ETV Bharat / city

1ನೇ ಹಂತದ ಗ್ರಾಪಂ ಚುನಾವಣೆಗೆ ಬಳ್ಳಾರಿ ಜಿಲ್ಲಾಡಳಿತದಿಂದ ಸಕಲ ಸಿದ್ಧತೆ - Gram Panchayat elections preparation in Bellary

ಬಳ್ಳಾರಿ, ಕುರುಗೋಡು, ಸಿರಗುಪ್ಪ, ಹೊಸಪೇಟೆ, ಕಂಪ್ಲಿ ತಾಲೂಕುಗಳಲ್ಲಿ ಮೊದಲ ಹಂತದ ಗ್ರಾಮ ಪಂಚಾಯಿತಿ ಚುನಾವಣೆ ನಡೆಯಲಿದ್ದು, ಜಿಲ್ಲಾಡಳಿತ ಸಕಲ ಸಿದ್ಧತೆ ಕೈಗೊಂಡಿದೆ.

first-phase-of-gram-panchayat-elections-preparation-in-bellary
ಮೊದಲ ಹಂತದ ಗ್ರಾಪಂ ಚುನಾವಣೆಗೆ ಬಳ್ಳಾರಿ ಜಿಲ್ಲಾಡಳಿತದಿಂದ ಸಕಲ ಸಿದ್ಧತೆ
author img

By

Published : Dec 21, 2020, 7:08 PM IST

ಬಳ್ಳಾರಿ: ಜಿಲ್ಲೆಯ 5 ತಾಲೂಕುಗಳ 85 ಗ್ರಾ.ಪಂ.ಗಳ 701 ಮತಗಟ್ಟೆಗಳಲ್ಲಿ ನಾಳೆ ಮೊದಲ ಹಂತದ ಚುನಾವಣೆ ನಡೆಯಲಿದ್ದು, ಜಿಲ್ಲಾಡಳಿತ ಸಕಲ ಸಿದ್ಧತೆ ಕೈಗೊಂಡಿದೆ.

ಜಿಲ್ಲೆಯಲ್ಲಿ 305 ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದು, ಇನ್ನುಳಿದ 1,372 ಸ್ಥಾನಗಳಿಗೆ 3,288 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಬಳ್ಳಾರಿ, ಕುರುಗೋಡು, ಸಿರಗುಪ್ಪ, ಹೊಸಪೇಟೆ, ಕಂಪ್ಲಿ ತಾಲೂಕುಗಳಲ್ಲಿ ಮೊದಲ ಹಂತದ ಮತದಾನ ನಡೆಯಲಿದೆ.

ಬಳ್ಳಾರಿ ತಾಲೂಕಿನ ಗ್ರಾಮ ಪಂಚಾಯಿತಿಗಳ ಚುನಾವಣೆಯ ಮಸ್ಟರಿಂಗ್ ಮತ್ತು ಡಿಮಸ್ಟರಿಂಗ್ ನಡೆಯುವ ನಗರದ ಕೋಟೆ ಆವರಣದ ಸಂತ್‍ಜಾನ್ ಶಾಲೆಯ ಆವರಣದಲ್ಲಿ ಚುನಾವಣಾ ಕಾರ್ಯಕ್ಕೆ ನಿಯೋಜಿತರಾದ ಸಿಬ್ಬಂದಿ ಸೋಮವಾರ ಬೆಳಗ್ಗೆಯಿಂದಲೇ ಉಪಸ್ಥಿತರಿದ್ದು, ಚುನಾವಣಾ ಸಂಬಂಧಿತ ಅಗತ್ಯ ಸಲಹೆ - ಸೂಚನೆಗಳನ್ನು ಪಡೆದುಕೊಂಡು ಹಾಗೂ ಚುನಾವಣಾ ಸಾಮಗ್ರಿಗಳನ್ನು ತೆಗೆದುಕೊಂಡು ತಮಗೆ ಸೂಚಿಸಲಾದ ಗ್ರಾಮಗಳ ಮತಗಟ್ಟೆಗಳಿಗೆ ಬಸ್‍ಗಳಲ್ಲಿ ತೆರಳುತ್ತಿರುವ ದೃಶ್ಯ ಕಂಡುಬಂತು.

