ETV Bharat / city

ಲಿಂಗಾಯತರ ಕಣ್ಣೀರಲ್ಲಿ ಬಿಎಸ್​ವೈ ಬದುಕುತ್ತಿದ್ದಾರೆ: ಹೆಚ್​ಡಿಕೆ ಕಿಡಿ - ವಿಜಯನಗರ ಹೆಚ್.ಡಿ ಕುಮಾರಸ್ವಾಮಿ ಪ್ರಚಾರ

ಲಿಂಗಾಯತರ ಕಣ್ಣೀರಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬದುಕುತ್ತಿದ್ದಾರೆಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಪ್ರಚಾರ
author img

By

Published : Nov 25, 2019, 6:24 PM IST

ಬಳ್ಳಾರಿ: ಲಿಂಗಾಯತರ ಕಣ್ಣೀರಲ್ಲಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಬದುಕುತ್ತಿದ್ದಾರೆಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಪ್ರಚಾರ

ಜಿಲ್ಲೆಯ ವಿಜಯನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಎನ್.ಎಂ. ನಬಿ ಪರವಾಗಿ ಹೊಸಪೇಟೆ ತಾಲೂಕಿನ ಕಮಲಾಪುರ ಗ್ರಾಮದಲ್ಲಿಂದು ಪ್ರಚಾರ ನಡೆಸಿದ ಬಳಿಕ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.

ವೀರಶೈವ - ಲಿಂಗಾಯತರ ಮತಗಳನ್ನ ಸೆಳೆಯೊ ಕಾರ್ಯದಲ್ಲಿ ತೊಡಗಿಕೊಂಡು ಬಿಎಸ್​ವೈ ಸಮುದಾಯಕ್ಕೆ ನಿಷ್ಠೆ ತೋರಿದ್ದಾರೆ. ಅವರು ಈ ರಾಜ್ಯದ ಆರು ಕೋಟಿ ಜನರ ಪರವಾದ ಮುಖ್ಯಮಂತ್ರಿನಾ ಅಥವಾ ವೀರಶೈವ - ಲಿಂಗಾಯತರ ಮುಖ್ಯಮಂತ್ರಿನಾ ಎಂದು ಹೆಚ್​ಡಿಕೆ ಪ್ರಶ್ನಿಸಿದ್ದಾರೆ.

ನಾನೂ ಕೂಡ ಬೆಳಗಾವಿ ಕಡೆಗೆ ಹೋಗಿರುವೆ. ಲಿಂಗಾಯತ ಸಮುದಾಯದವರು ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದಾರೆ. ಕಣ್ಣೀರೇ ಸಿಎಂ ಯಡಿಯೂರಪ್ಪ ಅವರ ಬದುಕಾಗಿದೆ. ಕೇವಲ ಒಂದು ಸಮುದಾಯದ ಜಾಡು ಹಿಡಿದುಕೊಂಡು ಹೋಗೋರು ಏನೇನಾಗಿದ್ದಾರೆ ಅನ್ನೋದನ್ನು ಕಂಡಿರುವೆ ಎಂದು ಕುಮಾರಸ್ವಾಮಿ ಹರಿಹಾಯ್ದರು.

ಇನ್ನು, ಜೆಡಿಎಸ್​ ಅಭ್ಯರ್ಥಿಗಳು ಸ್ಪರ್ಧಿಸಿರುವ ಎಲ್ಲ ಕ್ಷೇತ್ರಗಳಲ್ಲೂ ಗೆಲುವು ಸಾಧಿಸಲಿದ್ದಾರೆ. ಹಾಗೊಂದು ವೇಳೆ ಅತಂತ್ರ ಸ್ಥಿತಿ ನಿರ್ಮಾಣವಾದ್ರೆ, ಈ ಸರ್ಕಾರ ಬೀಳಿಸೋ ಪ್ರಯತ್ನ ಮಾಡಲ್ಲ. ಬೀಳಲು ಕೂಡ ಬಿಡಲ್ಲ. ನಾನು ಬಾಹ್ಯ ಬೆಂಬಲ‌ ನೀಡುತ್ತೇನೆ. ಅಥವಾ ಏನ್ ಮಾಡುತ್ತೇನೆ ಎಂಬುದನ್ನು ‌ಕಾದು‌ನೋಡಿ ಬ್ರದರ್ ಎಂದ್ರು ಸರ್ಕಾರದ ಅಳಿವು-ಉಳಿವಿನ ಬಗೆಗಿನ ಸುಳಿವನ್ನು ನಿಗೂಢವಾಗಿಯೇ ಇಟ್ಟರು.

