ETV Bharat / city

ಕೂಡ್ಲಿಗಿಯಲ್ಲಿ ಭಾರೀ ಮಳೆ: ಪ್ರಾಣವನ್ನೇ ಪಣಕಿಟ್ಟು ಹಸು ರಕ್ಷಿಸಿದ ರೈತ - ರೈತ

ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ಪಟ್ಟಣದಲ್ಲಿ ಭಾರೀ ಪ್ರಮಾಣದ ಮಳೆ ಸುರಿದಿದ್ದು, ಹಳ್ಳ ಕೊಳ್ಳಗಳೆಲ್ಲ ತುಂಬಿ ಹರಿಯುತ್ತಿವೆ. ಈ ನಡುವೆ ರೈತನೋರ್ವ ತನ್ನ ಪ್ರಾಣವನ್ನೇ ಪಣಕಿಟ್ಟು ಹಸುವನ್ನು ರಕ್ಷಿಸಿರುವ ಘಟನೆಯೊಂದು ನಡೆದಿದೆ.

ಕೂಡ್ಲಿಗಿಯಲ್ಲಿ ಭಾರೀ ಮಳೆ
author img

By

Published : Oct 4, 2019, 5:47 PM IST

ಬಳ್ಳಾರಿ: ಜಿಲ್ಲೆಯ ಕೂಡ್ಲಿಗಿ ಪಟ್ಟಣದಲ್ಲಿ ಭಾರೀ ಪ್ರಮಾಣದ ಮಳೆ ಸುರಿದಿದ್ದು, ಹಳ್ಳ ಕೊಳ್ಳಗಳೆಲ್ಲ ತುಂಬಿ ಹರಿಯುತ್ತಿವೆ. ಈ ನಡುವೆ ರೈತನೋರ್ವ ತನ್ನ ಪ್ರಾಣವನ್ನೇ ಪಣಕಿಟ್ಟು ಹಸುವನ್ನು ರಕ್ಷಿಸಿರುವ ಘಟನೆಯೊಂದು ನಡೆದಿದೆ.

ಕೂಡ್ಲಿಗಿಯಲ್ಲಿ ಭಾರೀ ಮಳೆ

ಕೂಡ್ಲಿಗಿಯ ಪಟ್ಟಣದಲ್ಲಿ ನಿನ್ನೆ ಗುಡುಗು ಸಹಿತ ಭಾರೀ ಮಳೆಯಾದ ಗ್ರಾಮದ ಉಜ್ಜನಿಯ ಹಳ್ಳ ತುಂಬಿ ಹರಿಯುತ್ತಿದ್ದು, ಹಳ್ಳ ದಾಟುವಾಗ ಹಸುವೊಂದು ನೀರಿನ ರಭಸಕ್ಕೆ ತೇಲಿ ಹೋಗುತ್ತಿತ್ತು. ಇದನ್ನು ಕಂಡ ರೈತ ತನ್ನ ಪ್ರಾಣವನ್ನೇ ಪಣಕ್ಕಿಟ್ಟು ಹಸುವನ್ನು ರಕ್ಷಣೆ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ನಿನ್ನೆ ಕೂಡ್ಲಿಗಿಯ ಪಟ್ಟಣದಲ್ಲಿ ಗುಡುಗು ಸಿಡಿಲು ಸಹಿತ ಭಾರೀ ಮಳೆಯಾದ ಕಾರಣ ಪಟ್ಟಣದ ಅಕ್ಕಪಕ್ಕದ ಹಳ್ಳ ಕೊಳ್ಳಗಳು ತುಂಬಿ ಹರಿದು, ಅನೇಕ ಮನೆಗಳಿಗೂ ಕೂಡ ಈ ಮಳೆಯ ನೀರು ನುಗ್ಗಿವೆ. ಈ ಮಳೆಯ ರಭಸಕ್ಕೆ ಸೊಲ್ಲಮ್ಮ ದೇವಿಯ ದೇಗುಲದ ಬಳಿ ಇರುವ ತೆಂಗಿನ ಮರವೊಂದು ಮುರಿದು ಬಿದ್ದಿದ್ದು, ಮೂರು ಮನೆಗಳು ಜಖಂಗೊಂಡಿವೆ. ಗ್ರಾಮದ ಗೌಡ್ರು ಭೋಜರಾಜ ಎಂಬುವವರ ಮನೆಯ ಬಳಿ ತೆಂಗಿನ ಮರ ಮುರಿದು ವಿದ್ಯುತ್ ಕಂಬದ ಮೇಲೆ ಬಿದ್ದು, ಗ್ರಾಮದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.

