ETV Bharat / city

ಖಾಸಗಿ ಶಾಲೆಗಳ ಲಾಬಿಗೆ ಬಗ್ಗುವಂತಹ ಮನಸ್ಥಿತಿ ನನಗೆ ಬಂದಿಲ್ಲ: ಸಚಿವ ಸುರೇಶ್ ​ಕುಮಾರ್ - ಶಿಕ್ಷಣ ಸಚಿವ ಎಸ್.ಸುರೇಶ್​ ಕುಮಾರ್​

ನನ್ನ ತಾಯಿ ಸರ್ಕಾರಿ ಶಾಲೆಯ ಶಿಕ್ಷಕಿಯಾಗಿದ್ದು, ಆಕೆಯ ಋಣದಿಂದಲೇ ನಾನು ಇಲ್ಲಿ ಕುಳಿತುಕೊಳ್ಳೋಕೆ ಅರ್ಹತೆ ಹೊಂದಿರುವೆ. ಹಾಗಾಗಿ ಖಾಸಗಿ ಶಾಲೆಗಳ ಲಾಬಿಗೆ ಬಗ್ಗುವಂತಹ ಮನಸ್ಥಿತಿ ನನಗೆ ಬಂದಿಲ್ಲ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್​ ಕುಮಾರ್​ ಹೇಳಿದ್ದಾರೆ.

Education minister sureshkumar statement
ಖಾಸಗಿ ಶಾಲೆಗಳ ಲಾಭಿಗೆ ಬಗ್ಗುವಂತಹ ಮನಸ್ಥಿತಿ ನನಗೆ ಬಂದಿಲ್ಲ: ಸಚಿವ ಸುರೇಶ್ ​ಕುಮಾರ್
author img

By

Published : Jun 6, 2020, 6:52 PM IST

ಬಳ್ಳಾರಿ: ನನ್ನ ತಾಯಿಯ ಋಣ ತೀರಿಸಬೇಕಿದೆ. ಯಾಕಂದ್ರೆ ಆಕೆ ಶಿಕ್ಷಕಿಯಾಗಿದ್ದಳು. ಆಕೆಯ ಋಣಭಾರದಿಂದ ಇಲ್ಲಿ ಕೂತಿರುವೆ. ಹೀಗಾಗಿ ಖಾಸಗಿ ಶಾಲೆಗಳ ಲಾಬಿಗೆ ಬಗ್ಗುವಂತಹ ಮನಸ್ಥಿತಿ ಇದುವರೆಗೂ ನನಗೆ ಬಂದಿಲ್ಲ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್​ ಕುಮಾರ್​ ಹೇಳಿದ್ದಾರೆ.

ಖಾಸಗಿ ಶಾಲೆಗಳ ಲಾಬಿಗೆ ಬಗ್ಗುವಂತಹ ಮನಸ್ಥಿತಿ ನನಗೆ ಬಂದಿಲ್ಲ: ಸಚಿವ ಸುರೇಶ್ ​ಕುಮಾರ್

ಬಳ್ಳಾರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷಾ ಪೂರ್ವ ಸಿದ್ಧತೆ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನಗೆ ಶಿಕ್ಷಣ ಇಲಾಖೆ, ರಾಜ್ಯ ಸರ್ಕಾರ ಕೊಟ್ಟಿರೋದು ಋಣವನ್ನ ತೀರಿಸೋಕೆ ಒಂದು ಅವಕಾಶ. ಯಾಕಂದ್ರೆ ನನ್ನ ತಾಯಿ ಸರ್ಕಾರಿ ಶಾಲೆಯ ಶಿಕ್ಷಕಿಯಾಗಿದ್ದು, ಆಕೆಯ ಋಣದಿಂದಲೇ ನಾನು ಇಲ್ಲಿ ಕುಳಿತುಕೊಳ್ಳೋಕೆ ಅರ್ಹತೆ ಹೊಂದಿರುವೆ. ಹಾಗಾಗಿ ನನಗೆ ಖಾಸಗಿ ಶಾಲೆಗಳ ಲಾಬಿ, ಶೂ, ಪಠ್ಯಪುಸ್ತಕ ಅಥವಾ ಬ್ಯಾಗ್ ಲಾಬಿಗಾಗಲಿ ಬಗ್ಗುವಂತಹ ಮನಸ್ಥಿತಿ ದೇವರ ದಯೆಯಿಂದ ಬಂದಿಲ್ಲ ಎಂದರು.