Intro:ಲಿಂಗಾಯತರ ಕಣ್ಣೀರಲ್ಲಿ ಬಿಎಸ್ ವೈ ಬದುಕುತ್ತಿದ್ದಾರೆ: ಮಾಜಿ ಸಿಎಂ ಹೆಚ್ ಡಿಕೆ ಕಿಡಿ…!
ಬಳ್ಳಾರಿ: ಲಿಂಗಾಯತರ ಕಣ್ಣೀರಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿ ಯೂರಪ್ಪ ಬದುಕುತ್ತಿದ್ದಾರೆಂದು ಮಾಜಿ ಸಿಎಂ ಹೆಚ್.ಡಿ.ಕುಮಾರ ಸ್ವಾಮಿ ಕಿಡಿಕಾಡಿದ್ದಾರೆ.
ಜಿಲ್ಲೆಯ ಐತಿಹಾಸಿಕ ಪ್ರಸಿದ್ಧ ವಿಜಯನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲಿ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಎನ್.ಎಂ.ಬಿ.ನಬಿಯವ್ರ ಪರವಾಗಿ ಹೊಸಪೇಟೆ ತಾಲೂಕಿನ ಕಮ ಲಾಪುರ ಗ್ರಾಮದಲ್ಲಿಂದು ಪ್ರಚಾರಕಾರ್ಯ ನಡೆಸಿ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ವೀರಶೈವ - ಲಿಂಗಾಯತರ ಮತಗಳನ್ನ ಸೆಳೆಯೊ ಕಾರ್ಯದಲ್ಲಿ ತೊಡಗಿಕೊಂಡು ಸಮುದಾಯದ ನಿಷ್ಠೆ ತೋರಿದ್ದಾರೆ.
ಅವರು ಈ ರಾಜ್ಯದ ಆರು ಕೋಟಿ ಜನರ ಪರವಾದ ಮುಖ್ಯಮಂತ್ರಿನಾ ಅಥವಾ ವೀರಶೈವ - ಲಿಂಗಾಯತರ ಮುಖ್ಯಮಂತ್ರಿನಾ ಎಂದು ಪ್ರಶ್ನಿಸಿದ್ದಾರೆ.
ನಾನೂ ಕೂಡ ಬೆಳಗಾವಿ ಕಡೆಗೆ ಹೋಗಿರುವೆ. ಲಿಂಗಾಯತ ಸಮುದಾಯದ ಕಣ್ಣೀರಿನಲ್ಲಿ ಮುಳಗಿ ಹೋಗಿದೆ.‌ ಅವರ
ಕಣ್ಣೀರೇ ಈ ಸಿಎಂ ಬಿಎಸ್ ವೈಯವ್ರ ಬದುಕಾಗಿದೆ. ಇಂತಹ ಸ್ಥಿತಿಯಲ್ಲಿ ಬಿಎಸ್ ಯಡಿಯೂರಪ್ಪನವ್ರು ಇದ್ದಾರೆ. ಸಮುದಾಯದ ಜಾಡು ಹಿಡಿದುಕೊಂಡು ಹೋಗೋರು ಏನೇನಾಗಿದ್ದಾರೆ ಎಂದು ಕಂಡಿರುವೆ ಎಂದ್ರು ಮಾಜಿ ಸಿಎಂ ಹೆಚ್ ಡಿಕೆ.
Body:ಅನರ್ಹ ಶಾಸಕರ ಹದಿನೈದು ಕ್ಷೇತ್ರಗಳಲ್ಲೂ ಜೆಡಿಎಸ್ ಅಭ್ಯರ್ಥಿ ಗಳು ಗೆಲುವು ಸಾಧಿಸಲಿದ್ದಾರೆ. ಹಾಗೊಂದು ವೇಳೆ ಅತಂತ್ರ ಸ್ಥಿತಿ ನಿರ್ಮಾಣವಾದ್ರೆ, ಈ ಸರ್ಕಾರ ಬೀಳಿಸೋ ಪ್ರಯತ್ನ ಮಾಡಲ್ಲ. ಬೀಳಲು ಕೂಡ ಬಿಡಲ್ಲ. ನಾನು ಬಾಹ್ಯ ಬೆಂಬಲ‌ ನೀಡುತ್ತೇನೆ. ಅಥವಾ ಏನ್ ಮಾಡುತ್ತೇನೆ ಎಂಬುದನ್ನು ‌ಕಾದು‌ನೋಡಿ ಬ್ರದರ್ ಎಂದ್ರು ಕುಮಾರಣ್ಣ.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

Conclusion:KN_BLY_5_EX_CM_HDK_BYTE_VSL_7203310
ETV Bharat Logo

Copyright © 2025 Ushodaya Enterprises Pvt. Ltd., All Rights Reserved.