮೊಹರಂನ ಆಚರಣೆಯನ್ನು ಮಾಡಿಕೊಂಡು ಬಂದಿದ್ದಾರೆ. ಪೀರಲ ದೇವರು ಸಂಜೆ ಗೌಳೇರಹಟ್ಟಿಯಿಂದ ಎದ್ದು ನಗರದ ಮೋತಿ, ಕೌಲ್ ಬಜಾರ್, ಬಂಡಿಹಟ್ಟಿ, ರೇಡಿಯೋ ಪಾರ್ಕ್ ಇನ್ನಿತರ ಸ್ಥಳಗಳಲ್ಲಿನ ಇತರ ಪೀರಲ ದೇವರ ದರ್ಶನ ಪಡೆದು ನಂತರ ಮಧ್ಯರಾತ್ರಿ ಎರಡು ಗಂಟೆಗೆ ದೇವಸ್ಥಾನಕ್ಕೆ ಆಗಮಿಸುತ್ತವೆ ಮತ್ತು ಒಂಬತ್ತನೇ ಕಣದಲ್ಲಿ ಬೆಂಕಿ ತುಳಿಯುವ ಕಾರ್ಯ ನಡೆಯುತ್ತದೆ ಎಂದು ಇಲ್ಲಿಯ ಸ್ಥಳೀಯ ನಿವಾಸಿ ರವಿ ತಿಳಿಸಿದರು.

Conclusion:ಈ‌ ಸಮಯದಲ್ಲಿ ನೂರಾರಯ ಭಕ್ತರು ಭಾಗವಹಸಿದ್ದರು.
Last Updated : Sep 8, 2019, 11:21 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.