ಲಾಕ್​ಡೌನ್​ನಿಂದಾಗಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಮುಂದೂಡಲಾಯಿತು. ಕೇಂದ್ರ ಗೃಹ ಸಚಿವಾಲಯ ಸಮ್ಮತಿ ನೀಡಿದ ಹಿನ್ನೆಲೆಯಲ್ಲಿ ಇದೀಗ ಪರೀಕ್ಷೆ ನಡೆಸಲು ರಾಜ್ಯ ಸರ್ಕಾರ ಮುಂದಾಗಿದೆ. ಹೈಕೋರ್ಟ್​ನಲ್ಲಿ ಪಿಐಎಲ್ ಸಹ ಇತ್ಯರ್ಥ ಆಗಿದೆ. ಈ ಪರೀಕ್ಷೆಯಲ್ಲಿ ಮಕ್ಕಳ ಸುರಕ್ಷತೆಗೆ ನಮ್ಮ ಮೊದಲ ಆದ್ಯತೆ ನೀಡಲಾಗುತ್ತೆ. ಸಾಮಾಜಿಕ ಅಂತರ ಕಾಯ್ದುಕೊಂಡೇ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಸಲು ನಿರ್ಧರಿಸಲಾಗಿದೆ. ಎರಡು ಡೆಸ್ಕ್​ಗಳ ನಡುವೆ 3 ಅಡಿ ಅಂತರ ಕಾಯ್ದುಕೊಳ್ಳಲಾಗುವುದು. ಪ್ರತಿ ಮಗು ಮಾಸ್ಕ್ ಹಾಕಿಕೊಂಡು ಪರೀಕ್ಷೆ ಬರೆಯುವಂತೆ ನೋಡಿಕೊಳ್ಳಲು ಈಗಾಗಲೇ ಶಿಕ್ಷಣ ಇಲಾಖೆಗೆ ಸೂಚನೆ ನೀಡಲಾಗಿದೆ.

ಪ್ರತಿ ಕೊಠಡಿಯಲ್ಲಿ 18-24 ಮಕ್ಕಳಿಗೆ ಆಸನದ ವ್ಯವಸ್ಥೆ ಮಾಡಲಾಗಿದೆ. ವಿದ್ಯಾರ್ಥಿಗಳಿಗೆ ಪ್ರತಿದಿನ ಆರೋಗ್ಯ ತಪಾಸಣೆ ಮಾಡಲಾಗುವುದು. ಜ್ವರ, ಕೆಮ್ಮು-ನೆಗಡಿ ಇದ್ದ ಮಕ್ಕಳಿಗೆ ಪ್ರತ್ಯೇಕ ಕೊಠಡಿಯ ವ್ಯವಸ್ಥೆ ಮಾಡಲಾಗುವುದು. ಪ್ರತಿ ವಿದ್ಯಾರ್ಥಿಗೆ ಸ್ಯಾನಿಟೈಸರ್ ಮಾಡುವುದು ಕಡ್ಡಾಯ. ಮಗು ಕೊಠಡಿ ಪ್ರವೇಶ ಮಾಡುವಾಗಲೂ ಕೂಡ ಸಾಮಾಜಿಕ ಅಂತರ ಕಾಯ್ದುಕೊಳ್ಳಲಾಗುವುದು. ಮಕ್ಕಳ ಜೊತೆಯಲ್ಲಿ ಪಾಲಕರು ಗುಂಪು ಗುಂಪಾಗಿ ಬರದಂತೆ ತಿಳಿಸಲಾಗಿದೆ.

