ETV Bharat / city

ಸರ್ಕಾರದಿಂದ ಸಾವಿರಾರು ಎಕರೆ ರೈತರ ಭೂಮಿ ವಶ: 12 ವರ್ಷವಾದ್ರೂ ನಿರ್ಮಾಣವಾಗದ ಕೈಗಾರಿಕೆಗಳು - ಸಿಎಂ ಬಸವರಾಜ ಬೊಮ್ಮಾಯಿ

ಕೈಗಾರಿಕೆಗಳ ಸ್ಥಾಪನೆಗಾಗಿ ಕೆಐಎಡಿಬಿ ರೈತರಿಂದ ಸಾವಿರಾರು ಎಕರೆ ಭೂಮಿಯನ್ನು ವಶಪಡಿಸಿಕೊಂಡಿತ್ತು. ಆದ್ರೆ ವಶಪಡಿಸಿಕೊಂಡು 12 ವರ್ಷ ಆದ್ರೂ ಇದುವರೆಗೆ ಕೈಗಾರಿಕೆಗಳ ಸ್ಥಾಪನೆಯನ್ನು ಮಾಡಿಲ್ಲ.

Government seized thousands of acres of farmers land
ಸರ್ಕಾರದಿಂದ ಸಾವಿರಾರು ಎಕರೆ ರೈತರ ಭೂಮಿ ವಶ
author img

By

Published : Aug 16, 2022, 8:41 PM IST

ಬಳ್ಳಾರಿ: ಕೈಗಾರಿಕೆಗಳನ್ನು ನಿರ್ಮಾಣ ಮಾಡುವ ಉದ್ದೇಶದಿಂದ ಸರ್ಕಾರ ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ ರೈತರ ಸಾವಿರಾರು ಎಕರೆ ಭೂಮಿ ವಶಪಡಿಸಿಕೊಂಡಿತ್ತು. ಕೆಐಎಡಿಬಿ ಮೂಲಕ ವಶಪಡಿಸಿಕೊಂಡ ಭೂಮಿಯಲ್ಲಿ ಇದುವರೆಗೆ ಕೈಗಾರಿಕೆಗಳು ಸ್ಥಾಪನೆಯಾಗಿಲ್ಲ. ಹೀಗಾಗಿ ಇತ್ತ ಉದ್ಯೋಗವಿಲ್ಲದೇ ಅತ್ತ ಭೂಮಿಯೂ ಇಲ್ಲದೆ ರೈತರು ಪರದಾಡುತ್ತಿದ್ದಾರೆ.

ಬಳ್ಳಾರಿ ತಾಲೂಕಿನ ಕುಡುತಿನಿ, ವೇಣಿವೀರಾಪುರ, ಕೊಳಗಲ್ಲು ಗ್ರಾಮಗಳಲ್ಲಿ ಬ್ರಹ್ಮಿಣಿ ಸ್ಟಿಲ್ ಹಾಗೂ ಮಿತ್ತಲ್ ಕಂಪನಿಗಾಗಿ ರೈತರಿಂದ ಸುಮಾರು 10 ಸಾವಿರ ಎಕರೆ ಭೂಮಿಯನ್ನು ಕೆಐಎಡಿಬಿ ಸ್ವಾಧೀನಪಡಿಸಿಕೊಂಡಿತ್ತು. ಇತ್ತ ರೈತರು ತಮ್ಮ ಕುಟುಂಬಕ್ಕೆ ಉದ್ಯೋಗ ಸಿಗಬಹುದು ಅನ್ನೋ ಕಾರಣಕ್ಕೆ ಕಡಿಮೆ ದರದಲ್ಲಿಯೇ ಭೂಮಿ ನೀಡಿದ್ದಾರೆ. ಇದಕ್ಕೆ ಕೆಲ ರೈತರು ವಿರೋಧ ವ್ಯಕ್ತಪಡಿಸಿ ನ್ಯಾಯಾಲಯದ ಮೂಲಕ ಕಾನೂನು ಹೋರಾಟ ಮಾಡುತ್ತಲೇ ಇದ್ದಾರೆ. ಆದ್ರೆ ಇಲ್ಲಿಯತನಕ ಸ್ವಾಧೀನಪಡಿಸಿಕೊಂಡ ಭೂಮಿಯಲ್ಲಿ ಕೈಗಾರಿಕೆಗಳು ಸ್ಥಾಪನೆಯಾಗಿಲ್ಲ.

ಸರ್ಕಾರದಿಂದ ಸಾವಿರಾರು ಎಕರೆ ರೈತರ ಭೂಮಿ ವಶ

ಈ ವಿಚಾರವನ್ನು ಸಿಎಂ ಬಸವರಾಜ ಬೊಮ್ಮಾಯಿ ಗಂಭೀರವಾಗಿ ತೆಗೆದುಕೊಂಡಿದ್ದಾರೆ. ಕೈಗಾರಿಕಾ ಸ್ಥಾಪನೆ ಮಾಡಲು 6 ತಿಂಗಳು ಗಡುವು ನೀಡಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶ್ರೀರಾಮುಲು ತಿಳಿಸಿದ್ದಾರೆ.

ಇದನ್ನೂ ಓದಿ: ಹಿಂದುಳಿದ ಸಮುದಾಯದ ವಿಚಾರ ಬಂದಾಗ ನಾನು ಸಿದ್ದರಾಮಯ್ಯ ಒಂದೇ.. ಶ್ರೀರಾಮುಲು

ರೈತರಿಗೆ ನೀಡಲಾದ ಪರಿಹಾರ: ಕುಡತಿನಿ ಗ್ರಾಮದಲ್ಲಿ ಪ್ರತಿ ಎಕರೆಗೆ 8 ಲಕ್ಷ, ವೇಣಿವೀರಾಪುರ ಗ್ರಾಮದಲ್ಲಿ ಪ್ರತಿ ಎಕರೆಗೆ 10 ಲಕ್ಷ ಹಾಗೂ ಕೊಳಗಲ್ಲು ಗ್ರಾಮದಲ್ಲಿ ಪ್ರತಿ ಎಕರೆಗೆ 12 ಲಕ್ಷ ರೂ.ದಂತೆ ರೈತರಿಗೆ ಪರಿಹಾರ ನೀಡಲಾಗಿದೆ. ಆದರೆ ಪರಿಹಾರ ಹೆಚ್ಚು ಕೊಡಬೇಕು ಅನ್ನೋ ಒತ್ತಾಯವನ್ನು ಇವತ್ತಿಗೂ ರೈತರು ಮಾಡುತ್ತಿದ್ದಾರೆ. ಇದಕ್ಕಾಗಿ ಭೂ ಸಂತ್ರಸ್ತರು ಸಾಕಷ್ಟು ಹೋರಾಟಗಳನ್ನು ಮಾಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.