ETV Bharat / city

ಅನುಮಾನಾಸ್ಪದವಾಗಿ ಮೃತಪಟ್ಟ ಬಾಲಕಿ ಮನೆಗೆ ಉಗ್ರಪ್ಪ ಭೇಟಿ: ಪೋಷಕರಿಗೆ ಸಾಂತ್ವನ - ತೋರಣಗಲ್ಲು ಬಳಿಯ ವಡ್ಡು ಗ್ರಾಮಕ್ಕೆ ಉಗ್ರಪ್ಪ ಭೇಟಿ

ಸಂಡೂರು ತಾಲೂಕಿನ ತೋರಣಗಲ್ಲು ಬಳಿಯ ವಡ್ಡು ಗ್ರಾಮದಲ್ಲಿ ಇತ್ತೀಚೆಗೆ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಬಾಲಕಿಯ ಮನೆಗೆ ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಭೇಟಿ ನೀಡಿ, ಬಾಲಕಿಯ ಪೋಷಕರಿಗೆ ಸಾಂತ್ವನ ಹೇಳಿದರು.

ತೋರಣಗಲ್ಲು ಬಳಿಯ ವಡ್ಡು ಗ್ರಾಮಕ್ಕೆ ಉಗ್ರಪ್ಪ ಭೇಟಿ
author img

By

Published : Sep 14, 2019, 8:31 AM IST

Updated : Sep 14, 2019, 9:32 AM IST

ಬಳ್ಳಾರಿ: ಜಿಲ್ಲೆಯ ಸಂಡೂರು ತಾಲೂಕಿನ ತೋರಣಗಲ್ಲು ಬಳಿಯ ವಡ್ಡು ಗ್ರಾಮದಲ್ಲಿ ಇತ್ತೀಚೆಗೆ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಬಾಲಕಿಯ ಮನೆಗೆ ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಭೇಟಿ ನೀಡಿ, ಬಾಲಕಿಯ ಪೋಷಕರಿಗೆ ಸಾಂತ್ವನ ಹೇಳಿದರು.

ತೋರಣಗಲ್ಲು ಬಳಿಯ ವಡ್ಡು ಗ್ರಾಮಕ್ಕೆ ಉಗ್ರಪ್ಪ ಭೇಟಿ

ಬಳಿಕ ಮಾತನಾಡಿದ ಉಗ್ರಪ್ಪ, ಇದೊಂದು ಅಮಾನವೀಯ ಘಟನೆ. ನಾಗರಿಕ ಸಮಾಜದಲ್ಲಿ ಮಕ್ಕಳನ್ನು ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಮತ್ತು ರಾಜ್ಯ ಸರ್ಕಾರದ ಜವಾಬ್ದಾರಿ. ಸಂವಿಧಾನದ 21ನೇ ವಿಧಿಯ ಪ್ರಕಾರ ಜೀವಿಸುವ ಮತ್ತು ಸ್ವಾತಂತ್ರ್ಯದ ಮೂಲಭೂತ ಹಕ್ಕನ್ನು ಪಡೆದುಕೊಂಡಿದ್ದೇವೆ. ಸಂಡೂರು ತಾಲೂಕಿನಲ್ಲಿ ಇದು ಎರಡನೇ ಘಟನೆಯಾಗಿದೆ. ಪೊಲೀಸ್ ಇಲಾಖೆಯ ಶ್ವಾನದಳ ಈಗಾಗಲೇ ತಪಾಸಣೆ ಮಾಡಿದ್ದು, ಸುಮಾರು ಐದು ಸಿಸಿ ಕ್ಯಾಮರಾಗಳ ಫೂಟೇಜ್​ ಪರಿಶೀಲಿಸಿ ತನಿಖೆಯನ್ನು ಚುರುಕುಗೊಳಿಸಲಾಗಿದೆ ಎಂದು ಡಿವೈಎಸ್‍ಪಿ ತಿಳಿಸಿದ್ದಾರೆ ಎಂದರು.

