ಬಳ್ಳಾರಿ: ಜಿಲ್ಲೆಯ ಕಲ್ಲುಕಂಭ ಗ್ರಾಮದ ಪರಿಶಿಷ್ಟರ ಕಾಲೋನಿಯಲ್ಲಿ ಕಾಣಿಸಿಕೊಂಡ ವಾಂತಿ- ಭೇದಿ, ಶುಕ್ರವಾರ ಕುರುಬ ಸಮುದಾಯದವರು ನೆಲೆಸಿರುವ ಓಣಿಗೂ ವ್ಯಾಪಿಸಿರುವ ಕಾರಣ, ಡಿಸಿ ನಕುಲ್,ಸಿಇಓ ಕೆ.ನಿತೀಶಕುಮಾರ, ಡಿಎಚ್ ಡಾ. ಶಿವರಾಜ ಹೆಡೆ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಗುರುವಾರ ಬೆಳಗ್ಗೆಯಿಂದ ಗ್ರಾಮದಲ್ಲಿರುವ ಆರೋಗ್ಯ ಉಪ ಕೇಂದ್ರದಲ್ಲಿ 35ಕ್ಕೂ ಹೆಚ್ಚು ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. ಈವರೆಗೆ ಒಟ್ಟು 60 ಜನರಲ್ಲಿ ವಾಂತಿ -ಭೇದಿ ಕಾಣಿಸಿಕೊಂಡಿದೆ. ಕಲುಷಿತ ನೀರು ಸೇವನೆ ಹಿನ್ನೆಲೆ ವಾಂತಿ-ಭೇದಿ ಕಾಣಿಸಿಕೊಂಡಿರಬಹುದು ಎಂದು ಶಂಕಿಸಲಾಗಿದ್ದು, ವಾಂತಿ-ಭೇದಿ ಕಾಣಿಸಿಕೊಂಡ ಪ್ರದೇಶಗಳಿಗೆ ನೀರು ಪೂರೈಸುವ ತೊಟ್ಟಿಗಳಿಂದ ನೀರಿನ ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ವರದಿ ಬಂದ ನಂತರ ಪ್ರಕರಣಕ್ಕೆ ಸ್ಪಷ್ಟ ಕಾರಣ ತಿಳಿದು ಬರಲಿದೆ ಎಂದು ಡಾ.ಲಕ್ಷ್ಮಣ ನಾಯಕ್ ತಿಳಿಸಿದ್ದಾರೆ.
ಇನ್ನು, ಗ್ರಾಮದಲ್ಲಿ ವಾಂತಿ-ಭೇದಿ ಕಾಣಿಸಿಕೊಂಡ ಹಿನ್ನೆಲೆ, ಕುಡಿಯುವ ನೀರು ಪೂರೈಕೆ ಮಾಡುವ ತೊಟ್ಟಿಯನ್ನು ಸ್ವಚ್ಛಗೊಳಿಸಲಾಗಿದೆ. ಕಲಬೆರಕೆ ನೀರು ಸಂಗ್ರಹವಾಗುವ ಸ್ಥಳಗಳನ್ನು ಸ್ವಚ್ಛಗೊಳಿಸಲು ಕ್ರಮ ಕೈಗೊಳ್ಳಲಾಗಿದೆ.