ಹೊಸಹಳ್ಳಿ ರಸ್ತೆಯ ಪಕ್ಕದ ಮನೆಗಳಿಗೆ ನುಗ್ಗಿದ ನೀರು:
ಉಜ್ಜನಿಯ ಹಳ್ಳ ತುಂಬಿ ಹರಿದಿದ್ದರಿಂದ ಹೊಸಹಳ್ಳಿ ರಸ್ತೆಯ ಪಕ್ಕದಲ್ಲಿನ ಸುಮಾರು 10ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದ್ದು, ಕೊಟ್ಟೂರು ರಸ್ತೆಯ ಬಳಿ ಹಾಗೂ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿನ 20ಕ್ಕೂ ಅಧಿಕ ಮನೆಗಳು ಜಲಾವೃತಗೊಂಡು ಜನಜೀವನ ಅಸ್ತವ್ಯಸ್ತಗೊಂಡಿದೆ.

ಕೂಡ್ಲಿಗಿ–ಕೊಟ್ಟೂರು ನಡುವೆ ಮಲ್ಲನಾಯಕನಹಳ್ಳಿ ಬಳಿ ಹಳ್ಳ ತುಂಬಿ ಹರಿದು ಸುಮಾರು ಒಂದು ತಾಸು ಸಂಚಾರ ಸ್ಥಗಿತಗೊಂಡಿತ್ತು. ತಾಲೂಕಿನ ಮೊರಬ ಗ್ರಾಮ ಹೊರವಲಯದಲ್ಲಿ ಕೆಸರು ಗದ್ದೆಯಂತಾಗಿದ್ದು, ರಸ್ತೆಯಲ್ಲಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್​ ಸಿಲುಕಿ ವಿದ್ಯಾರ್ಥಿಗಳು ಪರದಾಡುವಂತಾಗಿತ್ತು.

