ETV Bharat / city

ಪ್ರತಿಪಕ್ಷದ ನಾಯಕರಿಗೀಗ ಬಾಯಿಗೆ ಬೀಗ ಹಾಕಿಕೊಳ್ಳುವ ಪರಿಸ್ಥಿತಿ: ಸಚಿವ ಬಿ.ಶ್ರೀರಾಮುಲು

ಕೇಂದ್ರ ಸರ್ಕಾರದಿಂದ ನೆರೆ ಪರಿಹಾರ ಸಿಗ್ತಿಲ್ಲ ಎಂಬುದಾಗಿ ಆರೋಪಿಸುತ್ತಿದ್ದ ಪ್ರತಿಪಕ್ಷದ ನಾಯಕರು ಬಾಯಿಗೆ ಬೀಗ ಹಾಕಿಕೊಂಡು ಕುಳಿತುಕೊಳ್ಳುವ ಪರಿಸ್ಥಿತಿ ಬಂದಿದೆ ಎಂದು ಆರೋಗ್ಯ ಸಚಿವ ಸಚಿವ ಬಿ‌.ಶ್ರೀರಾಮುಲು ಟೀಕಿಸಿದ್ದಾರೆ.

author img

By

Published : Oct 5, 2019, 9:25 PM IST

health-minister-talking-against-congress

ಬಳ್ಳಾರಿ: ಕೇಂದ್ರ ಸರ್ಕಾರದಿಂದ ನೆರೆ ಪರಿಹಾರ ಸಿಗ್ತಿಲ್ಲ ಎಂಬುದಾಗಿ ಆರೋಪಿಸುತ್ತಿದ್ದ ಪ್ರತಿಪಕ್ಷದ ನಾಯಕರು ಬಾಯಿಗೆ ಬೀಗ ಹಾಕಿಕೊಂಡು ಕುಳಿತುಕೊಳ್ಳುವ ಪರಿಸ್ಥಿತಿ ಬಂದಿದೆ ಎಂದು ಆರೋಗ್ಯ ಸಚಿವ ಸಚಿವ ಬಿ‌.ಶ್ರೀರಾಮುಲು ಟೀಕಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೆರೆ ಪರಿಹಾರ ತಡ ಆಗಿದ್ದಕ್ಕೆ ನಾನೂ ಎಲ್ಲರಲ್ಲೂ ಕ್ಷಮೆ ಕೇಳಿದ್ದೇನೆ. ಎನ್​ಡಿಆರ್​ಎಫ್ ಮತ್ತು ಎಸ್​​​​ಡಿಆರ್​ಎಫ್ ಮಾರ್ಗಸೂಚಿಯಂತೆ ಕೇಂದ್ರ ಸರ್ಕಾರ ₹ 1200 ಕೋಟಿ ಕೇಂದ್ರ ಬಿಡುಗಡೆ ಮಾಡಿದೆ. ಇನ್ನೂ ಅಧಿಕ ಪರಿಹಾರ ಬೇಕಿದೆ. ಈ ಕುರಿತು ರಾಜ್ಯದ ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರು ಸೇರಿ ಪ್ರಧಾನಿ ಮೋದಿ ಅವರಲ್ಲಿ ಮನವಿ ಮಾಡುತ್ತೇವೆ. ಇದರಲ್ಲಿ ರಾಜಕಾರಣ ಮಾಡುವುದು ತಪ್ಪು ಎಂದು ತಿಳಿಸಿದರು.

ಆರೋಗ್ಯ ಸಚಿವ ಸಚಿವ ಬಿ‌.ಶ್ರೀರಾಮುಲು

ಅಧಿಕಾರ ಕಳೆದುಕೊಂಡ ಕೈ ನಾಯಕರು ವಿಚಲಿತ:

ಕಾಂಗ್ರೆಸ್​ ನಾಯಕರು ಅಧಿಕಾರ ಕಳೆದುಕೊಂಡು ವಿಚಲಿತರಾಗಿದ್ದಾರೆ‌. ರಾಹುಲ್ ಗಾಂಧಿ ಒಂದು ಕಡೆ, ಸೋನಿಯಾ ಗಾಂಧಿ ಮತ್ತೊಂದು ಕಡೆ ಹೇಳಿಕೆಗಳನ್ನು ಕೊಡುತ್ತಾರೆ. ರಾಜ್ಯದಲ್ಲಿ ಪ್ರತಿಪಕ್ಷ ನಾಯಕರಿಲ್ಲ. ಕಾಂಗ್ರೆಸ್ ಪಕ್ಷದಲ್ಲೇ ಭಿನ್ನಾಭಿಪ್ರಾಯಗಳಿವೆ ಎಂದರು.

ಉಪಚುನಾವಣೆ ನಂತರ ಬಳ್ಳಾರಿ ವಿಭಜನೆ ನಿರ್ಧಾರ :

ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಅವರು ಎಲ್ಲಾ ಶಾಸಕರ ಅಭಿಪ್ರಾಯ ಪಡೆದಿದ್ದಾರೆ. ನಾನೂ ಸರ್ಕಾರದ ಭಾಗ. ಈ ಬಗ್ಗೆ ಏನನ್ನೂ ಹೇಳುವುದಿಲ್ಲ. ಉಪಚುನಾವಣೆ ನಂತರ ನಿರ್ಧಾರ ಕೈಗೊಳ್ಳಲಾಗುತ್ತದೆ. ಹೊಸಪೇಟೆ ಉಪಚುನಾವಣಾ ವಿಚಾರವಾಗಿ ಪಕ್ಷದ ತಿರ್ಮಾನಕ್ಕೆ ಬದ್ಧ. ಅಲ್ಲಿ ಯಾರೇ ಸ್ಫರ್ಧಿಸಲಿ ಅವರ ಪರ ಕೆಲಸ ಮಾಡುತ್ತೇವೆ ಎಂದು ಶ್ರೀರಾಮುಲು ಹೇಳಿದರು.

