ಬಳ್ಳಾರಿ: ಗ್ರಾಮ ದೇವತೆ ಶ್ರೀ ಕನಕದುರ್ಗಮ್ಮ ದೇವಸ್ಥಾನದ ಸಿಡಿಬಂಡಿ ರಥೋತ್ಸವ ಸುಸೂತ್ರವಾಗಿ ಜರುಗಿತು. ಈ ಸಂದರ್ಭದಲ್ಲಿ ನೆರೆದಿದ್ದ ಜನರು ಹೊರತುಪಡಿಸಿ ಸಚಿವ ಶ್ರೀರಾಮುಲು ಒಬ್ಬರೇ ಮಾಸ್ಕ್ ಧರಿಸಿದ್ದು ವಿಶೇಷವಾಗಿತ್ತು.
ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು, ಅಳಿಯ ಕಂಪ್ಲಿ ಮಾಜಿ ಶಾಸಕ ಸುರೇಶ್ ಬಾಬು ಸೇರಿದಂತೆ ಸಾವಿರಾರು ಜನರು ಈ ಸಿಡಿಬಂಡಿ ರಥೋತ್ಸವಕ್ಕೆ ಸಾಕ್ಷಿಯಾದರು.
ಶ್ರೀರಾಮುಲು ಸುತ್ತಮುತ್ತಲಿದ್ದ ಅಭಿಮಾನಿಗಳು ಮಾಸ್ಕ್ ಹಾಕಿರಲಿಲ್ಲ. ಸಚಿವ ಶ್ರೀರಾಮುಲು ಮಾತ್ರ ಮಾಸ್ಕ್ ಧರಸಿಸಿದ್ದು ವಿಶೇಷವಾಗಿತ್ತು.