ಮೃತ ಬಾಲಕಿಯ ಸಾವಿಗೆ ಸರ್ಕಾರದಿಂದ ಪರಿಹಾರ ನೀಡುವ ವಿಚಾರವಾಗಿ ಬಳ್ಳಾರಿ ಜಿಲ್ಲಾಧಿಕಾರಿ, ಎಸ್‍ಪಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯವರ ಬಳಿ ಚರ್ಚಿಸಿದ್ದೇನೆ. ಆದರೆ, ಇಲ್ಲಿನ ಅಧಿಕಾರಿಗಳು ಕೇಂದ್ರ ಮತ್ತು ರಾಜ್ಯ ಸರ್ಕಾರದ ಮಾರ್ಗದರ್ಶನ ಸೂಚನಾ ಆದೇಶಗಳನ್ನು ಸರಿಯಾಗಿ ತಿಳಿದುಕೊಂಡಿಲ್ಲ. ಹಾಗಾಗಿ, ಪರಿಹಾರ ವಿಳಂಬವಾಗಿದೆ ಹಾಗೂ ಪಾಲಕರು ತುಂಬ ಬಡವರಾಗಿದ್ದು, ಸರ್ಕಾರದ ತಕ್ಷಣ ಪರಿಹಾರವನ್ನು ಕೊಡಬೇಕು ಎಂದು ಆಗ್ರಹಿಸಿದರು.

ರಾಜ್ಯ ಸರ್ಕಾರದಿಂದ ಪರಿಹಾರವನ್ನು ಕೊಡಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಸಂಡೂರು ತಾಲೂಕಿನ ಪ್ರಭಾರಿ ಸಿಪಿಐ ಟಿ.ಆರ್.ಅಹಮ್ಮದ್​ ಅವರನ್ನು ದೂರವಾಣಿಯಲ್ಲಿ ಸಂಪರ್ಕಿಸಿ, ಮಗುವಿನ ವಿಚಾರಕ್ಕೆ ಸಂಬಂಧಿಸಿದಂತೆ ಮಾಹಿತಿ ಪಡೆದರು. ಈ ವೇಳೆ ಸರಿಯಾಗಿ ಅಹಮ್ಮದ್ ಸರಿಯಾಗಿ ಸ್ಪಂದಿಸದ ಹಿನ್ನೆಲೆ ಅವರನ್ನು ತರಾಟೆಗೆ ತೆಗೆದುಕೊಂಡರು.

ಈ ವೇಳೆ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ಉಷಾ, ಜಿಲ್ಲಾ ಮಕ್ಕಳಾ ರಕ್ಷಣಾಧಿಕಾರಿ ರಾಮಕೃಷ್ಣ, ಸಹಾಯಕ ಮಕ್ಕಳ ರಕ್ಷಣಾಧಿಕಾರಿ ಚನ್ನಬಸಪ್ಪ, ಗ್ರಾಮದ ಮುಖಂಡರಾದ ಉಮೇಶ, ಮಡಿವಾಳ ಹಳ್ಳದಪ್ಪ, ಶಂಕ್ರಪ್ಪ ಉಪಸ್ಥಿತರಿದ್ದರು.