ಪ್ರತಿ ವಿದ್ಯಾರ್ಥಿಯ ಮನೆಯ ದೂರ, ಶಾಲೆಯ ಅಂತರ ಎಷ್ಟು ಇದೆ ಎನ್ನುವುದರ ಬಗ್ಗೆ ಮಾಹಿತಿ ಪಡೆಯಲಾಗಿದೆ. ಮಕ್ಕಳಿಗೆ ಉಚಿತವಾಗಿ ಸೂಕ್ತ ಸಾರಿಗೆ ವ್ಯವಸ್ಥೆ ಮಾಡಲಾಗುವುದು. ಜೂನ್ 25ರಿಂದ ಜುಲೈ 4ಕ್ಕೆ ಎಸ್ಸೆಸ್ಸೆಲ್ಸಿ ಪರೀಕ್ಷೆ ಮುಗಿಯಲಿದೆ. ಜುಲೈ ಕೊನೆಯ ವಾರದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಫಲಿತಾಂಶ ಕೊಡಲು ವ್ಯವಸ್ಥೆ ಮಾಡಲಾಗುವುದು. ವಲಸೆ ಕಾರ್ಮಿಕರ ಮಕ್ಕಳಿಗೆ ಹತ್ತಿರದ ಸೆಂಟರ್​ನಲ್ಲಿ ಪರೀಕ್ಷೆ ಬರೆಯಲು ಅವಕಾಶ ಮಾಡಲಾಗಿದೆ. ಪ್ರತಿ ವರ್ಷದಂತೆ ಈ ವರ್ಷವೂ ಪೂರಕ ಪರೀಕ್ಷೆ ನಡೆಸಲಾಗುವುದು. ಈ ವರ್ಷದ ಶಾಲೆ ಪ್ರಾರಂಭ ಮಾಡಲು ಈವರೆಗೂ ಯಾವುದೇ ಆದೇಶ ಮಾಡಿಲ್ಲ. ಮೊದಲು ಎಸ್​ಡಿಎಂಸಿ ಸದಸ್ಯರು, ಪಾಲಕರ ಸಭೆ ನಡೆಸಿ ಅವರ ಅಭಿಪ್ರಾಯ ಪಡೆದು ಶಾಲೆ ಆರಂಭಿಸುವ ಬಗ್ಗೆ ಚಿಂತನೆ ನಡೆಸಲಾಗುವುದು ಎಂದರು.

ಆನ್​ಲೈನ್ ಕ್ಲಾಸ್ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ. ಮಕ್ಕಳ ಮೇಲೆ ದುಷ್ಟಪರಿಣಾಮ ಆಗುತ್ತೆ ಎಂಬುದು ಎಲ್ಲರ ಅಭಿಪ್ರಾಯ. ಎಲ್​ಕೆಜಿ ಲೋಯರ್ ಕ್ಲಾಸ್​ಗಳನ್ನು ಆರಂಭ ಮಾಡಲು ಮಕ್ಕಳ ಮತ್ತು ಪೋಷಕರ ವಿರೋಧವಿದೆ. ಈ ಚಿಂತನೆ ಶಿಕ್ಷಣ ಇಲಾಖೆಯಲ್ಲೂ ಇದೆ. ಹೀಗಾಗಿ ಈ ಬಗ್ಗೆ ಇನ್ನೂ ಅಭಿಪ್ರಾಯ ತೆಗೆದುಕೊಂಡಿಲ್ಲ. ಲೋಯರ್ ಕ್ಲಾಸ್​ನಲ್ಲಿ ಆನ್​ಲೈನ್ ಶಿಕ್ಷಣ ನೀಡಲು ನಾವೂ ಒಪ್ಪಲ್ಲ. ಸೋಮವಾರ ಆನ್​ಲೈನ್ ಕುರಿತಾದ ಶಿಕ್ಷಣದ ಬಗ್ಗೆ ಆದೇಶ ಮಾಡಲಾಗುವುದು ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.