ಚುನಾವಣಾ ಆಯೋಗದಿಂದ ವೀಕ್ಷಕರಾಗಿ ನಿಯೋಜಿತರಾಗಿ ಆಗಮಿಸಿರುವ ಕೆ.ಎಂ.ಸುರೇಶಕುಮಾರ್, ಅಪರ ಜಿಲ್ಲಾಧಿಕಾರಿ ಪಿ.ಎಸ್.ಮಂಜುನಾಥ, ಅಪರ ಪೊಲೀಸ್ ವರಿಷ್ಠಾಧಿಕಾರಿ ಬಿ.ಎನ್.ಲಾವಣ್ಯ, ಸಹಾಯಕ ಆಯುಕ್ತ ರಮೇಶ ಕೋನರೆಡ್ಡಿ, ತಹಸೀಲ್ದಾರ್ ರೆಹಮಾನ್ ಪಾಶಾ ಸೇರಿದಂತೆ ಅನೇಕ ಅಧಿಕಾರಿಗಳು ಮಸ್ಟರಿಂಗ್ ಕಾರ್ಯದ ಪರಿಶೀಲನೆ ನಡೆಸಿದರು.

ಬಳ್ಳಾರಿ ತಾಲೂಕಿನ 25 ಗ್ರಾ.ಪಂ.ಗಳ 261 ಮತಗಟ್ಟೆಗಳ ಪೈಕಿ 240 ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ. 73 ಸದಸ್ಯರು ಈಗಾಗಲೇ ಅವಿರೋಧವಾಗಿ ಆಯ್ಕೆಯಾಗಿದ್ದು, 449 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, 1,098 ಜನರು ಕಣದಲ್ಲಿದ್ದಾರೆ. ಈ ತಾಲೂಕಿನಲ್ಲಿ 21 ಅವಿರೋಧ/ಬಹಿಷ್ಕರಿಸಿದ ಮತಗಟ್ಟೆಗಳಿವೆ.

ಕುರುಗೋಡು ತಾಲೂಕಿನಲ್ಲಿ 12 ಗ್ರಾಪಂಗಳ ಪೈಕಿ 11 ಗ್ರಾ.ಪಂ.ಗಳಲ್ಲಿ ಚುನಾವಣೆ ನಡೆಯಲಿದ್ದು, 113 ಮತಗಟ್ಟೆಗಳ ಪೈಕಿ 81 ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ. ಅವಿರೋಧ/ಬಹಿಷ್ಕರಿಸಿದ ಕಾರಣ 32 ಮತಗಟ್ಟೆಗಳಲ್ಲಿ ಮತದಾನ ನಡೆಯುತ್ತಿಲ್ಲ. 68 ಜನರು ಅವಿರೋಧವಾಗಿ ಆಯ್ಕೆಯಾಗಿದ್ದು, 145 ಸದಸ್ಯ ಸ್ಥಾನಗಳಿಗೆ 337 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಸಿರಗುಪ್ಪ ತಾಲೂಕಿನ 27 ಗ್ರಾ.ಪಂ.ಗಳ ಪೈಕಿ 26 ಗ್ರಾಮಗಳ 173 ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ. ಇನ್ನೂ 46 ಮತಗಟ್ಟೆಗಳಲ್ಲಿ ಅವಿರೋಧ/ಬಹಿಷ್ಕರಿಸಿದ ಕಾರಣದಿಂದ ಮತದಾನ ಪ್ರಕ್ರಿಯೆ ನಡೆಯುತ್ತಿಲ್ಲ. ಈಗಾಗಲೇ 94 ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದು, 361 ಸದಸ್ಯ ಸ್ಥಾನಗಳಿಗೆ 763 ಅಭ್ಯರ್ಥಿಗಳು ಸ್ಪರ್ಧೆಗಿಳಿದಿದ್ದಾರೆ.

