ಬಳ್ಳಾರಿ: ಗಣಿನಾಡಲ್ಲಿ ದಿನೇ ದಿನೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಫೀವರ್ ಕ್ಲಿನಿಕ್ ಬಸ್ ಸೇವೆ ಆರಂಭಿಸಿದೆ.
ಅಂದಾಜು ಲಕ್ಷಕ್ಕೂ ಅಧಿಕ ಮೊತ್ತದ ಹಣ ವ್ಯಯಿಸಿ ಈ ಫೀವರ್ ಕ್ಲಿನಿಕ್ ಬಸ್ ನಿರ್ಮಿಸಲಾಗಿದೆ. ಇಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಪರಿಶೀಲಿಸಿ, ಸಾರ್ವಜನಿಕ ಬಳಕೆಗೆ ಚಾಲನೆ ನೀಡಲಿದ್ದಾರೆ.
ಈಶಾನ್ಯ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ಚಂದ್ರಶೇಖರ ಈಟಿವಿ ಭಾರತದೊಂದಿಗೆ ಮಾತನಾಡಿ, ಜಿಲ್ಲಾಡಳಿತದ ಸೂಚನೆ ಮೇರೆಗೆ ಈ ಫೀವರ್ ಕ್ಲಿನಿಕ್ ಬಸ್ ನಿರ್ಮಿಸಲಾಗಿದೆ. ಕಂಟೈನ್ಮೆಂಟ್ ಝೋನ್ ಹಾಗೂ ಸೀಲ್ ಡೌನ್ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸಲಿದೆ ಎಂದರು.
ಈ ಬಸ್ ಒಳಗೆ ಅತ್ಯಾಧುನಿಕ ಸ್ವ್ಯಾಬ್ ಟೆಸ್ಟಿಂಗ್ ಸಾಧನ ಹಾಗೂ ಫೀವರ್ ಕ್ಲಿನಿಕ್ ನಿರ್ಮಿಸಲಾಗಿದ್ದು, ಸ್ಯಾನಿಟೈಸರ್ ಹಾಗೂ ಮಾಸ್ಕ್ ಬಳಕೆ ಕಡ್ಡಾಯಗೊಳಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.