ಬಳ್ಳಾರಿ: ಕೋವಿಡ್ -19 ಸೋಂಕು ನಿಯಂತ್ರಣ- ನಿರ್ವಹಣೆಯಲ್ಲಿ ಅವಿರತ ಸೇವೆಗೈದ ಕೊರೊನಾ ವಾರಿಯರ್ಸ್ಗೆ ಜಿಲ್ಲಾ ಉಸ್ತುವಾರಿ ಸಚಿವ ಆನಂದಸಿಂಗ್ ಸನ್ಮಾನಿಸಿ ಗೌರವಿಸಿದರು.
ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ ಅಯೋಜಿಸಿದ್ದ 74ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ನೆರವೇರಿಸಿದ ಬಳಿಕ ವೈದ್ಯಕೀಯ ಕ್ಷೇತ್ರದಲ್ಲಿ ವಿಮ್ಸ್ ನ ಅವರಳಿಕೆ ಶಾಸ್ತ್ರ ವಿಭಾಗದ ಸಹ ಪ್ರಾಧ್ಯಪಕ ಡಾ.ಎನ್.ಕಿರಣ್‍ಚಂದ್, ಜಿಲ್ಲಾ ಕ್ಷಯ ರೋಗ ನಿಯಂತ್ರಣಾಧಿಕಾರಿ ಡಾ.ವಿ.ಇಂದ್ರಾಣಿ, ಜಿಲ್ಲಾ ಮಲೇರಿಯಾ ಕಚೇರಿಯ ವೈದ್ಯಾಧಿಕಾರಿ ಡಾ.ಆರ್.ಅಬ್ದುಲ್, ಸಂಡೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿ ಡಾ.ಕುಶಾಲ್‍ರಾಜ್, ಚಿತ್ತವಾಡಗಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ಸಿ.ಬಸವರಾಜ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಹೆಚ್. ದಾಸಪ್ಪನ್ನವರ್, ಕೆ.ಎನ್.ಎನ್.ಕೆ ಕಚೇರಿಯ ಪ್ರ.ದ.ಸ ಬಿ.ಮನೋಹರ್, ರೂಪನ ಗುಡಿ ಸಮುದಾಯ ಆರೋಗ್ಯ ಕೇಂದ್ರದ ಆರೋಗ್ಯ ಅಧಿಕಾರಿ ಯು.ರಮೇಶ, ಮೋಕಾ ಸಮುದಾಯ ಆರೋಗ್ಯ ಕೇಂದ್ರದ ಆರೋಗ್ಯ ಅಧಿಕಾರಿ ಗಜಲ್ ಬಾನು, ಜಿಲ್ಲಾ ಆಸ್ಪತ್ರೆಯ ಸ್ಟಾಫ್ ನರ್ಸ್ ಕೆ.ಎಂ.ನಾಗರಾಜ, ಗ್ರೂಪ್ ಡಿ ಸಿಬ್ಬಂದಿ ಶಾಂತಕುಮಾರ, ಗುಗ್ಗರಹಟ್ಟಿಯ ಆಶಾ ಕಾರ್ಯಕರ್ತೆ ಹನುಮಂತಮ್ಮ ಅವರನ್ನ ಸನ್ಮಾನಿಸಲಾಯಿತು.
ಪೊಲೀಸ್ ಇಲಾಖೆಯ ವತಿಯಿಂದ ಬಳ್ಳಾರಿ ಗ್ರಾಮಾಂತರ ಠಾಣೆಯ ಸಹಾಯಕ ಸಬ್ ಇನ್ಸ್ ಪೆಕ್ಟರ್ ವಿ.ಹೊನ್ನಪ್ಪ, ಶಿಕ್ಷಣ ವಿಭಾಗದಲ್ಲಿ ಪೂರ್ವ ವಲಯದ ಕ್ಷೇತ್ರ ಸಮನ್ವಯಾಧಿಕಾರಿ ಎ.ಮಲ್ಲಪ್ಪ, ಪಶ್ಚಿಮ ವಲಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಶಿಕ್ಷಣ ಸಂಯೋಜಕ ಈರಣ್ಣ ಬಡೆಗೇರ ಅವರನ್ನು ಸನ್ಮಾನಿಸಲಾಯಿತು. ಜಿಲ್ಲಾ ಮಟ್ಟದಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದಿರುವ ವಿದ್ಯಾರ್ಥಿಗಳನ್ನೂ ಈ ವೇಳೆ ಸನ್ಮಾನಿಸಲಾಯಿತು.