Intro:ಶ್ರೀರಾಮುಲು ಬೈಟ್ - ರಾಜಕೀಯ ವಿಚಾರ.

ಬಳ್ಳಾರಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಬಿ‌.ಶ್ರೀರಾಮುಲು ಅವರು ಕೇಂದ್ರದಿಂದ ಪರಿಹಾರ ಸಿಗ್ತಿಲ್ಲ ಅಂತ ಆರೋಪ ಮಾಡ್ತಾ ಇದ್ದ ವಿರೋಧ ಪಕ್ಷದ ನಾಯಕರುಗಳು ಬಾಯಿಗೆ ಬೀಗ ಹಾಕಿಕೊಂಡು ಕುಳಿತುಕೊಳ್ಳುವ ಪರಿಸ್ಥಿತಿ ಬಂದಿದೆ

Body:.

ನೆರೆ ಪರಿಹಾರಕ್ಕಾಗಿ ನಾನು ( ಬಿ.ಶ್ರೀರಾಮುಲು) ಕೂಡ ಕ್ಷೆಮೆಯಾಚಿಸಿ್ದದೆ. ನಾನು ಕ್ಷಮೆ ಯಾಚಿಸಿದ ನಂತರ 12 ನೂರು ಕೋಟಿ ರೂಪಾಯಿ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ.
ಎನ್.ಡಿ.ಆರ್.ಎಫ್ ಮತ್ತು ಎಸ್.ಡಿ.ಆರ್.ಎಫ್ ಗೈಡ್ ಲೈನ್ಸ್ ಪ್ರಕಾರಾಗಿದೆ. ಇನ್ನು ಹೆಚ್ಚು ಹಣ ಬೇಕಾದ್ರೇ ಕರ್ನಾಟಕ ಸರ್ಕಾರ ಎಲ್ಲಾ ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರು ಸೇರಿ ಪ್ರಧಾನಮಂತ್ರಿ ನರೇಂದ್ರ ಮೋದಿಗೆ ಮನವಿಯನ್ನು ಮಾಡುತ್ತೇವೆ ಎಂದರು.

ಅಧಿಕಾರ ಕಳೆದುಕೊಂಡ ನಾಯಕರು ವಿಚಲಿತ :

ಕೈ ನಾಯಕರು ಅಧಿಕಾರವನ್ನು ಕಳೆದುಕೊಂಡು ವಿಚಲಿತರಾಗಿದ್ದಾರೆ‌ ರಾಹುಲ್ ಗಾಂಧೀ ಒಂದು ಕಡೆ, ಸೋನಿಯಾ ಗಾಂಧೀ ಮತ್ತೊಂದು ಕಡೆ ಹೇಳಿಕೆಗಳನ್ನು ಕೊಡತ್ತಾರೆ ಎಂದರು. ರಾಜ್ಯದಲ್ಲಿ ವಿಪಕ್ಷ ನಾಯಕರಿಲ್ಲ ಅದರಲ್ಲೇ ಭಿನ್ನಾಭಿಪ್ರಾಯಗಳಿವೆ ಎಂದರು.

Conclusion:ಬಳ್ಳಾರಿ ವಿಭಜನೆ :-

ಮುಖ್ಯಮಂತ್ರಿ ಯಡಿಯೂರಪ್ಪ ಅವರ ಬಳಿ ಎಲ್ಲಾ ಜನಪ್ರತಿನಿಧಿಗಳ‌ ಅಭಿಪ್ರಾಯಗಳನ್ನು ನೀಡಿದ್ದೇವೆ.
ಬೈ ಎಲೆಕ್ಷನ್ ನಂತರ ಡಿಸೈಡ್ ಮಾಡಲಾಗುತ್ತದೆ ಎಂದರು.
ಹೊಸಪೇಟೆ ಉಪ ಚುನಾವಣಾ ವಿಚಾರವಾಗಿ ನಾವು ಪಕ್ಷದ ತಿರ್ಮಾನಕ್ಕೆ ಬದ್ಧ, ಅಲ್ಲಿ ಯಾರೇ ಅಭ್ಯರ್ಥಿ ಇರಲಿ ನಾವು ಕೆಕಸ ಮಾಡುತ್ತೇವೆ. ನಾನು ಸರ್ಕಾರದ ಭಾಗವಾಗಿರೋ ಕಾರಣ ನಾನು ಜಿಲ್ಲೆಯ ವಿಭಜನೆ ಕುರಿತು ಮಾತನಾಡೋದಿಲ್ಲ ಮತ್ತು ಜಿಲ್ಲೆಯ ವಿಭಜನೆ ವಿಚಾರವಾಗಿ ನನ್ನ ನಿಲುವು ನಾನು ಸಿಎಂಗೆ ಹೇಳಿದ್ದೇನೆ ಎಂದ ಸಚಿವ ಬಿ. ಶ್ರೀರಾಮುಲು
ETV Bharat Logo

Copyright © 2024 Ushodaya Enterprises Pvt. Ltd., All Rights Reserved.