ETV Bharat / city

ವಿಜಯನಗರ : ನದಿಗೆ ಸ್ನಾನ ಮಾಡಲು ಹೋದ ಯುವಕ ನೀರು ಪಾಲು - ಹೈದರಾಬಾದ್ ಮೂಲದ ಕಿರಣ್ ನೀರು ಪಾಲಾದ

ಹೈದರಾಬಾದ್ ಮೂಲದ ಕಿರಣ್ ಎಂಬ ವ್ಯಕ್ತಿ ಹಂಪಿಯ ಬಳಿ ತುಂಗಭದ್ರಾ ನದಿಯಲ್ಲಿ ಸ್ನಾನಕ್ಕೆ ಹೋದಾಗ ಮುಳುಗಿ ಸಾವನ್ನಪ್ಪಿದ ಘಟನೆ ನಡೆದಿದೆ..

Death of a drowning young man who went to swim in the river in Vijayanagara
ವಿಜಯನಗರ: ನದಿಗೆ ಸ್ನಾನ ಮಾಡಲು ಹೋದ ಯುವಕ ನೀರು ಪಾಲು
author img

By

Published : May 25, 2022, 7:33 PM IST

ವಿಜಯನಗರ : ಹಂಪಿ ಬಳಿ ತುಂಗಭದ್ರಾ ನದಿಯಲ್ಲಿ ಸ್ನಾನ ಮಾಡಲು ಹೋದ ಯುವಕನೊಬ್ಬ ನೀರು ಪಾಲಾಗಿದ್ದಾನೆ. ಹೈದರಾಬಾದ್ ಮೂಲದ ಕಿರಣ್ (25) ನೀರು ಪಾಲಾದ ಯುವಕ.

ನಿನ್ನೆ ನಡೆದ ಕೊಪ್ಪಳದ ಹುಲಿಗಿ ಜಾತ್ರೆಗೆ ಬಂದಿದ್ದ ಕಿರಣ್ ಕುಟುಂಬದ 12 ಜನರು ಇಂದು ಹಂಪಿ ನೋಡುವುದಕ್ಕೆ ಬಂದಿದ್ದರು. ಈ ಸಂದರ್ಭದಲ್ಲಿ ನದಿಯಲ್ಲಿ ಸ್ನಾನ ಮಾಡಲು ಹೋಗಿ ನೀರು ಪಾಲಾಗಿದ್ದಾನೆ.

ನದಿಯಲ್ಲಿ ಸ್ನಾನ ಮಾಡಲು ಹೋದ ಯುವಕ ನೀರು ಪಾಲು..

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಮತ್ತು ಸ್ಥಳೀಯರಿಂದ ಶೋಧಕಾರ್ಯ ನಡೆಸುತ್ತಿದ್ದಾರೆ. ಇದುವರೆಗೂ ಯುವಕನ ಬಗ್ಗೆ ಸುಳಿವು ಸಿಕ್ಕಿಲ್ಲ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಹಂಪಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಮಳಲಿ ಮಸೀದಿ ವಿವಾದ: ಹೆಚ್​ಡಿಕೆ ಜವಾಬ್ದಾರಿ ಯುತವಾಗಿ ನಡೆದುಕೊಳ್ಳಲಿ - ಶಾಸಕ ಭರತ್ ಶೆಟ್ಟಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.