ETV Bharat / city

ಲಂಚ ಪ್ರಕರಣ: ಶಿಕ್ಷಕನಿಗೆ ನಾಲ್ಕು ವರ್ಷ ಜೈಲು, ದಂಡ ವಿಧಿಸಿದ ಜಿಲ್ಲಾ ನ್ಯಾಯಾಲಯ - ಈಟಿವಿ ಭಾರತ ಕನ್ನಡ

2014 ಜುಲೈ 26ರಂದು ದಾವಣಗೆರೆ ಭಗತ್‌ಸಿಂಗ್ ನಗರದ ಶ್ರೀ ಜ್ಞಾನಜ್ಯೋತಿ ಸೇವಾ ಆಡಳಿತಾಧಿಕಾರಿ ಪಿ.ಇ. ನರಸಿಂಹ ಅವರು ಸಹಶಿಕ್ಷಕ ಎಂ.ಬಸವರಾಜ ವಿರುದ್ಧ ದೂರು ನೀಡಿದ್ದರು.

District Session Court
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ
author img

By

Published : Aug 1, 2022, 9:17 AM IST

ಬಳ್ಳಾರಿ: ಶಾಲಾ ಮಕ್ಕಳಿಗೆ ಆಶಾಕಿರಣ ಕೇಂದ್ರದಿಂದ ವಿವಿಧ ಸವಲತ್ತು ಒದಗಿಸುವ ಗುತ್ತಿಗೆದಾರರಿಗೆ ಬಿಲ್ ನೀಡಲು ಲಂಚ ಪಡೆಯುವಾಗ ಲೋಕಾಯುಕ್ತರ ಬಲೆಗೆ ಬಿದ್ದಿದ್ದ ಶಿಕ್ಷಕನಿಗೆ ಪ್ರಧಾನ ಜಿಲ್ಲಾ ಮತ್ತು ಸತ್ರ (ವಿಶೇಷ) ನ್ಯಾಯಾಲಯ 4 ವರ್ಷ ಕಠಿಣ ಶಿಕ್ಷೆ ಮತ್ತು 5 ಸಾವಿರ ರೂ. ದಂಡ ವಿಧಿಸಿ ಆದೇಶ ಹೊರಡಿಸಿದೆ.

ಸಂಡೂರು ತಾಲೂಕಿನ ಸರ್ವಶಿಕ್ಷಣ ಅಭಿಯಾನದ ವಿಷಯ ನಿರ್ವಾಹಕರು ಹಾಗೂ ಮುರಾರಿಮರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹಶಿಕ್ಷಕ ಎಂ.ಬಸವರಾಜ ಶಿಕ್ಷೆಗೆ ಗುರಿಯಾದವರು. 2014 ಜುಲೈ 26ರಂದು ದಾವಣಗೆರೆ ಭಗತ್‌ಸಿಂಗ್ ನಗರದ ಶ್ರೀ ಜ್ಞಾನಜ್ಯೋತಿ ಸೇವಾ ಆಡಳಿತಾಧಿಕಾರಿ ಪಿ.ಇ. ನರಸಿಂಹ ಅವರು ಸಹಶಿಕ್ಷಕರ ವಿರುದ್ಧ ದೂರು ನೀಡಿದ್ದರು.

ಸಂಡೂರು ತಾಲೂಕಿನ ಕೊಂಡಾಪುರ ಗ್ರಾಮದಲ್ಲಿದ್ದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2009-10ನೇ ಸಾಲಿನಲ್ಲಿ ಆಶಾಕಿರಣ ಕೇಂದ್ರವನ್ನು ನಡೆಸಲು ಶ್ರೀ ಜ್ಞಾನಜ್ಯೋತಿ ಸೇವಾ ಸಂಸ್ಥೆ ಅವರಿಗೆ ಸರ್ವಶಿಕ್ಷಣ ಅಭಿಯಾನದ ಜಿಲ್ಲಾ ಯೋಜನಾ ಸಮನ್ವಯಾಧಿಕಾರಿಗಳು ಹಾಗೂ ಉಪನಿರ್ದೇಶಕರು ಆದೇಶ ನೀಡಿದ್ದರು.

ಆಶಾಕಿರಣ ಯೋಜನೆ ಅಡಿ ಸದರಿ ಶಾಲೆಯ 25 ಜನ ಮಕ್ಕಳಿಗೆ ತಿಂಡಿ, ಊಟ, ಬಟ್ಟೆ, ಟ್ರಂಕ್, ಬೆಡ್ಡಿಂಗ್, ದೈನಂದಿನ ವಸ್ತುಗಳು, ವೈದ್ಯಕೀಯ, ಲೇಖನ ಸಾಮಾಗ್ರಿ ಖರ್ಚು, ಸ್ವಯಂ ಸೇವಕರ ಗೌರವಧನದ ರೂಪದಲ್ಲಿ ಒಟ್ಟು ರೂ. 1,87,328 ರೂ. ನೀಡಬೇಕಿತ್ತು. ಕೊನೆಯ ಬಿಲ್ 27 ಸಾವಿರ ರೂ.ಗೆ ಗ್ಯಾರಂಟಿಗಾಗಿ ನೀಡಿದ್ದ ರೂ. 8,750 ರೂ. ಚೆಕ್ ವಾಪಸ್ ನೀಡಲು 5 ಸಾವಿರ ರೂ. ಪಡೆಯುವಾಗ ಬಸವರಾಜ ಲೋಕಾಯುಕ್ತರ ಬಲೆಗೆ ಬಿದ್ದಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ಪ್ರಧಾನ ಜಿಲ್ಲಾ ಮತ್ತು ಸತ್ರ (ವಿಶೇಷ) ನ್ಯಾಯಾಲಯದ ನ್ಯಾಯಾಧೀಶರಾದ ಎಸ್‌.ಎಚ್‌. ಪುಷ್ಪಾಂಜಲಿದೇವಿ ಆದೇಶ ಹೊರಡಿಸಿದ್ದಾರೆ. ಸದರಿ ಪ್ರಕರಣವನ್ನು ಕರ್ನಾಟಕ ಲೋಕಾಯುಕ್ತದ ಬಳ್ಳಾರಿಯ ಪೊಲೀಸ್‌ ನಿರೀಕ್ಷಕರಾದ ಮಹಮ್ಮದ್ ರಫಿ, ಭೈರವಿ ಅಧಿಕಾರಿಯಾಗಿ ನಿರ್ವಹಿಸಿದ್ದು, ವಿಶೇಷ ಅಭಿಯೋಜಕರಾದ ಬಿ.ವಿ. ಬಸವರಾಜ ಅವರು ಸರ್ಕಾರದ ಪರವಾಗಿ ನ್ಯಾಯಾಲಯದಲ್ಲಿ ವಾದ ಮಂಡಿಸಿರುತ್ತಾರೆ ಎಂದು ಕರ್ನಾಟಕ ಲೋಕಾಯುಕ್ತದ ಪೊಲೀಸ್ ಲೋಕಾಯುಕ್ತ ಪೊಲೀಸ್ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ : ನಿಪ್ಪಾಣಿ ಪೊಲೀಸರಿಂದ ಭರ್ಜರಿ ಕಾರ್ಯಾಚರಣೆ: ನಾಲ್ವರ ಬಂಧನ, 41 ಬೈಕ್ ಜಪ್ತಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.