Intro:ಅನುಮಾಸ್ಪದವಾಗಿ ಸಾವನ್ನಪ್ಪಿದ ಬಾಲಕಿ ಮನೆಗೆ ಮಾಜಿ ಸಂಸದ ಉಗ್ರಪ್ಪ ಭೇಟಿ, ಸಾಂತ್ವನ
ಬಳ್ಳಾರಿ: ಜಿಲ್ಲೆಯ ಸಂಡೂರು ತಾಲೂಕಿನ ತೋರಣಗಲ್ಲು ಬಳಿಯ ವಡ್ಡು ಗ್ರಾಮದಲ್ಲಿ ಇತ್ತೀಚೆಗೆ ಅಪಹರಿಸಿ ಅನುಮಾಸ್ಪದವಾಗಿ ಸಾವನ್ನಪ್ಪಿದ ಬಾಲಕಿ ಮನೆಗಿಂದು ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಭೇಟಿ ನೀಡಿ, ಬಾಲಕಿಯ ಪೋಷಕರಿಗೆ ಸಾಂತ್ವನ ಹೇಳಿದ್ದಾರೆ.
ಬಳಿಕ ಮಾತನಾಡಿದ ಉಗ್ರಪ್ಪನವ್ರು, ಇದೊಂದು ಅಮಾನವೀಯವಾದ ಘಟನೆ ಇದು. ನಾಗರೀಕ ಸಮಾಜದಲ್ಲಿ ಮಕ್ಕಳನ್ನು ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಮತ್ತು ರಾಜ್ಯ ಸರ್ಕಾರದ ಜವಾಬ್ದಾರಿಯಾಗಿದೆ. ಸಂವಿಧಾನದ 21ನೇ ವಿಧಿಯ ಪ್ರಕಾರ ಜೀವಿಸುವ ಮತ್ತು ಸ್ವಾತಂತ್ರ್ಯದ ಮೂಲಭೂತ ಹಕ್ಕನ್ನು ಪಡೆದುಕೊಂಡಿದ್ದೇವೆ.
ಸಂಡೂರು ತಾಲೂಕಿನಲ್ಲಿ ಇದು ಎರಡನೇಯ ಘಟನೆಯಾಗಿದೆ. ಪೊಲೀಸ್ ಇಲಾಖೆಯವರ ಶ್ವಾನದಳ ತಪಾಸಣೆ ಮಾಡಲಾಗಿದೆ. ನಂತರ ಇಲ್ಲಿನ ಸುಮಾರು ಐದು ಸಿಸಿ ಕ್ಯಾಮರಾಗಳ ವಿಡಿಯೊ ಫೂಟೇಜ್ ಗಳನ್ನು ಪರಿಶೀಲನೆ ಮಾಡಲಾಗಿದ್ದು ಇತರ ಅಗತ್ಯ ಮಾಹಿತಿಯಿಂದ ತನಿಖೆಯನ್ನು ಚುರುಕುಗೊಳಿಸಲಾಗಿದೆ ಎಂದು ಡಿವೈಎಸ್‍ಪಿಯವ್ರು ತಿಳಿಸಿದ್ದಾರೆ ಎಂದಿದ್ದಾರೆ.
ಮೃತ ಬಾಲಕಿಯ ತಂದೆ-ತಾಯಿಗಳನ್ನು ವಿಚಾರಿಸಿದರೆ ಮಗು ಕೊಲೆಯಾಗಿ ಸುಮಾರು ಐದು ದಿನಗಳಾದರೂ ಸರ್ಕಾರದಿಂದ ಒಂದು ನಯಾಪೈಸೆಯನ್ನು ಕೊಟ್ಟಿಲ್ಲ ಈ ವಿಚಾರವಾಗಿ, ಬಳ್ಳಾರಿ ಜಿಲ್ಲಾಧಿಕಾರಿ, ಎಸ್‍ಪಿ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಕೆಯವರ ಬಳಿ ಚರ್ಚಿಸಿದ್ದೇನೆ. ಆದರೆ, ಇಲ್ಲಿನ ಅಧಿಕಾರಿಗಳು ಕೇಂದ್ರ ಮತ್ತು ರಾಜ್ಯ ಸರ್ಕಾರದ ಮಾರ್ಗದರ್ಶನ ಸೂಚನಾ ಆದೇಶಗಳನ್ನು ಸರಿಯಾಗಿ ತಿಳಿದುಕೊಂಡಿಲ್ಲ. ಹಾಗಾಗಿ, ಪರಿಹಾರ ವಿಳಂಬವಾಗಿದೆ ಹಾಗೂ ಪಾಲಕರು ತುಂಬ ಬಡವರಾಗಿದ್ದು, ಸರ್ಕಾರದ ತಕ್ಷಣ ಪರಿಹಾರವನ್ನು ಕೊಡಬೇಕು’ ಎಂದು ಆಗ್ರಹಿಸಿದರು.
ಈ ಕೂಡಲೇ ತನಿಖೆಯನ್ನು ಶೀಘ್ರಗತಿಯಲ್ಲಿ ಚುರುಕುಗೊಳಿಸಿ, ತಪ್ಪಿಸ್ಥರ ವಿರುದ್ಧ ದಸ್ತುಗಿರಿ ಮಾಡಿ, ಪೊಲೀಸ್ ಇಲಾಖೆಯು ಸೂಕ್ತ ಕ್ರಮಕೈಗೊಳ್ಳಬೇಕು ಹಾಗೂ ಕಾನೂನು ರೀತಿಯಲ್ಲಿ ಸರ್ಕಾರದಿಂದ ಬರುವ ಪರಿಹಾರವನ್ನು ಮಗುವಿನ ತಂದೆ ತಾಯಿಗಳಿಗೆ ರಾಜ್ಯದಿಂದ 3 ಲಕ್ಷ ಮತ್ತು ಕೇಂದ್ರದಿಂದ 8.5 ಲಕ್ಷ ಹಣವನ್ನು ಅಧಿಕಾರಿಗಳು ತಕ್ಷಣ ಬಿಡುಗಡೆಗೊಳಿಸಿ ಕುಟುಂಬಕ್ಕೆ ನೀಡಬೇಕು ಎಂದರು.
