ETV Bharat / city

ಬಳ್ಳಾರಿಯಲ್ಲಿ ಸೋಂಕಿನಿಂದ ಗುಣಮುಖರಾದ 8 ಮಂದಿ ಆಸ್ಪತ್ರೆಯಿಂದ ಬಿಡುಗಡೆ.. - ಬಳ್ಳಾರಿ ಕೋವಿಡ್-19 ಆಸ್ಪತ್ರೆಯಿಂದ ಬಿಡುಗಡೆ

ಸಮರ್ಪಕ ಚಿಕಿತ್ಸೆ ಕೊಟ್ಟರು ಮತ್ತು ಸ್ಥೈರ್ಯ ಕಳೆದುಕೊಂಡಿದ್ದ ನಮ್ಮನ್ನು ಮಾನಸಿಕವಾಗಿಯೂ ಸಜ್ಜುಗೊಳಿಸಿದರು ಮತ್ತು ಗುಣಮಟ್ಟದ ಆಹಾರ ಒದಗಿಸಿದರು. ವೈದ್ಯರು ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿಯ ಋಣ ನಾವೆಂದು ಮರೆಯಲ್ಲ..

Eight people cured infection released Bellary covid Hospital
ಸೋಂಕಿನಿಂದ ಎಂಟು ಮಂದಿ ಗುಣಮುಖ, ಬಳ್ಳಾರಿ ಕೋವಿಡ್-19 ಆಸ್ಪತ್ರೆಯಿಂದ ಬಿಡುಗಡೆ
author img

By

Published : Jun 5, 2020, 8:29 PM IST

ಬಳ್ಳಾರಿ: ಕೋವಿಡ್‌-19 ಸೋಂಕಿನಿಂದ ಗುಣಮುಖರಾಗಿರುವ 8 ಮಂದಿಯನ್ನ ಜಿಲ್ಲಾಸ್ಪತ್ರೆಯಿಂದ ಇಂದು ಮಧ್ಯಾಹ್ನ ಬಿಡುಗಡೆ ಮಾಡಲಾಯಿತು.

ಸೋಂಕಿನಿಂದ ಎಂಟು ಮಂದಿ ಗುಣಮುಖ..

ಜಿಲ್ಲಾಸ್ಪತ್ರೆಯಲ್ಲಿ 10 ಮಂದಿ ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಬ್ಬರು ಸಾವನ್ನಪ್ಪಿದ್ದು, ಇದುವರೆಗೆ 43 ಜನರು ಬಿಡುಗಡೆಯಾದಂತಾಗಿದೆ. ಗುಣಮುಖರಾಗಿ ಕೋವಿಡ್-19 ಆಸ್ಪತ್ರೆಯಿಂದ ಬಿಡುಗಡೆಯಾದವರ ವಿವರ: ಪಿ-2154 46 ವರ್ಷದ (ಪುರುಷ) ಮಿಲ್ಲರ್ ಪೇಟೆಯವರಾಗಿದ್ದು, ಮಹಾರಾಷ್ಟ್ರದಿಂದ ವಲಸೆ ಬಂದಿರುತ್ತಾರೆ. ಪಿ-2775 22 ವರ್ಷದ (ಪುರುಷ) ಸೋಮ ಸಮುದ್ರದವರಾಗಿದ್ದು, ಮಹಾರಾಷ್ಟ್ರದಿಂದ ವಲಸೆ ಬಂದಿರುತ್ತಾರೆ.

ಪಿ-2773 (38 ವರ್ಷದ ಮಹಿಳೆ), ಪಿ-2276 (20 ವರ್ಷದ ಮಹಿಳೆ), ಪಿ-2277 (5 ವರ್ಷದ ಹೆಣ್ಣುಮಗು), ಪಿ-2779 (24 ವರ್ಷದ ಪುರುಷ), ಪಿ-2780 (24 ವರ್ಷದ ಮಹಿಳೆ) ಈ ಐದು ಜನ ಮೋಕಾದ ತಂಬ್ರಳ್ಳಿವರಾಗಿದ್ದು, ಮಹಾರಾಷ್ಟ್ರದಿಂದ ವಲಸೆ ಹೊಂದಿರುವ ಟ್ರಾವಲ್ ಹಿಸ್ಟರಿ ಇದೆ. ಪಿ-2781 35ವರ್ಷದ (ಪುರುಷ) ಇವರು ಮೂಲತಃ ಕೂಡ್ಲಿಗಿಯವರಾಗಿದ್ದು, ರಾಜಸ್ತಾನದ ಟ್ರಾವೆಲ್ ಹಿಸ್ಟರಿ ಹೊಂದಿರುತ್ತಾರೆ. ಜಿಲ್ಲಾಸ್ಪತ್ರೆ ವೈದ್ಯ ಡಾ.ಎನ್.ಬಸರೆಡ್ಡಿ ಅವರು ಗುಣಮುಖರಾಗಿ ಮನೆಯತ್ತ ತೆರಳಲು ಸಿದ್ದರಾಗಿ ನಿಂತಿದ್ದವರಿಗೆ ಹೂಗುಚ್ಛ, ಹಣ್ಣು-ಹಂಪಲು ನೀಡಿ ಚಪ್ಪಾಳೆ ತಟ್ಟಿ ಅಭಿನಂದಿಸಿದರು. ಈ ವೇಳೆಗೆ ಕಂದಾಯ ಇಲಾಖೆಯಿಂದ ನೀಡಲಾಗುವ ಪಡಿತರ ಕಿಟ್ ಕಳುಹಿಸಿ ಕೊಡಲಾಯಿತು.ಜಿಲ್ಲಾ ಶಸ್ತ್ರಚಿಕಿತ್ಸಕ ಎನ್.ಬಸರೆಡ್ಡಿ

