ETV Bharat / city

ಬಾಲ್ಯವಿವಾಹ ಮಾಡಿದ ಪೋಷಕರು ಹಾಗೂ ವರನ ವಿರುದ್ಧ ಎಫ್ಐಆರ್! - ಬಳ್ಳಾರಿ ಬಾಲ್ಯ ವಿವಾಹ ಪ್ರಕರಣ

ಅಪ್ರಾಪ್ತೆಯರನ್ನು ವಿವಾಹ ಬಂಧನಕ್ಕೆ ದೂಡಿದ ಪೋಷಕರು ಹಾಗೂ, ಬಾಲಕಿಯರನ್ನು ವಿವಾಹವಾದ ಕಾರಣಕ್ಕೆ ಇಬ್ಬರು ಪುರುಷರ ವಿರುದ್ಧ ಬಳ್ಳಾರಿಯ ಕಂಪ್ಲಿ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್​ ದಾಖಲಾಗಿದೆ.

child-marriage
ಬಾಲ್ಯವಿವಾಹ
author img

By

Published : Jul 22, 2020, 7:43 PM IST

ಬಳ್ಳಾರಿ: ಜಿಲ್ಲೆಯ ಕಂಪ್ಲಿ ತಾಲೂಕಿನ ಜೌಕು ಹಾಗೂ ಹಂಪಾದೇವನಹಳ್ಳಿಯ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಅಪ್ರಾಪ್ತೆಯರಿಗೆ ಬಾಲ್ಯ ವಿವಾಹ ಮಾಡಿದ ಪೋಷಕರು ಹಾಗೂ ವರನ ವಿರುದ್ಧ ಹೊಸಪೇಟೆ ಸಿಡಿಪಿಒ ಅಮರೇಶ್, ಕಂಪ್ಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಪ್ರಕರಣ 1 :

ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ವಿಠಲಾಪುರ ಗ್ರಾಮದ ಸ್ವಾಮಿ (20 ವರ್ಷ), 14 ವರ್ಷದ ಬಾಲಕಿಯನ್ನು 15 ಜುಲೈ 2020 ರಂದು ಬಳ್ಳಾರಿಯ ಕೊರ್ಲಗುಂದಿ ಗ್ರಾಮದ ಶ್ರೀ ಅಮೃತೇಶ್ವರ ದೇವಸ್ಥಾನದಲ್ಲಿ ಮದುವೆಯಾಗಿದ್ದಾನೆ. ಈ ಬಾಲ್ಯ ವಿವಾಹವನ್ನು ಬಾಲಕಿಯ ತಂದೆ ಷಣ್ಮುಖ ಹಾಗೂ ತಾಯಿ ನಿರ್ಮಲ ಸೇರಿ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಕಂಪ್ಲಿ ಪೊಲೀಸ್ ಠಾಣೆಯಲ್ಲಿ ಹೊಸಪೇಟೆಯ ಸಿಡಿಪಿಒ ಅಧಿಕಾರಿ ಅಮರೇಶ್ ದೂರು ದಾಖಲಿಸಿದ್ದಾರೆ.

ಪ್ರಕರಣ 2:

ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ತೆಕ್ಕಲಕೋಟೆ ಗ್ರಾಮದ ಶಂಕರ, 14 ವರ್ಷದ ಬಾಲಕಿಯನ್ನು 29 ಮೇ 2020 ರಂದು ತೆಕ್ಕಲಕೋಟೆ ಗ್ರಾಮದ ತನ್ನ ಮನೆಯಲ್ಲಿ ಮದುವೆಯಾಗಿದ್ದಾನೆ. ಬಾಲಕಿಯ ತಂದೆ ಚಾನಾಳ್ ಈರಣ್ಣ ಮತ್ತು ತಾಯಿ ಸುಂಕಮ್ಮ ಈ ವಿವಾಹಕ್ಕೆ ಕಾರಣರಾಗಿದ್ದಾರೆ. ಆದ್ದರಿಂದ ಬಾಲ್ಯ ವಿವಾಹ ಮಾಡಿದ ಕಾರಣ ಕಂಪ್ಲಿ ಪೊಲೀಸ್ ಠಾಣೆಯಲ್ಲಿ ಹೊಸಪೇಟೆಯ ಸಿಡಿಪಿಒ ಅಧಿಕಾರಿ ಅಮರೇಶ್ ದೂರು ದಾಖಲಿಸಿದ್ದಾರೆ. ಸದ್ಯ ಈ ಎರಡು ಪ್ರಕರಣ ಸಂಬಂಧ ಠಾಣೆಯಲ್ಲಿ ಎಫ್​ಐಆರ್​ ದಾಖಲಾಗಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.