ಹೊಸಪೇಟೆ ತಾಲೂಕಿನ 13 ಗ್ರಾ.ಪಂ.ಗಳ 125 ಮತಗಟ್ಟೆಗಳ ಪೈಕಿ 114 ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ. ಇನ್ನೂ 11 ಮತಗಟ್ಟೆಗಳಲ್ಲಿ ಅವಿರೋಧ/ಬಹಿಷ್ಕರಿಸಿದ ಕಾರಣದಿಂದ ಮತದಾನ ಪ್ರಕ್ರಿಯೆ ನಡೆಯುತ್ತಿಲ್ಲ. ಈಗಾಗಲೇ 41 ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದು, 233 ಸದಸ್ಯ ಸ್ಥಾನಗಳಿಗೆ 653 ಅಭ್ಯರ್ಥಿಗಳು ಸ್ಪರ್ಧೆಗಿಳಿದಿದ್ದಾರೆ.

ಕಂಪ್ಲಿ ತಾಲೂಕಿನ 10 ಗ್ರಾ.ಪಂ.ಗಳ 100 ಮತಗಟ್ಟೆಗಳ ಪೈಕಿ 93 ಮತಗಟ್ಟೆಗಳಲ್ಲಿ ಚುನಾವಣೆ ನಡೆಯಲಿದ್ದು, ಇನ್ನೂ 07 ಮತಗಟ್ಟೆಗಳಲ್ಲಿ ಅವಿರೋಧ/ಬಹಿಷ್ಕರಿಸಿದ ಕಾರಣದಿಂದ ಮತದಾನ ಪ್ರಕ್ರಿಯೆ ನಡೆಯುತ್ತಿಲ್ಲ. 29 ಸದಸ್ಯರು ಈಗಾಗಲೇ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇನ್ನುಳಿದ 184 ಸದಸ್ಯ ಸ್ಥಾನಗಳಿಗೆ 437 ಅಭ್ಯರ್ಥಿಗಳು ತೀವ್ರ ಪೈಪೋಟಿಗಿಳಿದಿದ್ದು, ಮತದಾರ ಯಾರಿಗೆ ಮಣೆಹಾಕುತ್ತಾನೋ ಕಾದು ನೋಡಬೇಕಿದೆ.

ಬಳ್ಳಾರಿ ಜಿಲ್ಲೆಯ 5 ತಾಲೂಕುಗಳ 87 ಗ್ರಾ.ಪಂ.ಗಳ ಪೈಕಿ 85 ಗ್ರಾ.ಪಂ.ಗಳಲ್ಲಿ ಚುನಾವಣೆ ನಡೆಯುತ್ತಿದೆ. ಒಟ್ಟು 818 ಮತಗಟ್ಟೆಗಳ ಪೈಕಿ 117 ಮತಗಟ್ಟೆಗಳಲ್ಲಿ ಅವಿರೋಧ/ಬಹಿಷ್ಕರಿಸಿದ ಕಾರಣದಿಂದ ಮತದಾನ ಪ್ರಕ್ರಿಯೆ ನಡೆಯುತ್ತಿಲ್ಲ ಎಂದು ಜಿಲ್ಲಾಡಳಿತ ತಿಳಿಸಿದೆ. ಮೊದಲ ಹಂತದ ಚುನಾವಣಾ ಪ್ರಕ್ರಿಯೆಗಾಗಿ 3,600 ಮತಗಟ್ಟೆ ಹಾಗೂ ಸಹಾಯಕ ಮತಗಟ್ಟೆ ಅಧಿಕಾರಿಗಳನ್ನು ಜಿಲ್ಲಾಡಳಿತ ನಿಯುಕ್ತಿಗೊಳಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.