ಕುಟುಂದವರಿಗೆ ಮನೆಯನ್ನು ಮತ್ತು ಇನ್ನೂ ಇಬ್ಬರ ಮಕ್ಕಳ ಶಿಕ್ಷಣಕ್ಕೆ ಆರ್ಥಿಕ ಸಹಾಯವನ್ನು ಮಾಡಲು ಸರ್ಕಾರವು ಮುಂದಾಗಬೇಕು. ಮುಂದಿನ ದಿನಗಳಲ್ಲಿ ಈ ರೀತಿಯ ಘಟನೆಗಳು ಆಗದಂತೆ ಪೊಲೀಸ್ ಇಲಾಖೆ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ಸಾರ್ವಜನಿಕರಲ್ಲಿ ಜಾಗೃತಿಯನ್ನು ಮಾಡಬೇಕು ಎಂದರು.
ರಾಜ್ಯ ಸರ್ಕಾರದಿಂದ ಪರಿಹಾರವನ್ನು ಕೊಡಿಸುವಲ್ಲಿ ಪ್ರಮಾಣಿಕ ಪ್ರಯತ್ನವನ್ನು ಮಾಡಲಾಗುವುದು. ಸಂಡೂರು ತಾಲೂಕಿನ ಪ್ರಭಾರಿ ಸಿಪಿಐ ಟಿ.ಆರ್.ನಯೀ ಅಹಮ್ಮದ ಅವರನ್ನು ದೂರವಾಣಿಯಲ್ಲಿ ಸಂಪರ್ಕಿಸಿ, ಮಗುವಿನ ವಿಚಾರಕ್ಕೆ ಸಂಬಂಧಿಸಿದಂತೆ ಸರಿಯಾಗಿ ಸ್ಪಂದಿಸದೆ ಇರುವುದರಿಂದ ಅವರನ್ನು ತರಾಟೆಗೆ ತೆಗೆದುಕೊಂಡರು.
ಹೊರರಾಜ್ಯದವರ ಬಗ್ಗೆ ಕಾರ್ಖಾನೆಗಳು ಸರಿಯಾದ ಮಾಹಿತಿಯನ್ನು ಪಡೆಯಬೇಕು ಮತ್ತು ಪೊಲೀಸ್ ಇಲಾಖೆಯು ಸಹ ಇದರ ಬಗ್ಗೆ ಜಾಗೃತಿಯನ್ನು ವಹಿಸಬೇಕು ಎಂದರು.
Body:ಇದೇ ವಿಚಾರವಾಗಿ ಮಹಿಳಾ ಮತ್ತು ಮಕ್ಕಳ ದೌರ್ಜನ್ಯ ಸಮಿತಿಯ ಅಧ್ಯಕ್ಷನಾಗಿ 2018 ಮಾರ್ಚ 23 ರಂದು ಸಮಗ್ರ ಅಧ್ಯಾಯನ ನಡೆಸಿ, ಸುಮಾರು 6000 ಪುಟಗಳು ಮತ್ತು 11 ವ್ಯಾಲಿಮ್‍ಗಳು ಮಾಹಿತಿಯ ವರದಿಯನ್ನು ರಾಜ್ಯ ಸರ್ಕಾರಕ್ಕೆ ಕೊಟ್ಟಿದ್ದೇವೆ ಇದರ ಅನುಸಾರ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.
ಗ್ರಾಮಕ್ಕೆ ರಾತ್ರಿ ಸಮಯದಲ್ಲಿ ಸಂಪೂರ್ಣ ರಕ್ಷಣೆಯನ್ನು, ನೆರೆಹೊರಯ ರಾಜ್ಯದವರನ್ನು ನಿಯಂತ್ರಿಸ ಬೇಕು ಮತ್ತು ಗ್ರಾಮದ ಮಧ್ಯ ಭಾಗದಲ್ಲಿ ಇರುವ ಬ್ರಾಂದಿ ಷಾಪ್‍ನ್ನು ವರ್ಗಾಹಿಸಬೇಕು ಎಂದು ಸಾರ್ವಜನಿಕರು ಮಾಜಿ ಸಂಸದರ ಬಳಿ ಮನವಿ ಮಾಡಿದರು.
ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಉಷಾ, ಜಿಲ್ಲಾ ಮಕ್ಕಳಾ ರಕ್ಷಣಾಧಿಕಾರಿ ರಾಮಕೃಷ್ಣ, ಸಹಾಯಕ ಮಕ್ಕಳ ರಕ್ಷಣಾಧಿಕಾರಿ ಚನ್ನಬಸಪ್ಪ, ಗ್ರಾಮದ ಮುಖಂಡರಾದ ಉಮೇಶ, ಮಡಿವಾಳ ಹಳ್ಳದಪ್ಪ, ಶಂಕ್ರಪ್ಪ ಇದ್ದರು.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

Conclusion:KN_BLY_6_EX_MP_VISIT_VADDU_VILLEGAE_VISUALS_7203310

KN_BLY_6a_EX_MP_VISIT_VADDU_VILLEGAE_VISUALS_7203310
Last Updated : Sep 14, 2019, 9:32 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.