ಮಾತನಾಡಿ, ಇವರು ಬಂದಾಗ ಸಾಕಷ್ಟು ಭಯಭೀತರಾಗಿದ್ದರು, ಇವರಿಗೆ ಆಪ್ತ ಸಮಾಲೋಚನೆ ಮಾಡಿ ಅವರಲ್ಲಿದ್ದ ಭಯ ಹೋಗಲಾಡಿಸಿದೆವು. ಆತ್ಮಸ್ಥೈರ್ಯವನ್ನು ತುಂಬಿ ಅವರನ್ನು ಗುಣಮುಖರಾಗಲು ಬಹಳ ಶ್ರಮವಹಿಸಿದೆವು, ಈ 8 ಮಂದಿ ಒಂದೇ ಬಾರಿಗೆ ಗುಣಮುಖರಾಗಿರುವುದು ನಮಗೆ ತುಂಬಾ ಸಂತೋಷವಾಗಿದ್ದು ಇನ್ನು ಉಳಿದವರನ್ನು ಆದಷ್ಟು ಬೇಗ ಗುಣಮುಖರನ್ನಾಗಿ ಮಾಡಲು ಪ್ರಯತ್ನಿಸುತ್ತೇವೆ ಎಂದರು. ಗುಣಮುಖರಾಗಿ ಹೊರಬಂದವರಲ್ಲಿ ಕೆಲವರು ಮಾತನಾಡಿ, ಆಸ್ಪತ್ರೆಗೆ ದಾಖಲಾಗಿ ಬಂದಾಗಿನಿಂದ ಇಲ್ಲಿಯವರೆಗೆ ಚೆನ್ನಾಗಿ ನೋಡಿಕೊಂಡರು.

ಸಮರ್ಪಕ ಚಿಕಿತ್ಸೆ ಕೊಟ್ಟರು ಮತ್ತು ಸ್ಥೈರ್ಯ ಕಳೆದುಕೊಂಡಿದ್ದ ನಮ್ಮನ್ನು ಮಾನಸಿಕವಾಗಿಯೂ ಸಜ್ಜುಗೊಳಿಸಿದರು ಮತ್ತು ಗುಣ ಮಟ್ಟ ಆಹಾರ ಒದಗಿಸಿದರು. ವೈದ್ಯರು ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿಯ ಋಣ ನಾವೆಂದು ಮರೆಯಲ್ಲ ಎಂದರು. ಕೋವಿಡ್ ನೋಡಲ್ ಅಧಿಕಾರಿ ಡಾ.ಯೋಗಾನಂದರೆಡ್ಡಿ, ಡಾ.ನಿಖಿಲ್, ಡಾ.ಶಂಕರ ನಾಯಕ್, ಡಾ.ಪ್ರಕಾಶ, ಡಾ.ಉದಯ ಶಂಕರ್, ಡಾ,ದೈವೀಕ್, ಶುಶ್ರೂಷಾ ಅಧೀಕ್ಷಕಿ ಶಾಂತಾಬಾಯಿ, ಡಾ.ಚಿತ್ರಶೇಖರ, ಲ್ಯಾಬ್ ಟೆಕ್ನಿಷಿಯನ್ಸ್, ಎಕ್ಸ್-ರೇ, ಡಿ-ಗ್ರೂಪ್ ಸಿಬ್ಬಂದಿ ಸೇರಿದಂತೆ ಆಸ್ಪತ್ರೆಯ ಇತರೆ ಸಿಬ್ಬಂದಿ ಇದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.