Intro:ಕೂಡ್ಲಿಗಿಯಲ್ಲಿ ಭಾರೀ ಪ್ರಮಾಣದ ಮಳೆ; ಜನಜೀವನ ಅಸ್ತವ್ಯಸ್ತ!
ಬಳ್ಳಾರಿ: ಜಿಲ್ಲೆಯ ಕೂಡ್ಲಿಗಿ ಪಟ್ಟಣದಲ್ಲಿ ಭಾರೀ ಪ್ರಮಾಣದ
ಮಳೆ ಸುರಿದಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ರಾಷ್ಟ್ರೀಯ ಹೆದ್ದಾರಿ 50ರ ಪಕ್ಕದಲ್ಲಿರೋ ಮನೆಗಳು ಜಲಾವೃತಗೊಂಡಿವೆ.
ಕೂಡ್ಲಿಗಿಯ ಪಟ್ಟಣದಲ್ಲಿ ನಿನ್ನೆಯ ದಿನ ಸಂಜೆ ಗುಡುಗು–ಸಿಡಿಲು
ಸಹಿತ ಭಾರೀ ಮಳೆಯಾದ ಕಾರಣ ಪಟ್ಟಣದ ಅಕ್ಕಪಕ್ಕದ ಹಳ್ಳ– ಕೊಳ್ಳಗಳು ತುಂಬಿ ಹರಿದು, ಅನೇಕ ಮನೆಗಳಿಗೂ ಕೂಡ ಈ ಮಳೆಯ ನೀರು ನುಗ್ಗಿವೆ.
ಈ ಮಳೆಯ ರಭಸಕ್ಕೆ ಸೊಲ್ಲಮ್ಮ ದೇವಿಯ ದೇಗುಲದ ಬಳಿ ಇರುವ ತೆಂಗಿನ ಮರವೊಂದು ಮುರಿದು ಬಿದ್ದಿದೆ. ಮೂರು ಮನೆಗಳು ಜಖಂಗೊಂಡಿವೆ. ಗೌಡ್ರು ಭೋಜರಾಜ ಅವರ
ಮನೆಯ ಬಳಿ ತೆಂಗಿನ ಮರ ಮುರಿದು ವಿದ್ಯುತ್ ಕಂಬದ ಮೇಲೆ ಬಿದ್ದಿರುವುದರಿಂದ ಮೂರು ಕಂಬಗಳು ಮುರಿದುಬಿದ್ದು ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.
ಉಜ್ಜನಿಯ ಹಳ್ಳ ತುಂಬಿ ಹರಿದಿದ್ದರಿಂದ ಹೊಸಹಳ್ಳಿ ರಸ್ತೆಯ ಪಕ್ಕದಲ್ಲಿನ ಸುಮಾರು 10ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ಕೊಟ್ಟೂರು ರಸ್ತೆಯ ಬಳಿ ಹಾಗೂ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿನ 20ಕ್ಕೂ ಅಧಿಕ ಮನೆಗಳು ಜಲಾವೃತವಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.
ಕೂಡ್ಲಿಗಿ ಪಟ್ಟಣದ ಹೊರವಲಯದಲ್ಲಿನ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಕೆಸರು ನುಗ್ಗಿ ಬಸ್ಸು ಸಿಕ್ಕಿಬಿದ್ದು ಪ್ರಯಾಣಿಕರು ಪರದಾಡು ವಂತಾಗಿತ್ತು. ಕೂಡ್ಲಿಗಿ– ಕೊಟ್ಟೂರು ನಡುವೆ ಮಲ್ಲನಾಯಕನಹಳ್ಳಿ ಬಳಿ ಹಳ್ಳ ತುಂಬಿ ಹರಿದ್ದರಿಂದ ಸುಮಾರು ಒಂದು ತಾಸು ಸಂಚಾರ ಸ್ಥಗಿತಗೊಂಡಿತ್ತು. ತುಂಬಿ ಹರಿವ ಹಳ್ಳದಲ್ಲೂ ಕೆಲ ಬೈಕ್ ಸವಾರರು ದಾಟುವ ದುಸ್ಸಾಹಸಕ್ಕೂ ಮುಂದಾಗಿರೋ ದೃಶ್ಯವೂ ಸಾಮಾನ್ಯವಾಗಿ ಬಿಟ್ಟಿತ್ತು.
Body:ಕೂಡ್ಲಿಗಿ ತಾಲೂಕಿನ ಮೊರಬ ಗ್ರಾಮ ಹೊರವಲಯದಲ್ಲಿ ಕೆಸರು ಗದ್ದೆಯಂತಾದ ರಸ್ತೆಯಲಿ ಈಶಾನ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ವೊಂದು ಸಿಲುಕಿಕೊಂಡಿದ್ದರಿಂದ ವಿದ್ಯಾರ್ಥಿಗಳ ಮುಂದಿನ ಪ್ರಯಾಣಕ್ಕೆ ಅಡ್ಡಿಯುಂಟು ಮಾಡಿತ್ತು.
ರಸ್ತೆ ಮೇಲೆ ಒಕ್ಕಣೆ ಮಾಡುವಾಗ ಅವಘಡ- ದವಸ ಧಾನ್ಯಗಳನ್ನು ರಸ್ತೆಯ ಮೇಲೆ ಒಣಗಿಸಿದನ್ನು ತಪ್ಪಿಸಲು ಹೋದಾಗ ಈ ಸಾರಿಗೆ ಬಸ್ ತೆಗ್ಗಿಗೆ ಇಳಿದಿದೆ.
ಈ ಭಾರೀ ಮಳೆಯಿಂದಾಗಿ ತುಂಬಿ ಹರಿಯುತ್ತಿರೋ ಹಳ್ಳದಲ್ಲಿ ಹಸು ಒಂದನ್ನು ರೈತನೊಬ್ಬ ತನ್ನ ಪ್ರಾಣವನ್ನೇ ಪಣಕ್ಕಿಟ್ಟು ತಾನು ಸಾಕಿದ ಗೋ ಮಾತೆಯನ್ನು ರಕ್ಷಿಸಿಸೋ ಮುಖೇನ ಅಮ್ಮನ ಕೆರೆಯ ರೈತ ಶಶಿಧರಸ್ವಾಮಿ ಎಂಬಾತನು ಮಾನವೀಯತೆ ಮೆರೆದಿದ್ದಾನೆ. ಯಾವುದೇ ಅಪಾಯ ಸಂಭವಿಸಿಲ್ಲ.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

Conclusion:KN_BLY_2_KUDULGI_HEAVY_RAIN_NEWS_7203310

KN_BLY_2b_KUDULGI_HEAVY_RAIN_NEWS_7203310

KN_BLY_2c_KUDULGI_HEAVY_RAIN_NEWS_7203310

KN_BLY_2d_KUDULGI_HEAVY_RAIN_NEWS_7203310
ETV Bharat Logo

Copyright © 2025 Ushodaya Enterprises Pvt. Ltd., All Rights Reserved.